ಇಲ್ಲಿರುವ ವಿಶಾಲವಾದ ಕಾಡಿನ ಮಧ್ಯೆ ಪ್ರಕೃತಿ ಸೌಂದರ್ಯದಲ್ಲಿ ಶ್ರೀ ವೆಂಕಟೇಶ ನರಸಿಂಹಸ್ವಾಮಿಯ ಕಂಬದಲ್ಲಿ ನೆಲೆಸಿದ್ದಾರೆ.ಈ ಪುಣ್ಯ ಕ್ಷೇತ್ರವು ಸಾವಿರಾರು ವರ್ಷದ ಇತಿಹಾಸಿಕ ಹಿನ್ನೆಲೆ ಹೊಂದಿದೆ.ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿ ನರಸಿಂಹನನ್ನು ಮತ್ತು ವೆಂಕಟೇಶ್ವರನನ್ನು ಈ ಕ್ಷೇತ್ರದಲ್ಲಿ ಆರಾಧಿಸಿದ್ದಾರೆ ಎಂಬ ಪ್ರತೀತಿ ಇದೆ.
ಮತ್ತು ದ್ವಾಪರ ಯುಗದಲ್ಲಿ ಪಾಂಡವರು ವನವಾಸ ಕಾಲದಲ್ಲಿ ಈ ಕ್ಷೇತ್ರದಲ್ಲಿ ಬಂದು ಶ್ರೀ ವೆಂಕಟೇಶ ನರಸಿಂಹಸ್ವಾಮಿ ಪೂಜಿಸಿದ್ದಾರೆ ಎಂಬ ಇತಿಹಾಸವಿದೆ.ಈ ಪ್ರಕೃತಿಯ ನಡುವೆ ಇರುವ ಈ ಕ್ಷೇತ್ರಕ್ಕೆ ಬಂದು ಭಗವಂತನ ಮುಂದೆ ಕುಳಿತು ತಮ್ಮ ಬೇಡಿಕೆಯನ್ನು ಕೇಳಿಕೊಂಡಾಗ ಅವರ ಇಷ್ಟಾರ್ಥಗಳು ಈಡೇರಿಸುತ್ತಾನೆ.
ಈ ಕ್ಷೇತ್ರದಲ್ಲಿ ಮತ್ತೊಂದು ವಿಶೇಷವೆಂದರೆ ಆಲದ ಎಲೆಗಳನ್ನು ಭಗವಂತನ ಮುಂದಿಟ್ಟು ಇಲ್ಲಿನ ಅರ್ಚಕರು ಮಾತ್ರ ದೀಕ್ಷೆಯನ್ನು ಭಕ್ತಾದಿಗಳಿಗೆ ಕೊಟ್ಟಾಗ ಅವರ ಇಷ್ಟಾರ್ಥಗಳು ಈಡೇರುತ್ತದೆ. ಈ ಕ್ಷೇತ್ರದಲ್ಲಿ ಮತ್ತೊಂದು ವಿಶೇಷವೆಂದರೆ ವಿಶಾಲವಾದ ಪ್ರಕೃತಿಯ ಮಡಿಲಲ್ಲಿ ಕುಳಿತು ಧ್ಯಾನ ಸಕ್ತರಾಗಿ ಪರಮಾತ್ಮನಲ್ಲಿ ಕೇಳಿಕೊಂಡಾಗ ಅವನು ಅನುಗ್ರಹವನ್ನು ಆದಷ್ಟು ಬೇಗ ಪಡೆದುತ್ತಾನೆ.
ಮತ್ತು ಬಹಳ ವರ್ಷಗಳಿಂದ ಸಂತಾನ ಪಲ್ಲವಿಲ್ಲದವರು ಈ ಕ್ಷೇತ್ರಕ್ಕೆ ಬಂದು ಸ್ವಾಮಿಯ ಸೇವೆಯನ್ನು ಮಾಡಿ ಸಂತಾನ ಭಾಗ್ಯವನ್ನು ಪಡೆಯದಿದ್ದರೆ.ಈ ಕ್ಷೇತ್ರವು 2,000 ಅಡಿ ಎತ್ತರದಲ್ಲಿದೆ.ಈ ಕ್ಷೇತ್ರದಲ್ಲಿ ಶ್ರಾವಣ ಮಾಸದಲ್ಲಿ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.