ಮನೆ ದೇವಸ್ಥಾನ ಶ್ರೀರಂಗನಾಥ ಸ್ವಾಮಿ ದೇವಾಲಯ

ಶ್ರೀರಂಗನಾಥ ಸ್ವಾಮಿ ದೇವಾಲಯ

0

    ಈ ಪುಣ್ಯಕ್ಷೇತ್ರದಲ್ಲಿ ಶ್ರೀ ರಂಗನಾಥ ಸ್ವಾಮಿಯು ಸ್ವಯಂಭು ಮೂರ್ತಿಯಾಗಿದ್ದು  ಶ್ರೀಭೂತ ನಾಥೇಶ್ವರ ಸ್ವಾಮಿಯ ಜೊತೆ ಇರುವುದು ಬಹಳ ವಿಶೇಷವಾಗಿದೆ.ಈ ಒಂದು ಸ್ಥಳದಲ್ಲಿ ಮೈಸೂರು ಹೈದರಾಲಿ ಆಳುವುದಕ್ಕೆ ಪೂರ್ವದಲ್ಲಿ ಅನೇಕ ಪಾಳೆಗಾರರು ಆಡಳಿತ ನಡೆಸುತ್ತಿದ್ದರು. ಚಳ್ಳೆಕೆರೆ ತಾಲ್ಲೂಕು, ಪರಶುರಾಮ ಗ್ರಾಮ ಪುರದ ಚೆನ್ನಕೇಶವ ಸ್ವಾಮಿಯ ದೇವಾಲಯದಿಂದ ಒಂದು ಸ್ವಾಮಿ ಮಲ್ನಾಡಿಹಳ್ಳಿಯಲ್ಲಿ ಅವತರಿಸಿದ್ದಾನೆ.

Join Our Whatsapp Group

     ಚಳ್ಳಕೆರೆ ತಾಲ್ಲೂಕು ಪರಶುರಾಮ ಪುರದಲ್ಲಿ ಬರಡು ಭೂಮಿಯಾದುದರಿಂದ ಅಲ್ಲಿ ಯಾವ ರೀತಿ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಮತ್ತು ರೋಗರುಜಿನಗಳು ಬಹಳ ಷ್ಟಿದ್ದವು ಆದ್ದರಿಂದ ಅಲ್ಲಿನ ಜನರೆಲ್ಲಾ ಈ ಮಲ್ನಾಡಿಹಳ್ಳಿಯಲ್ಲಿ ಬಂದು ನೆಲೆನಿಂತರು.ಈ ಸ್ಥಳವು ಬಹಳ ದಟ್ಟವಾದ ಅರಣ್ಯದಿಂದ ಕೂಡಿತ್ತು ಮತ್ತು ಇಲ್ಲಿ ಒಂದು ಚಿಕ್ಕದಾಗಿ ನದಿಯು ಕೂಡ ಹರಿಯುತ್ತಿದ್ದು ಹೀಗಿರುವಾಗ ಹಾಲು ಮರದ ಮಲ್ಲಪ್ಪ ಎಂಬುವ ಒಬ್ಬ  ಭಕ್ತನು ಹಸುಗಳನ್ನು ಮೇಯಿಸಲು ಈ ಜಾಗಕ್ಕೆ ಬರುತ್ತಿದ್ದನು. ಅವನು ಒಂದು ದಿನ ನದಿಯಲ್ಲಿ ಸ್ಥಾನಕ್ಕೆ ಹೋದಾಗ ಪೆಟ್ಟಿಗೆಯನ್ನು ಪಕ್ಕದಲ್ಲಿ ಇಟ್ಟು ಸ್ಥಾನಕ್ಕೆಂದು ಹೊರಟನು. ಅವನು ಸ್ಥಾನ ಮುಗಿಸಿ ಬಂದು ನೋಡಿದಾಗ ಕಾಣೆಯಾಗಿದ್ದು ಅವನಲ್ಲಿರುವ ಜನರನ್ನು ಕೇಳಿದ ಒಬ್ಬ ಬಾಲಕ ಮೈ ಮೇಲೆ ಭಗವಂತನು ಬಂದು ನನ್ನ ನಾನು ಇಲ್ಲಿ ನೆಲೆಗೊಳ್ಳಬೇಕು ಎಂದು ಹೇಳುತ್ತಾನೆ.ಹಾಲು ಮಾಲಪ್ಪನಸು ಹಸು ಕೂಡ ಅಲ್ಲಿರುವ ಒಂದು ಹುತ್ತಕ್ಕೆ ಹಾಲು ಕರೆಯುತ್ತಿದೆ ಪ್ರತಿದಿನವೂ ಹೀಗೆ ನಡೆಯುತ್ತಿರುತ್ತದೆ.

    ಹಾಲು  ಮಲ್ಲಪ್ಪನ ಕನಸಿನಲ್ಲಿ ಭಗವಂತ ಬಂದು ತಾನು  ಆ ಹುತ್ತದಲ್ಲಿ ಇರುವುದಾಗಿ ತನಗೆ ಒಂದು ದೇವಾಲಯ ನಿರ್ಮಾಣ ಆಗಬೇಕೆಂದು ಸೂಚಿಸುತ್ತಾನೆ.ನಂತರ ಹುತ್ತರವನ್ನು ತೆಗೆದು ನೋಡಿದಾಗ ಸ್ವಾಮಿಯ ಸ್ವಯಂಭು ಮೂರ್ತಿ ಕಾಣುತ್ತದೆ. ಹುತ್ತವನ್ನು ತೆಗೆದು ನೋಡಿದಾಗ ಸ್ವಾಮಿಯ ಸ್ವಯಂಭು ಮೂರ್ತಿ  ಕಾಣುತ್ತದೆ.   ನಂತರ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿ ಪೂಜೆಗಳನ್ನು ಅಂದಿನಿಂದ ನಡೆಸಿಕೊಂಡು ಬಂದಿದ್ದಾರೆ.ದೇವಸ್ಥಾನವನ್ನು ಪೂಜೆಗಳನ್ನು ಅಂದಿನಿಂದ ನಡೆಸಿಕೊಂಡು ಬಂದಿದ್ದಾರೆ. ದೇವಸ್ಥಾನವನ್ನು ಅಭಿವೃದ್ಧಿಪಡಿಸಲು ಬಹಳ ಜನಗಳು ಸಹಾಯ ಮಾಡಿದ್ದಾರೆ ಹಾಗೂ ಗ್ರಾಮಸ್ಥರು ಸಹಕರಿಸಿದ್ದಾರೆ.ಪ್ರತಿದಿನ ಈ ಕ್ಷೇತ್ರದಲ್ಲಿ ಸ್ವಾಮಿಗೆ ಪೂಜೆಗಳಿರುತ್ತವೆ.

      ಹಿಂದೆ ಸ್ವಾಮಿಯ ಈ ಕ್ಷೇತ್ರದಲ್ಲಿ ಸಾಧು ಸಂತರು ಬಂದು ನೆಲೆಸುತ್ತಾರೆ ಎಂದು ಹೇಳಿದ ಹಾಗೆ ಈ ಕ್ಷೇತ್ರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಈ ಕ್ಷೇತ್ರದಲ್ಲಿ ಸೇವಾಶ್ರಮ ನಿರ್ಮಾಣ ಮಾಡಿ ಆಯುರ್ವೇದ ಮತ್ತು ಯೋಗ ಇನ್ನಿತರ ಚಟುವಟಿಕೆಯ ವಿದ್ಯಾನಿಲಯವನ್ನು ನಿರ್ಮಾಣ ಮಾಡಿದ್ದಾರೆ.

     ಅಮಾವಾಸ್ಯೆಯಂದು  ಸದ್ಗುರುವಿನ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ ಮತ್ತು ಪ್ರಸಾದ ವಿನಿಯೋಗವಿರುತ್ತದೆ ಅವರ ಕೃಪಾಕಟಾಕ್ಷದಿಂದೆ. ಭಕ್ತಾದಿಗಳ ನೆರವಿನಿಂದ ದೇವಾಲಯದ ಕಾರ್ಯಕ್ರಮಗಳು ಅಚ್ಚುಘಟ್ಟಾಗಿ ನಡೆದುಬಂದಿದೆ. ಮತ್ತು ಇಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಿದ್ದಾರೆ.

ಹಿಂದಿನ ಲೇಖನಭೂ ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್‌ ಗೆ ಜಾಮೀನು
ಮುಂದಿನ ಲೇಖನಹಾವೇರಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 2ಲಕ್ಷ ರೂ ಪರಿಹಾರ: ಸಿಎಂ ಸಿದ್ದರಾಮಯ್ಯ ಘೋಷಣೆ