ಮನೆ ಯೋಗಾಸನ ಧ್ಯಾನ

ಧ್ಯಾನ

0

ನೀರು, ಅದನ್ನು ಹೊತ್ತ ಪಾತ್ರೆಯ ಆಕಾರವನ್ನೇ ತಾಳುವಂತೆ, ಮನಸ್ಸು ಯಾವುದಾದರೂ ವಸ್ತುವನ್ನು ಕುರಿತು ಆಲೋಚನೆ ಮಾಡುವುದಾದರೆ ಅದರ ಆಕಾರವನ್ನೇ ತಾಳುತ್ತದೆ. ಹಾಗೆಯೇ ಮನಸ್ಸು ತಾನು ಭಜಿಸುವ ಸರ್ವವ್ಯಾಪಕ ಭಗವಂತನನ್ನು ಕುರಿತು ಯೋಚಿಸಿದ್ದಾದರೆ ಬಹುಕಾಲದ ಶ್ರಮ ಪ್ರಯತ್ನಗಳ ಮೂಲಕ ಆತನ ರೂಪವನ್ನು ತಾಳಬಹುದು.

ಎಣ್ಣೆಯನ್ನು ಒಂದು ಪಾತ್ರೆಯಿಂದ ಮತ್ತೊಂದಕ್ಕೆ ಸುರಿದಾಗ ಅದು ಏಕಧಾರೆಯಾಗುವುದನ್ನು ನಾವು ಗಮನಿಸಬಹುದು. ಏಕಾಗ್ರತೆಯು ಎಡಬಿಡದೆ ಇದ್ದರೆ ಧ್ಯಾನ ಎನ್ನುವ ಸ್ಥಿತಿ ಉಂಟಾಗುತ್ತದೆ. ಹೇಗೆ ಎಲೆಕ್ಟ್ರಿಕ್ ದೀಪದಲ್ಲಿ ವಿದ್ಯುತ್ ಹರಿಯುತ್ತಿರುವಾಗ ತಂತಿಗಳು ಬೆಳಗುತ್ತವೋ ಹಾಗೆ ಯೋಗಿಯ ಮನಸ್ಸು ಧ್ಯಾನದಿಂದ ಬೆಳಗುತ್ತದೆ. ತಾನು ಯೋಚಿಸುವ ಗುರಿಯ ವಿಚಾರದಲ್ಲಿ ಯೋಗಿಯ ದೇಹ, ಉಸಿರು, ಇಂದ್ರೀಯಗಳು, ಮನಸ್ಸು ಮತ್ತು ಬುದ್ಧಿಯು ಏಕೀಭೂತವಾಗುತ್ತದೆ. ಆತನು ಯಾವ ಲಕ್ಷಣಗಳಿಂದಲೂ ಹೇಳಲಾಗದ ಸಮಾಧಿಸ್ಥಿತಿಯಲ್ಲಿರುತ್ತಾನೆ. ಅತಿ ಆನಂದದ ಅನುಭವವಲ್ಲದೆ ಮತ್ತೇನೂ ಆತನಿಗೆ ಇರುವುದಿಲ್ಲ. ವಿದ್ಯುತ್ ಲಹರಿಯಂತೆ ಆತನು ಪೃಥ್ವಿ ಮತ್ತು ಸ್ವರ್ಗಗಳ ಆಚೆ ಮಿನುಗುವ ಬೆಳಕನ್ನು ಕಾಣುತ್ತಾನೆ. ಹಾಗೆಯೇ ತನ್ನ ಹೃದಯದಲ್ಲಿ ಹೊಳೆಯುವ ಬೆಳಕನ್ನೇ ಕಾಣುತ್ತಾನೆ. ಆತನು ತನಗೂ ಇತರರಿಗೂ ಬೆಳಕೆ ಆಗುತ್ತಾನೆ.

ಯೋಗ ಪಥದಲ್ಲಿ ವಿಜಯದ ಗುರುತುಗಳು ಅವನ ಆರೋಗ್ಯ, ದೇಹದ ಲಘುತ್ವಾ, ಸ್ಥಿರತ್ವ, ರೂಪದ ಸ್ಪಷ್ಟತೆ, ಮೋಹಕ ಧ್ವನಿ, ಸುಗಂಧ ದೇಹ, ಆಶೆಇಲ್ಲದಿರುವಿಕೆ ಇತ್ಯಾದಿ. ಅಂತವನಿಗೆ ಸಮರಸವಾದ ಮತ್ತು ಶಾಂತವಾದ ಮನಸ್ಸು ಇರುತ್ತದೆ. ಆತನು ವಿನೀತ ಭಾವದ ಪ್ರತೀಕವೆಂಬಂತೆ ಇರುತ್ತಾನೆ. ದೇವರಲ್ಲಿ ಶರಣಾಗತನಾಗಿ ತನ್ನೆಲ್ಲ ಕರ್ಮಗಳನ್ನು ಆತನಿಗೆ ಅರ್ಪಿಸುತ್ತಾನೆ. ಆದ್ದರಿಂದ ಕರ್ಮಗಳಿಂದ ಬಿಡುಗಡೆ ಹೊಂದುತ್ತಾನೆ. ಜೀವನ್ಮುಕ್ತ ನಾಗುತ್ತಾನೆ.

ಅರ್ಜುನನು ಶ್ರೀ ಕೃಷ್ಣನನ್ನ ಕುರಿತು ಹೀಗೆಂದು ಕೇಳುತ್ತಾರೆ :

ಅಯತಿಃ ಶ್ರಾದ್ದೆಯೋಪೇತೋ ಯೋಗಾತ್ ಚಲಿತಮಾನಸಃ |

ಅಪ್ರಾಪ್ಯ ಯೋಗಸಂಸಿದ್ದಿಂ ಕಾಂ ಗತಿಂ ಕೃಷ್ಣ ಗಚ್ಚತಿ ? ||

                                                                                –ಭ.ಗೀ. ೬-೩೭

ಅಂದರೆ, “ಶ್ರದ್ಧೆಯಿಂದಿದ್ದವನಾದರೂ, ಪ್ರಯತ್ನಪಟ್ಟರೂ ಯೋಗಸಿದ್ಧಿಯನ್ನು ಪಡೆಯದೆ ಚಲಿಸಲ್ಪಟ್ಟವನು ಯಾವ ಗತಿಯನ್ನು ಹೊಂದುತ್ತಾನೆ ?”

ಅದಕ್ಕೆ ಶ್ರೀ ಕೃಷ್ಣನು ಹೀಗೆ ಉತ್ತರ ನೀಡುತ್ತಾನೆ :

ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ |

ನ ಹಿ ಕಲ್ಯಾನಕೃತ್ ಕಶ್ಚಿನ್ ದುರ್ಗತಿಂ ತಾತ ಗಚ್ಚತಿ ||

ಪ್ರಾಪ್ಯ ಪುಣ್ಯಕೃತಾನ್ ಲೋಕಾನ್ ಉಷಿತ್ವಾ ಶಾಶ್ವತೀಃ ಸಮಾಃ |

ಶುಚೀನಾಂ ಶ್ರೀಮತಾಂ ಗೇಹೇ ಯೋಗ ಭ್ರಾಷ್ಟೋsಭಿಜಾಯತೇ ||

ಅಥವಾ ಯೋಗಿನಾಮದೇವ ಕುಲೇ ಭವತಿ ಧೀಮತಾಮ್ |

ಏತದ್ದಿ ದುರ್ಲಭತರಂ ಲೋಕೇ ಜನ್ಮ ಯದೀದ್ಯಶಮ್ ||

ತತ್ರ ತಂ ಬುದ್ದಿಸಂಯೋಗಂ ಲಭತೇ ಪೌರ್ವದೇಹಿಕಮ್ |

ಯತತೇ ಚ ತತೋ ಭೂಯಃ ಸಂಸಿದ್ದೌ ಕುರುನಂದನ ||

ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋsಪಿ ಸಃ |

ಜಿಜ್ಞಾಸುರಪಿ ಯೋಗಸ್ಯ ಶದ್ಬಬ್ರಹ್ಮಾತಿವರ್ತತೇ ||

ಪ್ರಯಾತ್ನಾತ್ ಯತಮಾನಸ್ತು ಯೋಗಿ ಸಂಶುದ್ದ ಕಿಲ್ಬಿಷಃ |

ಅನೇಕಜನ್ಮಸಂಸಿದ್ದಃ ತತೋ ಯಾತಿ ಪರಾಂ ಗತೀಮ್ ||

ತಪಸ್ವಿಭ್ಯೋsಧಿಕೋ ಯೋಗಿ ಜ್ಞಾನಿಭ್ಯೋsಪಿ ಮತೊsಧಿಕಃ |

ಕರ್ಮಿಭ್ಯಾಶ್ಚಾಧಿಕೋ ಯೋಗೀ ತಸ್ಮಮಾತ್ ಯೋಗೀ ಭವಾರ್ಜುನ ||

ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ |

ಶ್ರದ್ದಾವಾನ್ ಭಜತೇ ಯೋ ಮಾಂ ಸ ಮೇ ಯುಕ್ತ ತಮೋ ಮತಃ ||

                                               __ಭ. ಗೀ. ೬-೪೦ ರಿಂದ ೪೭

“ಧರ್ಮಾತ್ಮನಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅಂಥವನು ಸತ್ಕಾರ್ಯಗಳನ್ನು ಆಚರಿಸಿದವರ ಜೊತೆಯಲ್ಲಿ ಸ್ವರ್ಗದಲ್ಲಿ ಬಹುಕಾಲವಿದ್ದು, ಶುದ್ಧಾತ್ಮರಾದ ಮಾನವರ ಹೊಟ್ಟೆಯಲ್ಲಿ ಮತ್ತೆ ಜನಿಸುತ್ತಾನೆ. ಆತನು ತೇಜಸ್ವಿಗಳಾದ ಯೋಗಿಗಳ ಮನೆಯಲ್ಲೂ ಹುಟ್ಟಬಹುದು. ಆದರೆ ಅಂಥವರ ಮನೆಗಳಲ್ಲಿ ಹುಟ್ಟುವುದು ದುರ್ಲಭ. ಆಗ ಅಂಥವರು ತನ್ನ ಹಿಂದಿನ ಜನ್ಮದಲ್ಲಿ ಶ್ರಮಿಸಿದ ಯೋಗಭ್ಯಾಸವನ್ನು ಪಡೆದು ಮುಂದಿನ ಪರಿಪೂರ್ಣತೆಗೆ ತೊಡಗುತ್ತಾನೆ.

ಹಿಂದೆ ಗಳಿಸಿದ ವಿದ್ಯೆಯಿಂದ ಸಾಧನೆ ಮೂಲಕ ಮುಂದಿನ ಸದ್ಗತಿಗೆ ಪ್ರಯತ್ನಪಟ್ಟು, ಶುದ್ಧಾತ್ಮನಾಗಿ ಜನ್ಮಗಳು ಕಳೆದಂತೆಲ್ಲ ಅಂತಿಮ ಗುರಿಯನ್ನು ಮುಟ್ಟೆಮುಟ್ಟುತ್ತಾನೆ. ಸುಮ್ಮನೆ ವ್ರತಗಳು ಜ್ಞಾನ ಮತ್ತು ಸೇವಾ ಮಾರ್ಗಗಳನ್ನು ಅನುಸರಿಸುವ ಅವರಿಗಿಂತ ಹೆಚ್ಚಿನ ಸ್ಥಾನಕ್ಕೆ ಯೋಗಿಯು ಹೋಗುತ್ತಾನೆ. ಆದ್ದರಿಂದ ಎಲೈ ಅರ್ಜುನನೇ ! ನೀನು ಯೋಗಿಯಾಗು. ಎಲ್ಲರಿಗಿಂತ ಹೆಚ್ಚು ಹೆಚ್ಚಿನ ಯೋಗಿಯೆಂದರೆ ನನ್ನನ್ನು ಆರಾಧಿಸುವವನು ಮತ್ತು ಭಕ್ತಿಯಿಂದ ನನ್ನನ್ನು ಆಶ್ರಯಿಸುವವನು.

ಹಿಂದಿನ ಲೇಖನಅಶ್ವಗಂಧ
ಮುಂದಿನ ಲೇಖನಹಾಸ್ಯ