ಈ ಪುಣ್ಯಕ್ಷೇತ್ರವು ಹಲಗೂರಿನಿಂದ ಆರು ಕಿಲೋಮೀಟರ್ ದೂರದಲ್ಲಿರುವ ಗುರುವಿನ ಪುರದಲ್ಲಿದೆ.
ಆದಿ ಗುರು ನಿರ್ವರಣೇಶ್ವರರು ಉತ್ತರಭಾರತದಿಂದ ಪ್ರವಾಸವನ್ನು ಮಾಡುತ್ತಾ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಮೈಸೂರು ಮಹಾಸಂಸ್ಥಾನಕ್ಕೆ ಬರುತ್ತಾರೆ.ಮೈಸೂರು ಮಹಾಸಂಸ್ಥಾನದಲ್ಲಿ ತಿಮ್ಮಮಣಿ ಎಂಬ ಆಗಿನ ಪಟ್ಟದ ರಾಣಿ.ಅರಮನೆಯ ರಾಜರ ಕಾಯಿಲೆಯನ್ನು ನಿರ್ವಾಹಣೇಶ್ವರನು ನಾಟಿ ಔಷಧಿಯನ್ನು ಬಳಸಿ ರಾಜರಿಗೆ ಇದ್ದಂತಹ ಸಮಸ್ಯೆಯನ್ನು ಅವರು ಸರಿಪಡಿಸುತ್ತಾರೆ. ಅಲ್ಲಿಂದ ಮುಂದೆ ನಿರ್ವಣೇಶ್ವರರು ಮತ್ತೆ ಪ್ರವಾಸ ಕೈಗೊಳ್ಳುತ್ತಾರೆ. ಹೀಗೆ ಪ್ರವಾಸ ಮಾಡುತ್ತಾ ಅನೇಕ ಕ್ಷೇತ್ರಗಳನ್ನು ಸಂಚರಿಸಿ ಈ ಗುರುವಿನಪುರದ ಗ್ರಾಮಕ್ಕೆ ಬಂದು ಅಲ್ಲಿನ ತೋಪನ್ನು ಮತ್ತು ಪ್ರಕೃತಿ ಸೌಂದರ್ಯವನ್ನು, ನದಿಯನ್ನು ಕಂಡ ಗುರುಗಳು ನದಿ ತೀರದಲ್ಲಿ ಜಮ್ಮು ನೇರಳೆ ಮರದ ಕೆಳಗೆ ಒಂದು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಾರೆ.
ಅವರ ಹೆಸರಿಗೆ ಮಾತ್ರ ನಿರ್ವರಣೇಶ್ವರರು ಆಗಿರಲಿಲ್ಲ.ಅವರು ಜೀವನದಲ್ಲಿ ಯಾವಾಗಲೂ ವಿವಸ್ತ್ರಧಾರಿಯಾಗಿ ನಿರ್ವರಣೇಶ್ವರರು ಜೀವನ ಕಳೆಯುತ್ತಿದ್ದರು. ಬಹುದಿನಗಳ ಸಮಯ ಹೀಗೆ ಜೀವನ ಸಾಗುತ್ತಿತ್ತು. ಮೈಸೂರು ರಾಜರಿಗೆ ಗುರುಗಳು ಊರಿಗೆ ಬಂದ ವಿಷಯ ತಿಳಿಯುತ್ತದೆ. ತಮ್ಮ ಕಾಯಿಲೆಯನ್ನು ಗುಣಪಡಿಸಿದ ಗುರುಗಳಿಗೆ ಏನಾದರೂ ದೇಣಿಗೆ ನೀಡಬೇಕೆಂದು. ರಾಜ ಭಟ್ಟರಿಗೆ ಹೇಳಿ ಗುರುಗಳನ್ನು ಅರಮನೆಗೆ ಕರೆದುಕೊಂಡು ಬರಲು ಕಳಿಸುತ್ತಾರೆ. ರಾಜ ಭಟ್ಟರು ಬಂದು ಎಲ್ಲಾ ಕಡೆ ಹುಡುಕಿದಾಗ ಗುರುಗಳು ಅವರಿಗೆ ಸಿಗುತ್ತಾರೆ ರಾಜ್ಯಭಟ್ಟರು ಗುರುಗಳ ಬಳಿ ಬಂದು ರಾಜರು ನಿಮ್ಮನ್ನು ಅರಮನೆಗೆ ಕರೆದುಕೊಂಡು ಬರಲು ಹೇಳಿದ್ದಾರೆ ನಿಮಗೆ ರಾಜ್ಯ ದೇಣಿಗೆಯನ್ನು ನಿಡಬೇಕು ರಾಜಾಶ್ರಮವನ್ನು ನಿಮಗೆ ಕೊಡಬೇಕು ಎಂದು ರಾಜರು ಇಚ್ಛೆ ಪಟ್ಟಿದ್ದಾರೆ ತಾವು ದಯಮಾಡಿ ನಮ್ಮ ಆಸ್ಥಾನಕ್ಕೆ ಬರಬೇಕು ಎಂದು ಕೇಳಿಕೊಳ್ಳುತ್ತಾರೆ.
ಗುರುಗಳು ಆದಕ್ಕೆ ಒಪ್ಪುವುದಿಲ್ಲ.ನಾನು ಒಂದು ಸಾರಿ ಆ ಸ್ಥಳ ಬಿಟ್ಟೆ ಎಂದರೆ ಮತ್ತೆ ಬರಲು ಸಾಧ್ಯವಿಲ್ಲ ನೀವು ಏನು ಕೊಡಬೇಕೋ ಅದನ್ನು ಮಠಕ್ಕೆ ದೇಣಿಗೆ ಕೊಡಬಹುದು ಎಂದು ಹೇಳುತ್ತಾರೆ ತಿಮ್ಮಮಣಿ ರಾಣಿ ಗುರುಗಳಿಗೆ ಐದು ಎಕರೆ ಜಮೀನನ್ನು ಧಾನವಾಗಿ ಕೊಡುತ್ತಾರೆ.ಕೊಟ್ಟಂತಹ ರಾಜಶ್ರಯದ ಆಸ್ತಿ ಇವತ್ತಿಗೂ ಮಠದ ಹೆಸರಿನಲ್ಲಿದೆ.ಗುರುಗಳು ಮಾತ್ರ ಜಮ್ಮುನೇರಳೆ ಮರದ ಕೆಳಗೆ ವಾಸಮಾಡುತ್ತಿದ್ದರು. ಅವರು ಒಂದು ಗೋವನ್ನು ಸಾಕುತ್ತಾರೆ ಗೋವಿನ ಕುತ್ತಿಗೆಗೆ ಒಂದು ಗಂಟೆಯನ್ನು ಕಟ್ಟಿ ಅದನ್ನು ಭಿಕ್ಷೆಗೆ ಕಳಿಸುತ್ತಾರೆ. ನೀ ತಂದ ಆಹಾರದಿಂದ ಜೀವನ ಸಾಗಿಸಬೇಕೆಂದು ಕಳಿಸುತ್ತಾರೆ.ಗೋವು ಹೋಗಿ ಮನೆಯ ಮುಂದೆ ನಿಂತು ಕತ್ತನ್ನು ಅಲ್ಲಾಡಿಸಿದಾಗ ಗಂಟೆಯ ಶಬ್ದ ಬಂದಾಗ ಆ ಮನೆಯವರು ತಮ್ಮ ಮನೆಯಲ್ಲಿ ಇದ್ದಂತಹ ಪದಾರ್ಥಗಳನ್ನು ಆ ಜೋಳಿಗೆಗೆ ಹಾಕಿ ಕಳಿಸುತ್ತಾರೆ.
ಬಹುಕಾಲ ಈಗ ನಡೆಯುತ್ತಿರುತ್ತದೆ,ಗುರುಗಳು ಮಹಾ ಪಂಚಾಕ್ಷರಿ ಜಪವನ್ನು ಮಾಡುತ್ತಾ ಸದಾ ತಪಸ್ಸಿನಲ್ಲಿ ಇದ್ದು ತಮ್ಮ ಜೀವನವನ್ನು ಗೋವಿನ ಜೊತೆಯಲ್ಲಿ ಸುಂದರವಾಗಿ ಕಳೆಯುತ್ತಿದ್ದರು.
ಪ್ರತಿದಿನದಂತೆ ಗೋಮಾತೆಯ ಭಿಕ್ಷೆ ಬೇಡಲು ಹೋದಾಗ ಗ್ರಾಮದ ಮಹಿಳೆಯೊಬ್ಬರು ಪ್ರತಿದಿನ ಬಂದು ತೊಂದರೆ ಕೊಡುತ್ತದೆ ಎಂದು ಅದನ್ನು ಪೊರಕೆಯಲ್ಲಿ ಹೊಡೆಯುತ್ತಾಳೆ.ಗೋಮಾತೆಯು ಭಿಕ್ಷೆಯನ್ನು ತೆಗೆದುಕೊಳ್ಳದೆ ಗುರುಗಳ ಬಳಿ ಹೋಗಿ ತನ್ನ ಕಣ್ಣೀರನ್ನು ತೋಡಿಕೊಳ್ಳುತ್ತದೆ.ಆಗ ಗುರುಗಳು ತಮ್ಮ ದಿವ್ಯದೃಷ್ಟಿಯಿಂದ ಗೋಮಾತೆಯ ಕಣ್ಣೀರಿನ ಕಾರಣ ತಿಳಿದು ನಾವಿನ್ನು ಇಹಲೋಕದಲ್ಲಿ ವಾಸ ಮಾಡಬಾರದು ಎಂದು ಹೇಳಿ ಗುರುಗಳು ಮತ್ತು ಗೋಮಾತೆ ಇಬ್ಬರು ಮರದಲ್ಲಿ ಇರುವ ಗದ್ದುಗೆಯ ಸ್ಥಳದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ನಿರ್ವಿಕಲ್ಪ ಸಮಾಧಿ ಎಂದರೆ ಜೀವಂತ ಇದ್ದಂಗೆ ಗುರು ಶಿಷ್ಯರಿಬ್ಬರೂ ಕೂಡ ಸಮಾಧಿಯ ತೋಡಿಸಿ ಜೀವವನ್ನು ಒಳಗೆ ಮುಚ್ಚಿಕೊಂಡು ಅವರು ಸಂಪೂರ್ಣವಾಗಿ ಮಣ್ಣಿನಲ್ಲಿ ಲೀನವಾಗುತ್ತಾರೆ.
ಹೀಗೆ ಅವರ ಜೀವನದ ಪ್ರಕ್ರಿಯೆ ನಡೆಯುತ್ತದೆ.ಇವತ್ತಿಗೂ ಕೂಡ ಆದಿಗುರು ನಿರ್ವರ್ಣೇಶ್ವರರು ಮೈಸೂರಿನ ಸಂಸ್ಥಾನದ ಆಶ್ರಯದಲ್ಲಿ ಬೆಳೆದು ಗುರುವಿನ ಪುರದ ಗ್ರಾಮಸ್ಥರ ನೆರವಿನೊಂದಿಗೆ ಮಠವನ್ನು ನಿರ್ಮಿಸಲಾಗಿದೆ. ಮತ್ತೊಂದು ವಿಶೇಷವೇನೆಂದರೆ ನಿರ್ವಣೇಶ್ವರರು ಅತ್ಯಂತ ಸುಂದರವಾದ ಗೆಳೆಯ ವಾಡೆ ಮಲ್ಲೇಶ್ವರರು ಎಂದು ಇಬ್ಬರು ಉತ್ತರ ಭಾರತದಿಂದ ಜೊತೆಯಲ್ಲಿ ಬಂದವರು ಇಬ್ಬರ ಸ್ನೇಹಿತ ಸ್ನೇಹ ಬಾಂಧವ್ಯ ಬಹಳ ಚೆನ್ನಾಗಿತ್ತು. ನಿರ್ವಣೇಶ್ವರರು ಉತ್ತರಾ ಅಭಿಮುಖವಾಗಿ ಕುಳಿತರೆ ಮಲ್ಲೇಶ್ವರರು ನೈರುತ್ಯ ಅಭಿಮುಖವಾಗಿ ಕುಳಿತುಕೊಂಡು ಗದ್ದುಗೆಯನ್ನು ನೋಡುತ್ತಾರೆ.
370 ವರ್ಷಗಳಿಂದ ಇವರಿಬ್ಬರ ಬಾಂಧವ್ಯ ಇವತ್ತಿನವರೆಗೂ ಅದೇ ರೀತಿ ನಡೆಯುತ್ತಿದೆ.ಭಕ್ತಾದಿಗಳ ಆಶಯದಂತೆ ಈ ಎರಡು ಕ್ಷೇತ್ರಗಳು ಪುಣ್ಯಕ್ಷೇತ್ರಗಳಾಗಿ ಬೆಳೆಯಲಿ ಮಠದ ಪರಂಪರೆಯಲ್ಲಿ ಸುಮಾರು ಎಂಟು ಜನ ಗುರುಗಳಾಗಿ ಹೋಗಿದ್ದಾರೆ.ಎಂಟನೆಯ ಗುರುಗಳು ಗುರುಸಿದ್ಧ ಶಿವಾಚಾರ್ಯರು 1945ರಲ್ಲಿ ಕಾಶಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಅನೇಕ ಗ್ರಂಥಿಗಳಿಗೆ ಗ್ರಂಥಕರ್ತ ರಾಗಿ ಬಹಳ ವಿದ್ವತ್ತನ್ನು ಪಡೆದಿದ್ದರು. 77 ವರ್ಷಗಳ ಕಾಲ ಮಠದ ಸೇವೆಯನ್ನು ಮಾಡಿ ಅವರು 2008ರಲ್ಲಿ ಸ್ಪರ್ಗಸ್ಥರಾದರು. ಅವರು ಇರುವಾಗಲೇ ಈಗಿನ ಗುರುಗಳಾದ ಶ್ರೀ ಜಗದೀಶ್ ಶಿವಚಾರ್ಯರಿಗೆ ಪಟ್ಟಾಭಿಷೇಕ ಮಾಡಿ ಮಠದ ಜವಾಬ್ದಾರಿಯನ್ನು ವಹಿಸಿದರು.
9ನೇ ಸ್ವಾಮೀಜಿಯಾಗಿ ಮಾಡಿದರು. ಅಂದಿನಿಂದ ಶ್ರೀ ಜಗದೀಶ್ ಶಿವಾಚಾರ್ಯರು ಮಠದ ಕಾರ್ಯವನ್ನು ಅಚ್ಚುಗಟ್ಟಾಗಿ ನಿರ್ವಹಿಸುತ್ತಿದ್ದಾರೆ.ಮಠದಲ್ಲಿ ಅದ್ಭುತವಾದಂತಹ ಎರಡು ಕಾರ್ಯಕ್ರಮಗಳನ್ನು ಜರುಗುತ್ತವೆ. ಅಕ್ಟೋಬರ್ 10 ಅಂದರೆ ಮೈಸೂರು ಸಂಸ್ಥಾನದಲ್ಲಿ ನಡೆಯುವಂತಹ ದಸರಾ ಮಹೋತ್ಸವದ ದಿನ ಗುರುವಿನ ಪುರದಲ್ಲಿ ಕೂಡ ಶ್ರೀ ಗುರು ನಿರ್ವಹಣೇಶ್ವರ ಉತ್ಸವವನ್ನು ಮಾಡುತ್ತಾರೆ. ಮೈಸೂರಿನಲ್ಲಿ ಎಷ್ಟು ಸಡಗರ ಸಂಭ್ರಮದಿಂದ ಮಾಡುತ್ತಾರೋ ಅದೇ ಸಡಗರದಿಂದ ಗುರುವಿನ ಪುರದಲ್ಲಿ ಮಾಡುತ್ತಾರೆ.ಯುಗಾದಿ ಹಬ್ಬದ 20ನೇ ದಿವಸದಲ್ಲಿ ನಿರ್ವಾಣೇಶ್ವರರ ಉತ್ಸವದ ಜೊತೆಗೆ 10000 ಜನಗಳಿಗೆ ಪ್ರಸಾದ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡುತ್ತಾರೆ.
ಪ್ರತಿ ಅಮಾವಾಸ್ಯೆ ಬಹಳ ವಿಜೃಂಭಣೆಯಿಂದ ನಿರ್ವಹಣೇಶ್ವರರಿಗೆ ಅಭಿಷೇಕ ಪೂಜೆ ನಡೆಯುತ್ತದೆ. ಶ್ರೀ ಜಗದೀಶ್ ಶಿವಾಚಾರ್ಯರು ಆಸೆಯಂತೆ ತಮಿಳುನಾಡಿನಿಂದ ಬಂದು ದೇವಾಲಯಕ್ಕೆ ಒಂದು ಸುಂದರವಾದ ಗೋಪುರದ ನಿರ್ಮಾಣವು ಆಗುತ್ತದೆ. ಈ ಕ್ಷೇತ್ರದಲ್ಲಿ ಸುಮಾರು ಎಂಟು ವರ್ಷಗಳಿಂದ ನಿರಂತರವಾಗಿ ನಿರ್ವಹಣೇಶ್ವರರಿಗೆ ರುದ್ರಾಭಿಷೇಕ ನಡೆಯುತ್ತಾ ಬಂದಿದೆ.