ಮನೆ ಕ್ರೀಡೆ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಮೊದಲ ವೇಗಿ ಮಯಾಂಕ್ ಯಾದವ್

ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಮೊದಲ ವೇಗಿ ಮಯಾಂಕ್ ಯಾದವ್

0

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಆರ್ ​ಸಿಬಿ ಸೋಲಿಗೆ ಶರಣಾಗಿದೆ. ಈ ಮೂಲಕ ಫಾಫ್ ಪಡೆ ಲೀಗ್​  ನಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿದೆ. ಪಂದ್ಯದಲ್ಲಿ ಲಕ್ನೋ ನೀಡಿದ 182 ರನ್ ​ಗಳ ಗುರಿ ಬೆನ್ನಟ್ಟಿದ ಆರ್ ​ಸಿಬಿ 153 ರನ್​ ಗಳಿಸಲಷ್ಟೇ ಶಕ್ತವಾಗಿ 28 ರನ್‌ ಗಳಿಂದ ಸೋಲೊಪ್ಪಿಕೊಂಡಿತು.

Join Our Whatsapp Group

ಇನ್ನು ಈ ಪಂದ್ಯದಲ್ಲಿ ಆರ್‌ ಸಿಬಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಲಕ್ನೋ ಬೌಲರ್ ​ಗಳ ಕರಾರುವಕ್ಕಾದ ದಾಳಿ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ಐಪಿಎಲ್ ​ನಲ್ಲಿ ಆಡಿದ ಎರಡೇ ಎರಡು ಪಂದ್ಯಗಳಲ್ಲಿ ವಿಶ್ವ ಕ್ರಿಕೆಟ್​ನ ಮನಗೆದ್ದಿರುವ ಮಯಾಂಕ್ ಯಾದವ್ ಪ್ರಮುಖ 3 ವಿಕೆಟ್​ ಗಳನ್ನು ಉರುಳಿಸಿ ಆರ್ ​ಸಿಬಿಯ ಬ್ಯಾಟಿಂಗ್ ಬೆನ್ನೇಲುಬ್ಬನೇ ಮುರಿದರು.

ಮಯಾಂಕ್ ದಾಳಿಗೆ ಮಂಡಿಯೂರಿದವರಲ್ಲಿ ರಜತ್ ಪಾಟಿದರ್ (29 ರನ್), ಗ್ಲೆನ್ ಮ್ಯಾಕ್ಸ್‌ವೆಲ್ (0 ರನ್), ಕ್ಯಾಮರೂನ್ ಗ್ರೀನ್ (9 ರನ್) ಸೇರಿದ್ದರು. ಈ ಮೂವರು ಆಟಗಾರರ ವಿಕೆಟ್ ಪತನ ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಈ ಪಂದ್ಯದಲ್ಲಿ ತಮ್ಮ ಖೋಟಾದ 4 ಓವರ್​ ಬೌಲ್ ಮಾಡಿದ ಮಯಾಂಕ್ ಕೇವಲ 14 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಕೊನೆಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಯಾಂಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಯಾವ ವೇಗಿಯೂ ಮಾಡದ ದಾಖಲೆ ಮಾಡಿದರು.

ವಾಸ್ತವವಾಗಿ ಮಯಾಂಕ್​ ಗೆ ಇದು ಚೊಚ್ಚಲ ಐಪಿಎಲ್ ಆವೃತ್ತಿ. ಮಯಾಂಕ್ ಇದುವರೆಗೆ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆರ್​ ಸಿಬಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆಡಿದ್ದ ಮಯಾಂಕ್ ​ಗೆ ಅದು ಅವರ ಚೊಚ್ಚಲ ಐಪಿಎಲ್ ಪಂದ್ಯವಾಗಿತ್ತು.

ಆ ಪಂದ್ಯದಲ್ಲೂ ತಮ್ಮ ಖೋಟಾದ ನಾಲ್ಕು ಓವರ್ ಬೌಲ್ ಮಾಡಿದ್ದ ಮಯಾಂಕ್ ಕೇವಲ 27 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಕಬಳಿಸಿದ್ದರು. ಇದು ಲಕ್ನೋ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಹೀಗಾಗಿ ಆಡಿದ ಮೊದಲ ಪಂದ್ಯದಲ್ಲೇ ಮಯಾಂಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇದೀಗ ಆರ್ ​ಸಿಬಿ ವಿರುದ್ಧದ ಎರಡನೇ ಪಂದ್ಯದಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಮಯಾಂಕ್, ಐಪಿಎಲ್ ಇತಿಹಾಸದಲ್ಲೇ ತಮ್ಮ ಚೊಚ್ಚಲ ಆವೃತ್ತಿಯಲ್ಲೇ ಆಡಿದ ಮೊದಲೆರಡು ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್​ ಎನಿಸಿಕೊಂಡಿದ್ದಾರೆ. ಮಯಾಂಕ್ ​​ಗೂ ಮೊದಲು ಬೇರೆ ಯಾವ ವೇಗಿಯೂ ಈ ಸಾಧನೆ ಮಾಡಿರಲಿಲ್ಲ.

ಹಿಂದಿನ ಲೇಖನಬರ ಪರಿಹಾರ ವರದಿ ಸಲ್ಲಿಕೆ ವಿಳಂಬವಾಗಿದೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್  ಶಾ  ಹೇಳಿಕೆ ಸತ್ಯಕ್ಕೆ ದೂರ: ಸಚಿವ ಪ್ರಿಯಾಂಕ್ ಖರ್ಗೆ
ಮುಂದಿನ ಲೇಖನದೇವೇಗೌಡರಿಗೆ ತುಳಿಯೋ ಅಭ್ಯಾಸವಿಲ್ಲ: ಸಂಸದ ಪ್ರತಾಪ್ ಸಿಂಹ