ಮನೆ ದೇವರನಾಮ ಆರು ಒಲಿದರೇನು ನಮಗಿನ್ನಾರು ಮುನಿದರೇನು

ಆರು ಒಲಿದರೇನು ನಮಗಿನ್ನಾರು ಮುನಿದರೇನು

0

ಆರು ಒಲಿದರೇನು ನಮಗಿನ್ನಾರು ಮುನಿದರೇನು

ಕ್ಷೀರಸಾಗರಶಯನ ಹರಿಯ ಸೇರಿದ ಹರಿದಾಸರಿಗೆ ||ಪ||

ಪಡೆದ ತಾಯಿಯು ತಂದೆಯು ನಮ್ಮೊಳಗೆ ಅಹಿತರು ಆದರೇನು

ಮಡದಿ ಮಕ್ಕಳು ಮನೆಗಳು ನೆಂಟರು ಮುನಿಸುಗುಟ್ಟಿದರೇನು

ಒಡನೆ ತಿರುಗುವ ಆ ಗೆಳೆಯನು ಮನದೊಳು ವೈರವ ಬೆಳೆಸಿದರೇನು

ಕಡಲಶಯನನ ಕರುಣಾರೂಪನ ಒಲುಮೆಯುಳ್ಳ ಹರಿದಾಸರಿಗೆ ||೧||

ಊರನು ಆಳುವ ದೊರೆಯು ನಮ್ಮನು ಹೊರಗೆ ಹಾಕಿದರೇನು

ಘೋರಾರಣ್ಯದೊಳು ಆಡುವ ಮೃಗಗಳು ಅಡ್ಡಗಟ್ಟೀದರೇನು

ಮಾರಿ ಹಿಂಡು ಮುಸುಕಿದ ದಂಡು ಮೈಗೆ ಮುತ್ತಿದರೇನು

ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ ||೨||

ಕಾನನದೊಳು ಹರಿದಾಡುವ ಉರಗವು ಕಾಲಿಗೆ ಸುತ್ತಿದರೇನು

ಜೇನಿನ ಅಂದದಿ ಕ್ರಿಮಿಕೀಟಂಗಳು ಚರ್ಮಕೆ ಮುತ್ತಿದರೇನು

ಭಾನುಮಂಡಲ ಭಜಿಸುವ ಭಕ್ತರ ಬಲಗಳು ತಪ್ಪಿದರೇನು

ಮನದಲಿ ಸಿರಿವರ ವಿಠ್ಠಲನ ಒಲುಮೆಯುಳ್ಳ ಹರಿದಾಸರಿಗೆ ||೩||

ಹಿಂದಿನ ಲೇಖನಲಿಂಗಪರಿವರ್ತಿತ ಮಹಿಳೆಯೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಹಾರಕ್ಕೆ ಅರ್ಹಳು: ಬಾಂಬೆ ಹೈಕೋರ್ಟ್
ಮುಂದಿನ ಲೇಖನವಜ್ರಾಸನದಲ್ಲಿ ಕುಳಿತು ತಿನ್ನೋದ್ರಿಂದ ಆಸಿಡಿಟಿ, ಗ್ಯಾಸ್ಟ್ರಿಕ್ ಹತ್ತಿರ ಸುಳಿಯೋದಿಲ್ಲ