ಮನೆ ಅಪರಾಧ ಮಾಂಸಕ್ಕಾಗಿ 8 ಬಾವಲಿಗಳನ್ನು ಕೊಂದಿದ್ದ ನಾಲ್ವರ ಬಂಧನ

ಮಾಂಸಕ್ಕಾಗಿ 8 ಬಾವಲಿಗಳನ್ನು ಕೊಂದಿದ್ದ ನಾಲ್ವರ ಬಂಧನ

0

ತುಮಕೂರು: ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದಿದ್ದ ನಾಲ್ವರನ್ನು ಕುಣಿಗಲ್ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಮಾಗಡಿ ತಾಲ್ಲೂಕಿನ ಹೊಂಬಾಳಮ್ಮ ಪೇಟೆಯ ರಂಗನಾಥ, ರಾಮಕೃಷ್ಣ, ಶಿವಶಂಕರ ಹಾಗೂ ರಂಗನಾಥ ಬಂಧಿತರು.

ಕಾಡರಾಮನಹಳ್ಳಿ ಜಮೀನೊಂದರ ಮರದಲ್ಲಿದ್ದ ಎಂಟು ಬಾವಲಿಗಳನ್ನು ಆರೋಪಿಗಳು ಹೊಡೆದು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ಹುಲಿಯೂರುದುರ್ಗ ವಲಯ ಅರಣ್ಯ ಅಧಿಕಾರಿ ಜಗದೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸತ್ತ ಬಾವಲಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಿಂದಿನ ಲೇಖನನಿವೇಶನ ಜಾಗದ ವಿಚಾರಕ್ಕೆ ಗಲಾಟೆ: ವ್ಯಕ್ತಿಯ ಬರ್ಬರ ಕೊಲೆ
ಮುಂದಿನ ಲೇಖನಸುಶಿಕ್ಷಿತ, ದೈವಭಕ್ತನಾಗಿದ್ದ ಕಾರಣಕ್ಕೆ ಸಾಕ್ಷಿ ಒಳ್ಳೆಯವ ಎಂದು ನ್ಯಾಯಾಲಯಗಳು ಊಹಿಸಲಾಗದು: ಸುಪ್ರೀಂ