ಮನೆ ಅಂತಾರಾಷ್ಟ್ರೀಯ ತಮಿಳುನಾಡಿನ 8 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ತಮಿಳುನಾಡಿನ 8 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

0

ರಾಮೇಶ್ವರಂ: ಶ್ರೀಲಂಕಾ ನೌಕಾಪಡೆ ಸೋಮವಾರ (ಆಗಸ್ಟ್ 27) ಡೆಲ್ಫ್ಟ್ ದ್ವೀಪದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಎಂಟು ತಮಿಳುನಾಡು ಮೀನುಗಾರರನ್ನು ಬಂಧಿಸಿರುವ ಕುರಿತು ವರದಿಯಾಗಿದೆ.

Join Our Whatsapp Group

ಮೀನುಗಾರರು ಸೋಮವಾರ ಮುಂಜಾನೆ ಹೊರಟು ಧನುಷ್ಕೋಡಿ ಮತ್ತು ತಲೈಮನ್ನಾರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾಪಡೆ ಗಡಿ ಮೀರಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಾಡದೋಣಿ ಸಹಿತ ಅದರಲ್ಲಿದ್ದ 8 ಮಂದಿಯನ್ನು ಬಂಧಿಸಿ ನೌಕಾಪಡೆ ಶಿಬಿರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದೆ.

ಘಟನೆ ಕುರಿತು ಹೇಳಿಕೆ ನೀಡಿರುವ ರಾಮೇಶ್ವರಂ ಮೀನುಗಾರಿಕೆ ಸಹಾಯಕ ನಿರ್ದೇಶಕ, ರಾಮೇಶ್ವರಂನಿಂದ 430 ಯಾಂತ್ರೀಕೃತ ದೋಣಿಗಳು ಸೋಮವಾರ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿತ್ತು. ಈ ವೇಳೆ ಗಡಿ ದಾಟಿದ ಆರೋಪ ಹೊರಿಸಿ ಲಂಕಾ ನೌಕಾಪಡೆ 8 ಮೀನುಗಾರರನ್ನು ಬೋಟ್ ಸಹಿತ ಬಂಧಿಸಿದೆ. ಕೂಡಲೇ ಕೇಂದ್ರ ಮಧ್ಯಸ್ಥಿಕೆ ವಹಿಸಿ ಮೀನುಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದೆ.

ಇದಲ್ಲದೆ, ಶ್ರೀಲಂಕಾ ನೌಕಾಪಡೆಯ ನಿರಂತರ ಬಂಧನದಿಂದಾಗಿ ತಮಿಳುನಾಡಿನ ಕರಾವಳಿ ಪ್ರದೇಶದಿಂದ ಮೀನು ಹಿಡಿಯಲು ತೆರಳುವ ಮೀನುಗಾರರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.