ಮನೆ ದೇವಸ್ಥಾನ ಶ್ರೀ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ ದೇವಾಲಯ

ಶ್ರೀ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ ದೇವಾಲಯ

0

ಹಲಗೂರಿನಿಂದ 10 ಕಿಲೋಮೀಟರ್ ದೂರವಿರುವ ಶ್ರೀ ಹೆಬೆಟ್ಟದ ಬಸವೇಶ್ವರ ಸ್ವಾಮಿಯ ಕ್ಷೇತ್ರವು ಪುರಾತನವಾದದ್ದು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ.

Join Our Whatsapp Group

ಇದು ಏಕ ಶಿಲಾ ಮೂರ್ತಿಯಾಗಿದ್ದು,ಶಿವಲಿಂಗವನ್ನು ಮತ್ತು ಬಸವಣ್ಣನನ್ನು ಒಂದೇ ಶಿಲೆಯಿಂದ ನಿರ್ಮಾಣ ಮಾಡಿದ್ದಾರೆ. ಈ ದೇವಾಲಯದ ವಿಶೇಷವೆಂದರೆ ಒಂದೇ ದಿನದಲ್ಲಿ ದೇವಾಲಯವನ್ನು ನಿರ್ಮಿಸಿ ದೇವರನ್ನು ಪ್ರತಿಷ್ಠಾಪಿಸಿದ್ದಾರೆ.

ಸುಲಭ ಎಂಬ ಸ್ಥಳದಲ್ಲಿ ಒಂದು ಮಂಟಪವನ್ನು ನಿರ್ಮಾಣ ಮಾಡುತ್ತಾರೆ, ಅಷ್ಟೊತ್ತಿಗೆ ಬೆಳಕು ಹರೆಯುತ್ತದೆ ದೇವಾಲಯದ ನಿರ್ಮಾಣ ಕಾರ್ಯವನ್ನು ನಿಲ್ಲಿಸುತ್ತಾರೆ.ಪುಣ್ಯಕ್ಷೇತ್ರವು ದಟ್ಟವಾದ ಕಾಡಿನ ಮಧ್ಯೆ ಸುಂದರವಾದ ಪ್ರಕೃತಿಯ ಸೌಂದರ್ಯದಲ್ಲಿ ಸ್ವಾಮಿ ನಡೆಸಿದ್ದಾನೆ.

ಈ ಹಿಂದೆ ಈ ದೇವಾಲಯಕ್ಕೆ ಪೂಜೆ ಸಲ್ಲಿಸುವುದಕ್ಕೆ ಅರ್ಚಕರು ಹೋಗಬೇಕಾದರೆ ಕಾಡಿನ ಮಧ್ಯೆ 7 ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಬೇಕಾಗಿತ್ತು, ರಸ್ತೆಯ ವ್ಯವಸ್ಥೆ ಇರಲಿಲ್ಲ.ಯಾವುದೇ ವಾಹನದಲ್ಲಿ ಹೋಗುವಂತಿರಲಿಲ್ಲ.ಈ ಕ್ಷೇತ್ರದಲ್ಲಿ ಸುಂದರವಾದ ಎರಡು ಕಲ್ಯಾಣಿಗಳಿವೆ ಅರ್ಚಕರು ಕಲ್ಯಾಣಿಯಿಂದ  ನೀರು ತಂದು ನಿತ್ಯ ಅಭಿಷೇಕ ಪೂಜೆ ಸ್ವಾಮಿಗೆ ಸಲ್ಲಿಸುತ್ತಾ ಬಂದಿದ್ದಾರೆ.

ಈಗ ಮುಜರಾಯಿ ಇಲಾಖೆಯವರು ದೇವಸ್ಥಾನದ ವಹಿವಾಟು ನೋಡಿಕೊಳ್ಳುತ್ತಿರುವುದರಿಂದ ರಸ್ತೆಯ ವ್ಯವಸ್ಥೆ ಹಾಗೂ ಬಸ್ಸಿನ ವ್ಯವಸ್ಥೆ ಕೂಡ ಮಾಡಿದ್ದಾರೆ.

ಈ ಪುಣ್ಯಕ್ಷೇತ್ರದಲ್ಲಿ ಶ್ರೀ ಗುರು ಶಾಂತಿ ಲಿಂಗ ಒಡೆಯರ್ ಅವರು ತಪಸ್ಸು ಮಾಡಿದಂತಹ ಪುಣ್ಯಕ್ಷೇತ್ರ ಈ ದೇವಸ್ಥಾನದ ಬಳಿಗೆ ಅವರ ಗದ್ದುಗೆ ಕೂಡ ಇದೆ. ಐದುನೂರು ವರ್ಷಗಳ ಹಿಂದೆ ಅವರು ಇಲ್ಲಿ ಜೀವಂತ ಸಮಾಧಿಯಾದ ಗದ್ದುಗೆ ಅದು.

ಈ ದೇವಾಲಯದ ಅರ್ಚಕರು ಅಲ್ಲಿಯೂ ಕೂಡ ಪೂಜೆ ಮಾಡುತ್ತಾರೆ ಈ ಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಶ್ರೀಹೆಬ್ಬಟ್ಟದ ಬಸವೇಶ್ವರ ಸ್ವಾಮಿ ಆರಾಧ್ಯನಾಗಿದ್ದಾನೆ.ಹೆಬ್ಬೆಟ್ಟರಾಯ ಎಂದರೆ ಈಹಿರಯಣ್ಣ ಎಂದು ಕರೆಯುತ್ತಾರೆ.ಸುತ್ತಮುತ್ತಲಿನ ಗ್ರಾಮಗಳಿಗೆ ಹಿರಿಯ ಎಂದು ಹೆಬ್ಬೆಟ್ಟರಾಯ ಬೆಟ್ಟದ ಮೇಲೆ ಹಿರಯಣ್ಣ ಕೂತಿದ್ದಾನೆ, ಸುತ್ತಮುತ್ತಲಿನ ಗ್ರಾಮದವರು ಯಾವುದೇ ಹಬ್ಬ ಮಾಡಬೇಕಾದರೂ ಶ್ರೀಹೆಬ್ಬೆಟ್ಟದ ಬಸವೇಶ್ವರಸ್ವಾಮಿಯ ಅಪ್ಪಣೆಯನ್ನು ಪಡೆದು ನೆರವೇರಿಸುತ್ತಾರೆ .

ಹೀಗೆ ಸ್ವಾಮಿಯು ಈ ಪುಣ್ಯ  ಕ್ಷೇತ್ರದಲ್ಲಿ ನೆಲೆಸಿದ್ದು ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಿದ್ದಾನೆ.ಈ ಕ್ಷೇತ್ರಕ್ಕೆ ಹೊರರಾಜ್ಯ ಹೊರದೇಶಗಳಿಂದ ಸ್ವಾಮಿಯ ದರ್ಶನಕ್ಕೆಂದು ಬರುತ್ತಾರೆ.

ಇನ್ನೊಂದು ವಿಶೇಷವೆಂದರೆ ಈ ಪುಣ್ಯಕ್ಷೇತ್ರವನ್ನು ಬಡವರ ಊಟ ಎಂದು ಕೂಡ ಕರೆಯುತ್ತಾರೆ ಅಕ್ಟೋಬರ್ ನವೆಂಬರ್ ಡಿಸೆಂಬರ್ ತಿಂಗಳುಗಳಲ್ಲಿ ಬೆಳಗಿನ 9:00 ಗಂಟೆಯವರೆಗೂ ಮಂಜು ಕವಿದ ವಾತಾವರಣ ವಿರುತ್ತದೆ.ಬಹಳ ಎತ್ತರ ಪ್ರದೇಶದಲ್ಲಿ ಪ್ರಶಾಂತವಾದ ಪರಿಸರದ ನಡುವೆ ನೆಲಗೊಂಡಿರುವಸ್ವಾಮಿ ಪ್ರವಾಸೋದ್ಯಮ ಇಲಾಖೆಯವರು ಈ ಕ್ಷೇತ್ರವನ್ನು ಇನ್ನಷ್ಟು ಹೆಚ್ಚು ಅಭಿವೃದ್ಧಿ  ಮಾಡುತ್ತಿದ್ದಾರೆ.