ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಗುರುವಾರ ವಿಜೃಂಭಣೆಯಿಂದ ಶ್ರೀ ಮಹಾಬಲೇಶ್ವರ ಸ್ವಾಮಿಯ ರಥೋತ್ಸವವು ನೆರವೇರಿತು.
ಆಗಮಿಕರಾದ ಕುಮಾರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕಗಳು ನೆರವೇರಿತು. ನಂತರ ಮಹಾಬಲೇಶ್ವರ ಸ್ವಾಮಿ ಅವರ ಉತ್ಸವ ಮೂರ್ತಿಯನ್ನು ತಂದು ರಥದಲ್ಲಿ ಕುಳ್ಳಿರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಭಕ್ತಾದಿಗಳು ಮಹಾಬಲೇಶ್ವರನಿಗೆ ಜಯವಾಗಲಿ, ಹರ ಹರ ಮಹಾದೇವ ಎಂದು ಕೂಗುತ್ತಾ. ರಥವನ್ನು ಎಳೆದರು. ಅರಮನೆ ವಾದ್ಯ ಹಾಗೂ ಪೊಲೀಸ್ ಬ್ಯಾಂಡ್‌ಗಳು ಉತ್ಸವದ ಮುಂದೆ ಸಾಗಿದವು. ಮೈಸೂರು-ಕೊಡಗು ಸಂಸದರು ಹಾಗೂ ರಾಜವಂಶಸ್ಥರೂ ಆದ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮುಂಡೇಶ್ವರಿ ಹಾಗೂ ಮಹಾಬಲೇಶ್ವರನ ದರ್ಶನ ಪಡೆದರು.














