ಮನೆ ದೇವಸ್ಥಾನ ಶ್ರೀ ಮುತ್ತರಾಯ ಸ್ವಾಮಿ ದೇವಸ್ಥಾನ

ಶ್ರೀ ಮುತ್ತರಾಯ ಸ್ವಾಮಿ ದೇವಸ್ಥಾನ

0

       ಈ ಪುಣ್ಯಕ್ಷೇತ್ರವು ಕದಂಬ ಕ್ಷೇತ್ರವಾಗಿದೆ ವ್ಯಾಸರಾಯರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಪ್ರಾಣದೇವರು ಮುತ್ತು ರಾಯ ಸ್ವಾಮಿ ಎಂಬ ಹೆಸರಿನಿಂದ ಪ್ರಖ್ಯಾತ ನಾಗಿದ್ದಾನೆ ಕ್ಷೇತ್ರದಲ್ಲಿ ವೈಷ್ಣವ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳು ನಡೆಯುತ್ತದೆ.

Join Our Whatsapp Group

        ಪ್ರತಿ ವರ್ಷ ಮಾಘ ಮಹೋತ್ಸವ ಶ್ರೀ ರಾಮನವಮಿ ಹನುಮ ಜಯಂತಿ,ವಿಶೇಷ ಪೂಜೆಗಳು ನಡೆಯುತ್ತವೆ

       ಶ್ರಾವಣ ಮಾಸದಲ್ಲಿ ಅನ್ನದಾಸೋಹ ಕೂಡ ನಡೆಯುತ್ತದೆ ಭಕ್ತಾದಿಗಳು ಇಲ್ಲಿ 12 ದಿವಸ 24 ದಿವಸ ಅಥವಾ 48 ದಿವಸಗಳ ಮಂಡಲ ಸೇವೆ ಎಂದು ಭಗವಂತನ ಸೇವೆ ಮಾಡಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳುತ್ತಾರೆ.ಮತ್ತು ಗ್ರಹ ದೋಷ ಆರೋಗ್ಯ ಸಮಸ್ಯೆಯಿಂದ ಬಳಲುವವರು ಇಲ್ಲಿ ಸೇವೆ ಸಲ್ಲಿಸುತ್ತಾರೆ.ದೇವಾಲಯದ ಸುತ್ತ ಪ್ರದಕ್ಷಣೆ ಮತ್ತು ಉರಳು ಸೇವೆಯ ಮುಖಾಂತರ ಸೇವೆ ಸಲ್ಲಿಸುತ್ತಾರೆ. 2014ರಲ್ಲಿ ಊರಿನ ಎಂ.ಎಲ್.ಎ ಶ್ರೀಯುತ ರಾಮಕೃಷ್ಣ ಮತ್ತು ನಾಗೇಂದ್ರ ಇವರುಗಳು ದೇವಸ್ಥಾನದ ಜೀರ್ಣೋದರಕ್ಕಾಗಿ ಬಹಳ ಸಹಾಯ ಮಾಡಿದ್ದಾರೆ.

        ಭಕ್ತಾದಿಗಳು ದೇವಸ್ಥಾನದ ಸಹಾಯ ಮಾಡಿದ್ದಾರೆ  ಸಹಾಯ ಮಾಡದಿದ್ದರೆ ಮತ್ತೊಂದು ವಿಶೇಷವೇನೆಂದರೆ ಪಂಚಮುಖಿ ಗಣೇಶನನ್ನು ಇಡ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ.ಮತ್ತು ಸಮುದಾಯ ಭವನವಿದೆ ಹಿಂದಿನ ಕಾಲದಿಂದಲೂ ಇಲ್ಲಿ ಬಂದು ಮದುವೆಗಳನ್ನು ಮಾಡುತ್ತಿದ್ದಾರೆ.

       ದೇವಸ್ಥಾನದ ಮುಂಭಾಗದಲ್ಲಿ ಕೋಳಿ ರಾಯರ ಬೆಟ್ಟವಿದೆ ಹಿಂದೆ ಪಾಳೇಲೆಗಾರರು ನಿವಾಸ ಮಾಡುತ್ತಿದ್ದರೆಂಬುದಕ್ಕೆ ಅಲ್ಲಿರುವ ಮಂಟಪದಲ್ಲಿ ಕುರುಹುಗಳಿವೆ ಮತ್ತು ಈ ಕ್ಷೇತ್ರಗಳಲ್ಲಿ ಒಂದು ಕಲ್ಯಾಣಿ ಇದೆ ಬೇಸಿಗೆಯಲ್ಲಿ ಕೂಡಾ ಕಲ್ಯಾಣಿಯಲ್ಲಿ ನೀರು ಸಮೃದ್ಧಿಯಾಗಿರುತ್ತದೆ.

       ಬೆಟ್ಟದ ಅಮ್ಮ ತಾಯಿಯ ದೇವಸ್ಥಾನವಿದೆ, ಹಿಂದೆ  ಋಷಿಮುನಿಗಳು ಈ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದ ಪ್ರತೀತಿ ಇದೆ.