ಮನೆ ಸ್ಥಳೀಯ ತಾಮರ ಹೆಲ್ತ್ ಕೇರ್ ಸಂಸ್ಥೆಗೂ ನನಗೂ ಯಾವುದೇ ಸಂಬಂಧವಿಲ್ಲ: ಹುಣಸೂರು ರಿಜೀಶ್ ಸ್ಪಷ್ಟನೆ

ತಾಮರ ಹೆಲ್ತ್ ಕೇರ್ ಸಂಸ್ಥೆಗೂ ನನಗೂ ಯಾವುದೇ ಸಂಬಂಧವಿಲ್ಲ: ಹುಣಸೂರು ರಿಜೀಶ್ ಸ್ಪಷ್ಟನೆ

0

ಮೈಸೂರು: ತಾಮರ ಹೆಲ್ತ್ ಕೇರ್ ಸಂಸ್ಥೆಗೂ ನನಗೂ ಯಾವುದೇ ಸಂಬಂಧವಿಲ್ಲ. ನನಗೂ ತಾಮರ ಹೆಲ್ತ್ ಕೇರ್ ಸಂಸ್ಥೆಗೊ ಯಾವುದೇ ರೀತಿಯ ಪಾಲುದಾರಿಕೆಯಾಗಲಿ ಆಗಲಿ ಇಲ್ಲವೇ ಮಾಲೀಕತ್ವವಾಗಲಿ ಇರುವುದಿಲ್ಲ ಎಂದು ರಿಜೀಶ್ ಹುಣಸೂರು ಸ್ಪಷ್ಟನೆ ನೀಡಿದ್ದಾರೆ.

ಫೆ.20 ರಂದು ಸವಾಲ್ ವಾಹಿನಿಯಲ್ಲಿ ‘ತಾಮರ ಹೆಲ್ತ್ ಕೇರ್ ಸೆಂಟರ್ ನಲ್ಲಿ ಯುವತಿ ಸಾವು: ಕೊಲೆ ಶಂಕೆ’ ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ಸುದ್ದಿಯಲ್ಲಿ ಹುಣಸೂರು ರಿಜೀಶ್ ಅವರನ್ನು ಮಾಲೀಕರು ಎಂದು ತಿಳಿಸಲಾಗಿತ್ತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಮೈಸೂರು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಸಮಕ್ಷಮದಲ್ಲಿ ತಾಮರ ಹೆಲ್ತ್ ಕೇರ್ ಮಾಲೀಕರಾದ ಆಶಿಕಾ ಮಂದಣ್ಣ ಮತು ಅವರ ಪತಿಯಾದ ಮಂದಣ್ಣ ಅವರು, ಹುಣಸೂರಿನ ರಿಜೇಶ್ ಅವರನ್ನು ಸಂಸ್ಥೆಯ ಮಾಲೀಕರೆಂದು ಅಧಿಕಾರಿಗಳ ಸಮಕ್ಷಮದಲ್ಲಿ ತಿಳಿಸಿದ್ದರು.

ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ  ಹುಣಸೂರಿನ ರಿಜೇಶ್ ತಾನೂ ಪಾಲುದಾರನಲ್ಲ ಎಂದು ಆ ಸಮಯದಲ್ಲಿ ತಿಳಿಸಿರುವುದಿಲ್ಲ. ಅಧಿಕಾರಿಗಳು ಮತ್ತು  ಸಭೆಯಲ್ಲಿ ಭಾಗವಹಿಸಿದ್ದ ಕೆಲವು ಸಾರ್ವಜನಿಕರು ಸೇರಿದಂತೆ ಬಾತ್ಮಿದಾರರು ನೀಡಿದ ಹೇಳಿಕೆಯ ಆಧಾರದ ಮೇಲೆ ಸುದ್ದಿಯಲ್ಲಿ ಹುಣಸೂರಿನ ರಿಜೇಶ್ ಅವರನ್ನು ಮಾಲೀಕರು ಎಂದು ಸೇರಿಸಲಾಗಿತ್ತು. 

ಆದರೆ ಇಂದು ರಿಜೀಶ್ ಹುಣಸೂರು ಅವರು ವಾಹಿನಿಯ ಅಧೀಕೃತ ಇ-ಮೇಲ್ ಐಡಿಗೆ ಮತ್ತು ವಾಟ್ಸಪ್ ಸಂಖ್ಯೆಗೆ ಸ್ಪಷ್ಟನೆಯನ್ನು ಕಳುಹಿಸಿದ್ದಾರೆ.

ಸ್ಪಷ್ಟನೆ ಇಂತಿದೆ

ದಿನಾಂಕ 20 ಫೆಬ್ರವರಿ 2024 ರಂದು ಸವಾಲ್ ಮಾಧ್ಯಮದಲ್ಲಿ ನೀವು ಮಾಡಿರುವ ತಾಮರ ಹೆಲ್ತ್ ಕೇರ್ ಮೈಸೂರು ಈ ಸಂಸ್ಥೆಯ ಬಗ್ಗೆ ಮಾಡಿರುವ ಸುದ್ದಿಯಲ್ಲಿ ರಿಜೀಶ್ ಹುಣಸೂರು ಎಂಬ ನನ್ನನ್ನು ಈ ಸಂಸ್ಥೆಗೆ ಇವರು ಸಹ ಮಾಲೀಕರೆಂದು ಬಿಂಬಿಸಿರುತ್ತೀರಿ ಎಂದು ಛಾಯಾ ಚಿತ್ರದೊಂದಿಗೆ ಹೇಳಿರುತ್ತೀರಿ. ಇದು ಸತ್ಯಕ್ಕೆ ದೂರಾದ ಹೇಳಿಕೆಯಾಗಿದ್ದು, ನನಗೂ ತಾಮರ ಹೆಲ್ತ್ ಕೇರ್ ಸಂಸ್ಥೆಗೊ ಯಾವುದೇ ರೀತಿಯ ಶೇರ್ ಆಗಲಿ ಮಾಲಿಕತ್ವವಾಗಲಿ ಇರುವುದಿಲ್ಲ ಎಂದು ಈ ಮೂಲಕ ಖಚಿತಪಡಿಸುತ್ತಿದ್ದೇನೆ .

ಹುಣಸೂರು ರಿಜೇಶ್ ಅವರ ಹೇಳಿಕೆಯ ಆಧಾರದ ಮೇಲೆ ‘ತಾಮರ ಹೆಲ್ತ್ ಕೇರ್ ಸೆಂಟರ್ ನಲ್ಲಿ ಯುವತಿ ಸಾವು: ಕೊಲೆ ಶಂಕೆ’ ಸುದ್ದಿಯಲ್ಲಿ ಅವರ ಹೆಸರನ್ನು ಕೈಬಿಡಲಾಗಿರುತ್ತದೆ.

  • ಟ್ಯಾಗ್ಗಳು
  • Mysore
ಹಿಂದಿನ ಲೇಖನಸಿಸಿಎಲ್‌: ಫೆ.23ರಿಂದ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌
ಮುಂದಿನ ಲೇಖನಮಾರ್ಚ್ 4 ರಿಂದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ