ಮನೆ ಸುದ್ದಿ ಜಾಲ ರಾಜ್ಯದ 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ; ಇಲ್ಲಿದೆ ಮಾಹಿತಿ

ರಾಜ್ಯದ 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ; ಇಲ್ಲಿದೆ ಮಾಹಿತಿ

0

73ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ಪೊಲೀಸ್ ಪದಕ ಹಾಗೂ ರಾಷ್ಟ್ರಪತಿ ಪದಕಗಳನ್ನು ಘೋಷಣೆ ಮಾಡಲಾಗಿದ್ದು, ಈ ಬಾರಿ ಕರ್ನಾಟಕ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಹಾಗೂ 19 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸೇವಾ ಕಾರ್ಯಕ್ಕೆ ಮೆಚ್ಚಿ ಪೊಲೀಸ್ ಪದಕ ಸಿಕ್ಕಿದೆ.

ದೇಶದ ವಿವಿಧ ರಾಜ್ಯಗಳ ಪೊಲೀಸ್​ ಸಿಬ್ಬಂದಿ ಪದಕಗಳನ್ನು ಪಡೆದಿದ್ದು, ಈ ಸಂಬಂಧ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಶೌರ್ಯಕ್ಕಾಗಿ ನೀಡಲಾಗುವಂತ ಪೊಲೀಸ್ ಪದಕವನ್ನು189 ಪೊಲೀಸರಿಗೆ, ರಾಷ್ಟ್ರಪತಿ ಪೊಲೀಸ್ ಪದಕವನ್ನು 88 ಮಂದಿಗೆ ಹಾಗೂ ಉತ್ತಮ ಸೇವೆಗಾಗಿ ನೀಡುವಂತ ಪೊಲೀಸ್ ಪದಕವನ್ನು 662 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ನೀಡಲಾಗಿದೆ.

ಬನ್ನಿಕಲ್ ದಯಾನಂದ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಗುಪ್ತಚರ ಇಲಾಖೆ ಹಾಗೂ ಹಿತೇಂದ್ರ ಆರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕ್ರೈಂ ಹಾಗೂ ಟೆಕ್ನಿಕಲ್ ಸರ್ವಿಸ್, ಇವರಿಗೆ ರಾಷ್ಟ್ರಪತಿ ಪದಕ ಸಿಕ್ಕಿದೆ. ಇನ್ನು ರಾಜ್ಯದ 19 ಮಂದಿ ಪೊಲೀಸರಿಗೆ ಪೊಲೀಸ್ ಪದಕ ಸಿಕ್ಕಿದ್ದು, ಆ ಪಟ್ಟಿ ಕೆಳಗಿನಂತಿದೆ.

-ಬಿ. ದಯಾನಂದ್, ಎಡಿಜಿಪಿ, ಗುಪ್ತಚರ ಇಲಾಖೆ
-ಆರ್. ಹಿತೇಂದ್ರ, ಎಡಿಜಿಪಿ, ಕ್ರೈಂ & ಟೆಕ್ನಿಕಲ್ ಸರ್ವಿಸ್
-ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ (ಸಂಚಾರ)
-ರಾಮಯ್ಯ ಜನಾರ್ದನ್, KSRP 5ನೇ ಬೆಟಾಲಿಯನ್
-ಡಿ. ಕುಮಾರ್, ಎಸಿಪಿ, ಹಲಸೂರು ಉಪವಿಭಾಗ
-ಪ್ರಭುದೇವ್ ರವಿಪ್ರಸಾದ್, ಹುಣಸೂರು DySP
-ವೆಂಕಟಪ್ಪನಾಯಕ‌ ಓಲೇಕಾರ್, ಸಿಂಧನೂರು DySP
-ಎಂ. ಮಲ್ಲೇಶಯ್ಯ, DySP, ಆನೇಕಲ್ ಉಪವಿಭಾಗ
-ಯಶವಂತಕುಮಾರ್, DySP, ಸೈಬರ್ ಕ್ರೈಂ ಸಿಐಡಿ
-ಗಂಗಾಧರ್ ಮಠಪತಿ, ಎಸಿಪಿ, ಸಿಸಿಆರ್‌ಬಿ, ಕಲಬುರಗಿ
-ಕೆ.ಎಂ. ರಮೇಶ್. DySP, ಕರ್ನಾಟಕ ಲೋಕಾಯುಕ್ತ
-ಎಸ್‌.ಬಿ. ಕೆಂಪಯ್ಯ, ಸಿಐಡಿ ಡಿವೈಎಸ್‌ಪಿ
-ಎಸ್. ಕೃಷ್ಣಮೂರ್ತಿ, ಲೋಕಾಯುಕ್ತ ಇನ್ಸ್‌ಪೆಕ್ಟರ್
-ಸಿ.ಎಸ್. ಸಿಂಪಿ, KSRP, 1ನೇ ಬೆಟಾಲಿಯನ್ ಬೆಂಗಳೂರು
-ಮೊಹಮ್ಮದ್ ದನೀಫ್, ARSIA, ಡಿಆರ್ ಬೆಳಗಾವಿ
-ಎಮ್.ಎಚ್. ರೇವಣ್ಣ, ಎಎಸ್‌ಐ, ಜಂಟಿ ಸಿಪಿ ಕಚೇರಿ ಬೆಂಗಳೂರು

ಹಿಂದಿನ ಲೇಖನಕಾಂಗ್ರೆಸ್ ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರಮೇಶ್ ಜಾರಕಿಹೊಳಿ
ಮುಂದಿನ ಲೇಖನ73ನೇ ಗಣರಾಜ್ಯೋತ್ಸವ: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ