ಮನೆ ರಾಜ್ಯ ವಿಶೇಷ ಗೌರವ, ರಂಗೋಲಿ ಮೂಲಕ ಮಹಾರಾಜ ಯದುವೀರ್ ಅವರಿಗೆ ಹುಟ್ಟುಹಬ್ಬದ ವಿಶ್..!

ವಿಶೇಷ ಗೌರವ, ರಂಗೋಲಿ ಮೂಲಕ ಮಹಾರಾಜ ಯದುವೀರ್ ಅವರಿಗೆ ಹುಟ್ಟುಹಬ್ಬದ ವಿಶ್..!

0

ಮೈಸೂರು : ಮೈಸೂರು ಮಹಾರಾಜರು ಎಂದರೇ ದಕ್ಷಿಣ ಕರ್ನಾಟಕದ ಜನರು ಇಂದಿಗೂ ದೇವರ ರೀತಿ ನೋಡುತ್ತಾರೆ. ಹೌದು ಆ ಗೌರವ ಇಂದಿಗೂ ಅದೇ ರೀತಿ ಮುಂದುವರೆದಿದೆ. ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಅವರ ಹುಟ್ಟುಹಬ್ಬ ಹಿನ್ನೆಲೆ ಅವರಿಗೆ ಇಂದು ವಿಶೇಷವಾಗಿ ಗೌರವ ಸಲ್ಲಿಕೆ ಮಾಡಲಾಯ್ತು.

ಬೃಹತ್ ಆಕಾರದ ರಂಗೋಲಿ – ಮೈಸೂರಿನ ಮಹಾರಾಜರಾದ ಯದುವೀರ್ ಕೃಷ್ಣದತ್ತ ಒಡೆಯರ್ ಅವರ 33 ವರ್ಷದ ಹುಟ್ಟುಹಬ್ಬದ ಸಂಭ್ರಮ. ಯದುವೀರ್ ಒಡೆಯರ್ ಅವರ ಅಭಿಮಾನಿಗಳು ಈ ಬಾರಿ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಬೇಕು ಎಂದು ಅರಮನೆ ಮುಂಭಾಗ ರಂಗೋಲಿಯಲ್ಲಿ ಬೃಹತ್ ಆಕಾರದ ಯದುವೀರ್ ಅವರ ಭಾವಚಿತ್ರವನ್ನು ಬಿಡಿಸಿದ್ದಾರೆ.

ಯದುವೀರ್ ಅವರ ಭಾವಚಿತ್ರವ – ಅರಮನೆ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಕಲಾವಿದ ಪುನೀತ್ ಹಾಗು ತಂಡದಿಂದ ಸುಮಾರು 8300 ಚದರ ಅಡಿಗಳಷ್ಟು ಉದ್ದದ ಯದುವೀರ್ ಅವರ ಭಾವಚಿತ್ರವನ್ನು ಬಿಡಿಸಿದ್ದಾರೆ

ನಮ್ಮ ದೊರೆ ನಮ್ಮ ಹೆಮ್ಮೆ – ಇನ್ನು ಯದುವೀರ್ ಅವರ ಭಾವಚಿತ್ರದ ಹಿಂದೆ ಕನ್ನಡ ಬಾವುಟವನ್ನು ಹೊಲುವ ಕೆಂಪು ಅರಿಶಿಣದ ರೀತಿ ಬಿಂಬಿಸಿದ್ದಾರೆ. ಇನ್ನು ಭಾವಚಿತ್ರದ ಕೆಳಗೆ ವಿಶೇಷವಾಗಿ ನಮ್ಮ ದೊರೆ ನಮ್ಮ ಹೆಮ್ಮೆ ಎಂದು ಬರೆದಿದ್ದು ಯದುವೀರ್ ಅವರ ಭಾವಚಿತ್ರವನ್ನು ವೀಕ್ಷಣೆ ಮಾಡುವುದಕ್ಕೆ ನೂರಾರು ಮಂದಿ ಆಗಮಿಸುತ್ತಿರುವುದು ವಿಶೇಷವಾಗಿದೆ.