ಇಂಗ್ಲೆಂಡಿನ ಡಾರ್ಲಿಂಗ್, ಖೈದಿಯೊಬ್ಬನಿಗೆ ಹಣ ದುರುಪಯೋಗಕ್ಕಾಗಿ ಮೂರು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಬಿಡುಗಡೆ ಆಯಿತು
., ಒಂದು ದಿನ ಅವನು ಮೇಯರ್ ಜಾನ್ ಮೋರೆಲ್ ರನ್ನು ದಾರಿಯಲ್ಲಿ ನೋಡಿದ. ತಾನು ಈ ಹಿಂದೆ ಮಾಡಿದ ಕೃತ್ಯವನ್ನು ನೆನಪಿಸಿಕೊಂಡು ಅವನಿಗೆ ಕೆಸಿವಿಸಿ ಹಾಗೂ ನಾಚಿಕೆಯಾಯಿತು. ಅವರನ್ನು ಎದುರಿಸಲಾಗದೆ ಅವರನ್ನು ನೋಡಲ್ಲವೆಬಂತೆ ವೇಗವಾಗಿ ನಡೆದನು. ತನ್ನ ನಡುಗುತ್ತಿರುವ ಕೈಗಳನ್ನು ಬೆಚ್ಚನೆಯ ಕೈಯೊಂದು ಹಿಡಿದಂತೆ ಅನಿಸಿತು. ಮೇಯರ್ ಪ್ರೇಮ ಹಾಗೂ ಅನುಕಂಪದಿಂದ “ಹಲೋ ನಿನ್ನನ್ನು ನೋಡಿ ಸಂತೋಷವಾಗುತ್ತಿದೆ. ಹೇಗಿರುವೆ” ಎಂದು ಕೇಳಿದರು ಆಗ ನಡೆದ ಸಂಗತಿಯಿಂದ ಹೊರಬರಲಾರದೆ ಚಡಪಡಿಸುತ್ತಿದ್ದ ಅವನಿಗೆ ಏನೂ ಹೇಳಲಾಗದಂತಾಗಿ ಅವರಿಬ್ಬರ ಭೇಟಿ ಹಾಗೆಯೇ ಮುಗಿಯಿತು.
ಕೆಲವು ವರ್ಷಗಳು ಕಳೆದ ನಂತರ ಜೆ.ಎಚ್.ಜೋವೆಟ್ ರ ಪ್ರಕಾರ ಇನ್ನೊಂದು ಪಟ್ಟಣದಲ್ಲಿ ಮೋರೆಲ್ ಆ ವ್ಯಕ್ತಿಯನ್ನು ಮತ್ತೆ ಭೇಟಿ ಮಾಡಿದರು. ಆದರೆ ಈ ಬಾರಿ ಆ ಯುವಕ ಸಂಪೂರ್ಣವಾಗಿ ಬದಲಾಗಿದ್ದನು. ಅವನೇ ಮೇಯರನ್ನು ನಿಲ್ಲಿಸಿ ಅವರನ್ನು ನೇರವಾಗಿ ನೋಡುತ್ತಾ ಸರ್, ನಾನು ಜೇಲಿನಿಂದ ಹೊರಬಂದ ಮೇಲೆ ನೀವು ನನಗೇನು ಮಾಡಿದ್ದೀರೋ ಅದರ ಬಗ್ಗೆ ನಾನು ಬಹಳ ಕೃತಜ್ಞ,ನಿಮಗೆ ಬಹಳ ಧನ್ಯವಾದಗಳು” ಎಂದು “ನಿನಗೇನು ನಾನು ಮಾಡಿದೆ? “ಎಂದು ಮೆಯರ್ ಕೇಳಿದರು .
ಪ್ರಶ್ನೆಗಳು :
1. ಖೈದಿಯ ಉತ್ತರವೇನಾಗಿತ್ತು?
2. ಈ ಕಥೆಯ ನೀತಿ ಯೇನು?
ಉತ್ತರಗಳು :
1. ನಾನು ಮಾಡಿದ ಅಪಾರದಕ್ಕಾಗಿ ಇಡೀ ವಿಶ್ವವು ನನ್ನ ಬೆನ್ನು ತೋರಿಸಿದ್ದಾಗ ನೀವು ನನ್ನನ್ನು ಮನುಷ್ಯನೆಂದುದು ಅಂಗೀಕರಿಸಿದಿರಿ. ನನಗೆ ಯಾರು ನನ್ನವರೆಂದು ಇಲ್ಲದಿದ್ದಾಗ ನನ್ನ ಕೈಹಿಡಿದಿರಿ. ನಾನು ಈಗ ಏನೇ ಆಗಿದ್ದರೂ ಅದು ಆ ದಿನ ನೀವು ನನ್ನ ಬಳಿ ಬಂದು ಆಡಿದ ದಯಯೆ ಮಾತುಗಳಿಂದ.ಇದು ನಿಜಕ್ಕೂ ನನ್ನ ಜೀವನವನ್ನು ಬದಲಿಸಿದೆ. ನಿಮಗೆ ನಾನು ಬಹಳ ಕೃತಜ್ಞ ಎಂದು ಆ ವ್ಯಕ್ತಿ ಹೇಳಿದರು.
2. ಒಂದು ದಯೆಯ ಮಾತು, ಪ್ರೀತಿಯ ಅಪ್ಪುಗೆ ಮತ್ತು ನಿಷ್ಕಲ್ಮಶ ನಗುವು ಬದುಕನ್ನು ಸಂಪೂರ್ಣವಾಗಿ ಬದಲಾಯಿಸುವುದು ಮತ್ತು ಬಹಳ ಭಿನ್ನತೆಯನ್ನು ಉಂಟುಮಾಡುವುದು. ಬೇರೆಯವರ ಬದುಕಿನಲ್ಲಿ ಭಿನ್ನತೆಯನ್ನು ಉಂಟುಮಾಡುವುದು ಶಕ್ತಿ ನಮ್ಮಲ್ಲಿದೆ.ಅದನ್ನು ಸಾಧ್ಯವಾದಷ್ಟು ಬಾರಿ ಬಳಸಲು ನಾವು ಪಣತೊಡೋಣ.