ಮನೆ ಮನರಂಜನೆ 6ನೇ ದಿನದ ಕಲೆಕ್ಷನ್’ನೊಂದಿಗೆ ಜವಾನ್ ಚಿತ್ರ ವಿಶ್ವಾದ್ಯಂತ 600 ಕೋಟಿ ರೂ. ಸಮೀಪಿಸಲಿದೆ

6ನೇ ದಿನದ ಕಲೆಕ್ಷನ್’ನೊಂದಿಗೆ ಜವಾನ್ ಚಿತ್ರ ವಿಶ್ವಾದ್ಯಂತ 600 ಕೋಟಿ ರೂ. ಸಮೀಪಿಸಲಿದೆ

0

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರ ಸೆಪ್ಟೆಂಬರ್ 7ರಂದು ಬಿಡುಗಡೆಯಾಗಿ ಪ್ರತಿದಿನವೂ ಹೊಸ ಹೊಸ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ ಮೊದಲ ದಿನವೇ 75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆದ ಮೊದಲ ಹಿಂದಿ ಚಿತ್ರ. ಅಲ್ಲದೇ ನಾಲ್ಕನೇ ದಿನ ವಿಶ್ವಾದ್ಯಂತ 500 ಕೋಟಿ ರೂಪಾಯಿ ಗಡಿ ದಾಟಿದೆ, ವೇಗವಾಗಿ ಇಷ್ಟೊಂದು ಕಲೆಕ್ಷನ್ ಮಾಡಿದ ಬಾಲಿವುಡ್ ಚಿತ್ರವಾಗಿದೆ.

ಐದನೇ ಕಲೆಕ್ಷನ್ ನೊಂದಿಗೆ ಚಿತ್ರದ ಒಟ್ಟು ಕಲೆಕ್ಷನ್ ಭಾರತದಲ್ಲಿ 300 ಕೋಟಿ ರೂಪಾಯಿ ದಾಟಿದೆ. ಈ ಮೂಲಕ 2023ರ ಅತಿ ದೊಡ್ಡ ಹಿಂದಿ ಬ್ಲಾಕ್ ಬಾಸ್ಟರ್ ಗಳಲ್ಲಿ ಜವಾನ್ ಚಿತ್ರ ಒಂದಾಗಿದೆ. 6ನೇ ದಿನದ ಕಲೆಕ್ಷನ್ನೊಂದಿಗೆ ಜವಾನ್ ವಿಶ್ವಾದ್ಯಂತ 600 ಕೋಟಿ ರೂಪಾಯಿ ಸಮೀಪಿಸಲಿದೆ. ದೇಶದಲ್ಲಿ ಈಗಾಗಲೇ 300 ಕೋಟಿ ರೂಪಾಯಿ ದಾಟಿರುವ ಚಿತ್ರ 400 ಕೋಟಿಯತ್ತ ಯಶಸ್ವಿಯಾಗಿ ಸಾಗುತ್ತಿದೆ.

ಚಿತ್ರವನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡಿದ್ದು, ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲದೇ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ಡೊಗ್ರಾ, ದೀಪಿಕಾ ಪಡುಕೋಣೆ, ಸಂಜಯ್ ದತ್, ಯೋಗಿ ಬಾಬು ನಟಿಸಿದ್ದಾರೆ.

ಹಿಂದಿನ ಲೇಖನಇಂದು ಕಾವೇರಿ ನದಿ ನಿಯಂತ್ರಣ ಸಮಿತಿ ಸಭೆ
ಮುಂದಿನ ಲೇಖನಮೈಸೂರಿನ ಪೂರ್ವ ಆರ್ ಟಿಓ ದಲ್ಲಿ ಭ್ರಷ್ಟಾಚಾರ: ಸೂಕ್ತ ತನಿಖೆಗೆ ಒತ್ತಾಯ