ಮನೆ ಮನರಂಜನೆ ಮೈಸೂರಿನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ ಶೂಟಿಂಗ್

ಮೈಸೂರಿನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ ಶೂಟಿಂಗ್

0

ಸಿನಿಮಾ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಾ ಬಿಝಿಯಾಗುತ್ತಿರುವುದು ನಿಮಗೆ ಗೊತ್ತೇ ಇದೆ. ಸದ್ಯ ಶ್ರೀಲೀಲಾ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ.

Join Our Whatsapp Group

ರಾಮ್‌ ಪೋತಿನೇನಿ ನಾಯಕರಾಗಿರುವ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಬೋಯಪೋತಿ ಶ್ರೀನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರಕ್ಕೆ “ಬೋಯಪೋತಿ ರಾಪೋ’ ಎಂದು ಟೈಟಲ್‌ ಇಡಲಾಗಿದ್ದು, ಸದ್ಯ ಈ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈಗಾಗಲೇ ತೆಲುಗಿನಲ್ಲಿ “ಪೆಳ್ಳಿ ಸಂದಡಿ’ ಚಿತ್ರದ ಮೂಲಕ ನಾಯಕಿಯಾಗಿ ಟಾಲಿವುಡ್‌ನ‌ಲ್ಲಿ ಅಕೌಂಟ್‌ ಓಪನ್‌ ಮಾಡಿರುವ ಶ್ರೀಲೀಲಾ, ಈಗ ತೆಲುಗಿನ ಮತ್ತೂಂದು ಬಿಗ್‌ಬಜೆಟ್‌ ಸ್ಟಾರ್‌ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನು ತೆಲುಗಿನಲ್ಲಿ ಶ್ರೀಲೀಲಾ ಅಭಿನಯದ ಮೊದಲ ಸಿನಿಮಾ “ಪೆಳ್ಳಿ ಸಂದಡಿ’ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಹಿಟ್‌ ಆಗದಿದ್ದರೂ, ಈ ಸಿನಿಮಾದಲ್ಲಿ ಶ್ರೀಲೀಲಾ ಅವರ ಗ್ಲಾಮರ್‌ ಮತ್ತು ಅಭಿನಯ ಟಾಲಿವುಡ್‌ ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

 “ಪೆಳ್ಳಿ ಸಂದಡಿ’ ಬಳಿಕ ತೆಲುಗಿನಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳ ಆಫ‌ರ್‌ ಶ್ರೀಲೀಲಾ ಅವರನ್ನು ಹುಡುಕಿಕೊಂಡು ಬರುತ್ತಿರುವುದರಿಂದ, ಶ್ರೀಲೀಲಾ ಅವರ ಸಂಭಾವನೆಯಲ್ಲೂ ಏರಿಕೆಯಾಗಿದೆ ಎನ್ನಲಾಗುಗಿದೆ.