ಮನೆ ದೇವಸ್ಥಾನ ಶೃಂಗೇರಿ ದೇವಸ್ಧಾನ

ಶೃಂಗೇರಿ ದೇವಸ್ಧಾನ

0

ತೀರ್ಥಪ್ರಧಾನವಾದ ಧಾರ್ಮಿಕ ಕ್ಷೇತ್ರ. ಅದೇ ಶಂಕರಾಚಾರ್ಯರ ಪಾದಸ್ಪರ್ಶದಿಂದ ಪುನೀತವಾಗಿರುವ ಸ್ಥಳ. ಕರ್ನಾಟಕದಲ್ಲಿ ಅತ್ಯಂತ ಹೆಸರಾದ ಕ್ಷೇತ್ರ ಶೃಂಗೇರಿ. ಇಲ್ಲಿ ಋಷ್ಯಶೃಂಗಮುನಿ ಹುಟ್ಟಿದನೆಂದು ಊರಿಗೆ ಈ ಹೆಸರಿದೆ ಎನ್ನಲಾಗಿದೆ.
ಅದ್ವೈತ ತತ್ವವನ್ನು ಜಗತ್ತಿಗೆ ಸಾರಿದ ಆದಿಶಂಕರಾಚಾರ್ಯರು ಸ್ಥಾಪಿಸಿದ ಮಠ ಮತ್ತು ಶಾರದಾ ಪೀಠ ಇಲ್ಲಿದೆ. ಈ ಮಠದ ಪರಂಪರೆಯಲ್ಲಿ ಅನೇಕ ತಪಸ್ವಿಗಳು ವೇದಭಾಷ್ಯಕಾರರು ಧರ್ಮ ಪ್ರಚಾರಕರು ಆಗಿ ಹೋಗಿದ್ದಾರೆ.

Join Our Whatsapp Group


ಕ್ರಿ.ಶ. ಎಂಟನೇ ಶತಮಾನದಲ್ಲಿ ಆದಿಶಂಕರರು ದಕ್ಷಿಣ ಭಾರತದಲ್ಲಿ ಸಂಚರಿಸುತ್ತಿದ್ದಾಗ ತುಂಗಾ ನದಿಯ ದಡಕ್ಕೆ ಬಂದರು. ಅಲ್ಲಿ ಪ್ರಶಾಂತತೆಗೆ ಮಾರುಹೋದರು, ಧ್ಯಾನ ಸಕ್ತಾರಾಗಿದ್ದು ಕಣ್ಣು ಬಿಟ್ಟಾಗ ಹಾವು ಬಂದು ಪ್ರಸಾವಿಸುತ್ತಿದ್ದ ಕಪ್ಪೆಗೆ ಹೆಡೆಬಿಚ್ಚಿ ನೆರಳು ನೀಡುತ್ತಿದ್ದನ್ನು ಕಂಡುಬಂದಿತು. ಭೂಗುಣವನ್ನು ಗ್ರಹಿಸಿ ಶಂಕರರು ಅದನ್ನು ಮಠಸ್ಥಾಪಿಸಿ ಶಾರದೆಯನ್ನು ಕರೆತಂದು ಪ್ರತಿಷ್ಠಾಪಿಸಿದರು. ಶಾರದಾ ದೇವಾಲಯ ಅಮೋಘವಾಗಿದೆ. ಶಾರದಾ ವಿಗ್ರಹ ನೋಡಲು ಕಣ್ಣು ಸಾಲದು. ಬೃಹತ್ ಪ್ರಮಾಣದ ದ್ರಾತಾರವು ದ್ವಾರಪಾಲಕರು, ಮಹಿಷಾಸುರ ಮರ್ದಿನಿ, ರಾಜರಾಜೇಶ್ವರಿ ವಿಗ್ರಹಗಳಿಂದ ಅತ್ಯಂತ ಮನೋಹರವಾಗಿದೆ.


ವಿದ್ಯಾಶಂಕರಯಲ್ಲಿ ಇನ್ನೊಂದು ದೇವಾಲಯ. ಮೂರಡಿ ಎತ್ತರದ ಪೀಠದ ಮೇಲೆ ದೇವಾಲಯ ನಿಂತಿದ್ದು, ಇದರ ದೊಡ್ಡ ವ್ಯಾಸ ಭಾರತದಲ್ಲಿಯೇ ಅಪೂರ್ವ. ಇದರಲ್ಲಿ 104 ವಿಗ್ರಹಗಳಿವೆ. ಒಳಭಾಗದಲ್ಲಿ ಗೊತ್ತಾದ ರಾಶಿಗಳ ಸಂಕೇತವಾಗಿ 12 ಕಂಬಗಳಿವೆ. ಅವುಗಳ ಮೇಲಿರುವ ಸಿಂಹಗಳ ಬಾಯಲ್ಲಿ ಓಡಿಯಾಡುವ ಕಲ್ಲಿನ ಗುಂಡುಗಳಿವೆ. ಪ್ರತಿ ರಾಶಿಯಲ್ಲಿ ಬಾಗಿಲಿನಿಂದ ತೂರಿ ಬರುವ ಉದಯ ಸೂರ್ಯನ ಕಿರಣಗಳು ಆಯಾ ರಾಶಿ ಕಂಬದ ಮೇಲೆ ಬೀಳುತ್ತದೆ.


ತುಂಗಾ ನದಿಯ ಇನ್ನೊಂದು ದಡದಲ್ಲಿ ನರಸಿಂಹ ವನವಿದೆ. ಇಲ್ಲಿ ನರಸಿಂಹ ಭಾರತಿಗಳು, ಚಂದ್ರಶೇಖರ ಭಾರತಿಗಳ ಕೃಷ್ಣ ಶಿಲೆಯ ಸಮಾಧಿಗಳಿವೆ. ಇವರು ಶೃಂಗೇರಿ ಪೀಠಾಧಿಪತಿಗಳಾಗಿದ್ದವರು. ಈಗಿನವರು ಶ್ರೀ ಭಾರತೀ ತೀರ್ಥ ಸ್ವಾಮಿಗಳು.
ಪ್ರತಿ ವರ್ಷ ಶೃಂಗೇರಿಯಲ್ಲಿ ಅನೇಕ ಉತ್ಸಾವಗಳು ಜರುಗುತ್ತದೆ. ನವರಾತ್ರಿ ಉತ್ಸವ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.