ಮನೆ ಸುದ್ದಿ ಜಾಲ ಭಾರತೀಯ ಸೈನಿಕರಿಗೆ ಬಲ ಬರಲಿ ಎಂದು ಮಂದ್ಯದಲ್ಲಿ ವಿಶೇಷ ಪೂಜೆ: ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ...

ಭಾರತೀಯ ಸೈನಿಕರಿಗೆ ಬಲ ಬರಲಿ ಎಂದು ಮಂದ್ಯದಲ್ಲಿ ವಿಶೇಷ ಪೂಜೆ: ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು

0

ಮಂಡ್ಯ: ಕೆರಗೋಡು ಗ್ರಾಮದ ಶ್ರೀ ದೈತಮ್ಮ ದೇವಾಲಯದಲ್ಲಿ  ಬಿಜೆಪಿ ಕಾರ್ಯಕರ್ತರು ಭಾರತೀಯ ಸೈನಿಕರಿಗೆ ಹೆಚ್ಚಿನ ಬಲ ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.

ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಭೀಮೇಶ್ ಮಾತನಾಡಿ ಪಹಲ್ಗಾಮ್ ನಲ್ಲಿ ನಡೆದ  ಹಿಂದುಗಳ ನರಮೇಧವನ್ನು ಖಂಡಿಸಿ ಆ ಕುಟುಂಬದ ಸಿಂಧೂರವನ್ನು ಅಳಿಸಿದ ಪ್ರತಿರೋಧವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ ಪಾಕಿಸ್ತಾನ ಸೇನೆಗೆ ಪ್ರತಿ ದಾಳಿ ನಡೆಸುತ್ತಿದೆ ಪಾಕಿಸ್ತಾನ ಸೇನೆಯ ಡ್ರೋನ್ ಹಾಗೂ ಕ್ಷಿಪಣಿಯನ್ನು ಆಕಾಶದಲ್ಲಿಯೇ ಒಡೆದುರುಳಿಸಿದೆ ಈ ದೈತಮ್ಮ ಕೃಪೆ ಭಾರತದ ಸೈನಿಕರ ಮೇಲೆ ಇರಲಿ ಎಂದು ಸಿಂಧೂರ ಪೂಜೆ ನಡೆಸಿದ್ದೇವೆ ಎಂದರು ಶಿವಕುಮಾರ್ ಆರಾಧ್ಯ ಮಾತನಾಡಿ ನಮ್ಮ ಎದುರಾಳಿ ಪಾಕಿಸ್ತಾನ  ಸೈನಿಕರಿಗೆ ತಕ್ಕ ಪಾಠವನ್ನು ಕಲಿಸಿ ಪಾಕಿಸ್ತಾನ ಸೇನೆಯ ಪ್ರಯತ್ನ ವಿಫಲಗೊಳಿಸಿದೆ ಭಾರತೀಯ ಸೇನೆಗೆ ಮತ್ತಷ್ಟು ಬಲ ಬರಲಿ ಎಂದು ಶಕ್ತಿ ದೇವತೆ ಶ್ರೀ ದೈತಮ್ಮ ದೇವರಲ್ಲಿ ಮೊರೆ ಹೋಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಡಿ ಕೆ ಶಿವಕುಮಾರ್. ಕೀಲಾರ ಮಧು. ಯೋಗಾನಂದ. .ವಿನೋಬ್. ನಾಗರಾಜು. ಎಂ. ಸಿ ವರದರಾಜ್ .ಶಿವಣ್ಣ. ನಾಗೇಶ್. ಸಾಗರ್ ಸೇರಿದಂತೆ ಹಲವರು ಭಾಗವಹಿಸಿದ್ದರು.