ಮನೆ ದೇವಸ್ಥಾನ ಶ್ರೀ ಚಕ್ರ ಸಮೇತ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ

ಶ್ರೀ ಚಕ್ರ ಸಮೇತ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ

0

      ದೇವಾಲಯದ ಸಮಯ ಬೆಳಿಗ್ಗೆ ಆರು ಮೂವತ್ತರಿಂದ ಹನ್ನೆರಡು ಗಂಟೆಯ ಸಂಜೆ 5 ರಿಂದ  7 ವಿಶೇಷವಾದ ಕಾರ್ಯಕ್ರಮದಲ್ಲಿ ಸಮಯದ ವ್ಯತ್ಯಾಸವಿರುತ್ತದೆ. ಈ ಕ್ಷೇತ್ರವು 2015 ಏಪ್ರಿಲ್ 24ರಂದು  ನಿರ್ಮಾಣ ಆರಂಭವಾಗಿ 2016 ಎಪ್ರಿಲ್ 24 ರಂದು ಪೂರ್ಣಗೊಂಡಿದೆ. ಶ್ರೀಯುತ ಕೃಷ್ಣ ರೆಡ್ಡಿ ಅವರು ಈ ಗ್ರಾಮದಲ್ಲಿ ಒಂದು ರಾಜರಾಜೇಶ್ವರಿ ದೇವಾಲಯ ನಿರ್ಮಾಣ ಮಾಡಬೇಕೆಂದು ಅದುಕೊಂಡಿದ್ದರು ಆದರೆ ಕಾರಣಾಂತರದಿಂದ ಕಟ್ಟಲು ಸಾಧ್ಯವಾಗಲಿಲ್ಲ.

Join Our Whatsapp Group

 ಅವರು ಅಷ್ಟಮಂಗಳ ಪ್ರಶ್ನೆ ಹಾಕಿ ದೇವಾಲಯ ನಿರ್ಮಾಣಕ್ಕೆ ಕೇಳಿದಾಗ ಅವರು ರಾಗಿ ಬೇಳೆ ಬೆಳೆಯುತ್ತಿದ್ದ ಜಮೀನಿನ ಸ್ಥಳವು ತಾಯಿ ನೆಲೆಸಲು ಸರಿಯಾದ ಸ್ಥಳವೆಂದು ತಿಳಿಸಿದರು.

ಏನೆಂದು ವಿಚಾರಿಸಿದಾಗ 1600 ವರ್ಷಗಳ ಹಿಂದೆ ಶ್ರೀ ಅನ್ನಪೂರ್ಣೇಶ್ವರಿ ಇಲ್ಲಿ ನೆಲೆಸಿದ್ದರು ಎನ್ನುವುದು ಪ್ರಶ್ನೆಯ ಮುಖಾಂತರ ಗೊತ್ತಾಯಿತು. ಬ್ರಾಹ್ಮಣರ ಪಾಳೆಗಾರಿಕೆಯಲ್ಲಿ ತಾಯಿ ಅನ್ನಪೂರ್ಣೇಶ್ವರಿ ಅಲ್ಲಿ  ನೆಲೆಸಿದ್ದಾರೆ ಎಂದು ತಿಳಿದುಬಂದಿತು. ಈ ದೇವಾಲಯದ ನಿರ್ಮಾಣವು ಕೇವಲ ಒಂದು ವರ್ಷದಲ್ಲಿ ನಡೆಯಿತು ಅಂದಿನಿಂದ ಇಂದಿನವರೆಗೆ ದೇವಸ್ಥಾನದ ಪೂಜೆಗಳು ನಡೆದುಕೊಂಡು ಬಂದಿದೆ.

ಈ ಕ್ಷೇತ್ರದಲ್ಲಿ ಅನ್ನಪೂರ್ಣೇಶ್ವರಿ ಏಳು ಅಡಿ ಶ್ರೀಚಕ್ರದ ಸಮೇತವಾಗಿ ಕೂರ್ವ ಪೀಠದಲ್ಲಿ ನಿಂತಿರುವ ದೇವಿ ತಲೆಯ ಮೇಲೆ ನಾಗದೇವತೆ ಇದ್ದು ದ್ವಿಭುಜ ಹೊಂದಿರುವಳು.

ಈ ವಿಗ್ರಹವನ್ನು ಕಾರ್ಕಳದಲ್ಲಿ ಮಾಡಿಸಿದ್ದರು.ಮತ್ತು ವಿಶೇಷವಾಗಿ ಶ್ರೀ ವೀರಭದ್ರಸ್ವಾಮಿ ಲಿಂಗ ರೂಪದಲ್ಲಿ ಇಲ್ಲಿ ನೆಲೆಸಿದ್ದಾನೆ. ಮತ್ತು ಶಕ್ತಿಗಣಪತಿಯನ್ನು ಕೂಡಾ ಇಲ್ಲಿ ದರ್ಶನ ಮಾಡಬಹುದು. ಜೊತೆಗೆ ಇಲ್ಲಿ ತ್ರಿಕಾಲ ಪೂಜೆ, ತ್ರಿಕಾಲ ನೈವೇದ್ಯ ನಡೆಯುತ್ತದೆ.

      ಎಲ್ಲಾ ಕಡೆಗಳಿಂದ ಭಕ್ತಾದಿಗಳು ಬಂದು ಸೇವೆ ಸಲ್ಲಿಸುತ್ತಾರೆ.ವಿಶೇಷವಾಗಿ ಸಂತಾನಕ್ಕಾಗಿ ಮತ್ತು ವಿವಾಹಕ್ಕಾಗಿ ಬಂದು ಇಲ್ಲಿ ಹರಿಸಿಕೊಂಡು ಸೇವೆ ಸಲ್ಲಿಸಿ ದೇವಿಯ ಕೃಪಾಪಟಾಕ್ಷಕ್ಕೆ ಪಾತ್ರರಾಗುತ್ತಾರೆ.

     ಈ ದೇವಾಲಯ ನಿರ್ಮಾಣ ಮಾಡುವುದಕ್ಕಿಂತ ಮುಂಚೆ ಶ್ರೀ ಕೃಷ್ಣಾರೆಡ್ಡಿಯವರ ಪತ್ನಿಯವರು ಚರ್ಮ ಕಾಯಿಲೆಯಿಂದ ಬಹಳ ತೊಂದರೆಗೆ ಒಳಗಾಗಿ ಯಾವ ವೈದ್ಯರು ಏನು ಮಾಡಲು ಸಾಧ್ಯವಾಗಲಿಲ್ಲ.ಆಗ ಕೃಷ್ಣಾರೆಡ್ಡಿ ಅವರು ಅಷ್ಟಮಂಗಳ ಪ್ರಶ್ನೆ ಕೇಳಿದಾಗ ಒಬ್ಬ ಬ್ರಾಹ್ಮಣ ಕನ್ಯೆ ಬ್ರಾಹ್ಮರಾಕ್ಷಸಿಯಾಗಿ ಅವರನ್ನು ಕಾಡುತ್ತಿದ್ದಾಳೆ ಎಂದಾಗ ಪೂಜೆಯ ವಿಧಿ ವಿಧಾನಗಳಿಂದ ಆಕೆಗೆ ಮೋಕ್ಷ ಕೊಡಿಸುತ್ತಾರೆ.

    ಅಂದಿನಿಂದ ಅವರ ಪತ್ನಿ ಯಾವ ಆರೋಗ್ಯ ಸಮಸ್ಯೆ ಇಲ್ಲದೆ ಜೀವನ ನಡೆಸುತ್ತಿದ್ದಾರೆ.ದೇವಾಲಯ ನಿರ್ಮಾಣ ಮಾಡುವುದಕ್ಕಿಂತ ಮೊದಲು ಷಡಾಧಾರ ಇಲ್ಲಿ ಇಟ್ಟ ಕೂಡಲೇ ನಾಗದೇವತೆಯು ಒಂದು ಇಲ್ಲಿ ನಿಲ್ಲಿಸಿದನಂತೆ ದೇವಾಲಯ ಪೂರ್ಣ ನಿರ್ಮಾಣ ದೇವಿಯನ್ನು ಪ್ರತಿಷ್ಠಾಪನೆಯ ವಿಧಿ ವಿಧಾನಗಳನ್ನು ನಡೆಯುವವರೆಗೂ ನಾಗದೇವರು ದೇವನು ಇಲ್ಲೇ ನೆಲೆ ನಿಂತಿದ್ದಾನಂತೆ  

      ಕಂಡರೂ ಬಹಳ ಮಂದಿ ಹೇಳಿದ ಮಾತು. ಕೃಷ್ಣಾರೆಡ್ಡಿಯವರು ಅಣ್ಣನವರಾದ ನಾರಾಯಣ ರೆಡ್ಡಿಯವರಿಗೆ ಹೋಗಿದ್ದಂತೆ ಸುಮಾರು 20 ಹಳ್ಳಿ ದೂರದಲ್ಲಿ ಹೆಡೆಯಲ್ಲಿ ಓಡಿಸಿಕೊಂಡು ನಾಗದೇವತೆ ಅವರ ತಪ್ಪಿ ಅರಿವಾಗಿ ತಾಯಿಯ ಮುಂದೆ ಶರಣಾದಾಗ ಅದು ತಲೆ ತಗ್ಗಿಸಿ ಮುಂದೆ ಹೋಗಿದ್ದಂತೆ.

ಅಮ್ಮನವರನ್ನು ಪ್ರತಿಷ್ಠಾಪನೆ  ಮಾಡಿದ್ದು ಉತ್ತರಷಾಡ ನಕ್ಷತ್ರದಲ್ಲಿ ಪ್ರತಿವರ್ಷ ಅದೇ ನಕ್ಷತ್ರದಲ್ಲಿ ಮೂರು ದಿನಗಳ ಕಾಲ ವಿಶೇಷವಾಗಿ ವಾರ್ಷಿಕೋತ್ಸವವನ್ನು  ನೆರವೇರಿಸುತ್ತಾರೆ.ನವರಾತ್ರಿಯಲ್ಲಿ ಇಲ್ಲಿ ಬಹಳ ವಿಶೇಷವಾಗಿ ಮಾಡುತ್ತಾರೆ. ದೇವಾಲಯ ಪ್ರಾರಂಭವಾದಾಗಿನಿಂದ ಹುಣ್ಣಿಮೆಯಂದು  ಚಂಡಿಕಾ ಹೋಮವನ್ನು ನಡೆಸಿಕೊಂಡು ಬಂದಿರುತ್ತಾರೆ. ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ತಿಪ್ಪೋತ್ಸವ  ನಡೆಸುತ್ತಾರೆ.

      ಈ ಪುಣ್ಯಕ್ಷೇತ್ರ ಆನೇಕಲ್ಲು ಅತ್ತಿ ಬೆಲೆ ರಸ್ತೆಗೆ ಬೆಸ್ತನಮಾನಹಳ್ಳಿ ಇಂದ ಎಡಗಡೆಗೆ ತಿರುಗಿ ಒಂದು ಕಿಲೋಮೀಟರ್ ಒಳಗೆ ಹೋದರೆ ರಾಚಮಾನಹಳ್ಳಿ ಗ್ರಾಮ ಸಿಗುತ್ತದೆ.ಬಸ್ಸಿನ ಸೌಕರ್ಯ ಇದೆ ಬೆಳಿಗ್ಗೆ ಎಂಟು ಮದ್ಯಾಹ್ನ ಒಂದು ಮತ್ತು ಸಂಜೆ ಐದಕ್ಕೆ ಮತ್ತು ಅತಿ ಬೆಲೆಯಿಂದ ಬಹಳ ಆಟೋ ವ್ಯವಸ್ಥೆಗಳು  ಕೂಡ ಇದೆ.