ಈ ದೇವಾಲಯ ಬಹಳ ಪುರಾತನವಾದದ್ದು ದೇವಾಲಯದ ಪಕ್ಕದಲ್ಲಿ ಕಣ್ಮ ನದಿಯು ಹರಿಯುತ್ತದೆ. ಅದ್ದರಿಂದ ಕಣ್ಣ ಮಹರ್ಷಿಗಳ ಸ್ಥಳವೆಂದು ಹೇಳುತ್ತಾರೆ. ಕಣ್ವ ನದಿಯ ತೀರದಲ್ಲಿ ಹಲವಾರು ವಿಷ್ಣು ದೇವಾಲಯಗಳಿವೆ, ಅದರಲ್ಲಿ ಈ ದೇವಾಲಯವು ಒಂದು.
ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಾಲಯವು ಗ್ರಾಮದಲ್ಲಿ ಕರಿ ತಿಮ್ಮಪ್ಪ ಎಂದು ಕರೆಯುವ ವಾಡಿಕೆ ಇದೆ.
ಇಲ್ಲಿ ಮೂಲ ದೇವರು ರಂಗನಾಥ ಸ್ವಾಮೀ ಶ್ರೀದೇವಿ ಭೂದೇವಿ ಸಮೇತವಾಗಿ ವಿರಾಜಮಾನವಾಗಿದ್ದಾನೆ. ಈ ಕ್ಷೇತ್ರದಲ್ಲಿ ಯಾರು ಭಕ್ತ ಭಾವದಿಂದ ಬೇಡಿಕೊಳ್ಳುತ್ತಾರೋ ಅವರಿಗೆ ಮನದಿಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಕಲ್ಯಾಣ ವೆಂಕಟೇಸ್ವಾಮಿ.
ಭಕ್ತಾದಿಗಳಿಗೆ ಕಲ್ಯಾಣವನ್ನು ಉಂಟುಮಾಡುತ್ತಾ ನೆಲೆಸಿರುವ ಸ್ವಾಮಿ ರಂಗನಾಥ ಸಂತಾನ ಭಾಗ್ಯ. ಅನಾರೋಗ್ಯದಿಂದ ಬಳಲುತ್ತಿರುವವರು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತ ಎಲ್ಲಾ ಸಮಸ್ಯೆಗಳಿಗೂ ಮಂಗಳವನ್ನುಂಟು ಮಾಡುವ ಕಲ್ಯಾಣ ರಂಗನಾಥಸ್ವಾಮಿ.
ಈ ದೇವಾಲಯವು 500 ವರ್ಷದ ಪುರಾತನವಾಗಿದೆ. 1999ರಲ್ಲಿ ದೀನೋದ್ಧಾರ ಮಾಡಲಾಗಿತ್ತು ಎರಡು ಸಾವಿರ ಕಾರ್ತಿಕ ಮಾಸ ಶುಕ್ಲ ಪಕ್ಷ ಶ್ರಾವಣ ನಕ್ಷತ್ರದಲ್ಲಿ ದೇವಸ್ಥಾನ ಪುನರ್ ನಿರ್ಮಾಣವಾಗಿ ಜೀರ್ಣೋದ್ಧಾರವಾಯಿತು. ಈ ದೇವಾಲಯ ಪ್ರತಿವರ್ಷವೂ ಉತ್ತನ ದ್ವಾದಶಿಯಲ್ಲಿ ಮೂರು ದಿವಸ ಕಾರ್ಯಕ್ರಮಗಳು ಇರುತ್ತವೆ. ಏಕಾದಶಿ ದಿವಸ ಕಲ್ಯಾಣೋತ್ಸವ,ದ್ವಾದಶಿಯ ದಿವಸ ಪುಷ್ಪವೃಂದಾವನೋತ್ಮವ,ಮತ್ತು ತುಳಸಿ ಕಲ್ಯಾಣೋತ್ಸವ ನೆರವೇರುತ್ತದೆ.
ಮಾರೆನೇ ದಿನ ಸ್ವಾಮಿಗೆ ಕಾರ್ ಅಭಿಷೇಕ ನಡೆಯುತ್ತದೆ ಶ್ರಾವಣ ಮಾಸ, ವಿಜಯದಶಮಿ ಸಂಕ್ರಾಂತಿ ಹಬ್ಬ ವಿಶೇಷ ಅಲಂಕಾರ ಪೂಜೆಗಳಿ ರುತ್ತವೆ. ವೈಕುಂಠ ಏಕಾದಶಿಯ ದಿವಸ ವಿಶೇಷವಾಗಿ ಭಕ್ತಾದಿಗಳು ಬಂದು ಭಾಗವಂತನಿಗೆ ಸೇವೆ ಸಲ್ಲಿಸುತ್ತಾರೆ. ವೈಕುಂಠ ದ್ವಾರದ ದರ್ಶನ ಇರುತ್ತದೆ ಈ ದೇವಾಲಯವು ಮೈಸೂರು ರಾಜರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬ ಪ್ರತೀತಿ ಇದೆ.