ಮನೆ ಉದ್ಯೋಗ SSC CHSL ಪರೀಕ್ಷೆ ಅಧಿಸೂಚನೆ ಪ್ರಕಟ: 1600 ಹುದ್ದೆಗೆ ನೇಮಕಕ್ಕೆ ಅರ್ಜಿ ಆಹ್ವಾನ

SSC CHSL ಪರೀಕ್ಷೆ ಅಧಿಸೂಚನೆ ಪ್ರಕಟ: 1600 ಹುದ್ದೆಗೆ ನೇಮಕಕ್ಕೆ ಅರ್ಜಿ ಆಹ್ವಾನ

0

ಸಿಬ್ಬಂದಿ ನೇಮಕಾತಿ ಆಯೋಗವು 2023ನೇ ಸಾಲಿನ ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (10+2) ಪರೀಕ್ಷೆಯ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಪರೀಕ್ಷೆ ಮೂಲಕ 1600 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್, ಲೋವರ್ ಡಿವಿಷನ್ ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರೆ ವಿವಿಧ ಪೋಸ್ಟ್’ಗಳನ್ನು ಸಿಹೆಚ್ಎಸ್ಎಲ್ ಪರೀಕ್ಷೆ ಮೂಲಕ ನೇಮಕ ಮಾಡಲಾಗುತ್ತದೆ.

Join Our Whatsapp Group

ನೇಮಕ ಪ್ರಾಧಿಕಾರ : ಸ್ಟಾಫ್ ಸೆಲೆಕ್ಷನ್ ಕಮಿಷನ್

ಹುದ್ದೆಗಳ ಹೆಸರು : ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳು

ಶೈಕ್ಷಣಿಕ ಅರ್ಹತೆ : ದ್ವಿತೀಯ ಪಿಯುಸಿ / 12ನೇ ತರಗತಿ ಪಾಸ್

ಎಸ್’ಎಸ್’ಸಿ ಸಿಹೆಚ್’ಎಸ್’ಎಲ್ ಪರೀಕ್ಷೆ ಅರ್ಜಿ ಪ್ರಕ್ರಿಯೆ / ಇತರೆ ದಿನಾಂಕಗಳು

ಆನ್’ಲೈನ್ ಅಪ್ಲಿಕೇಶನ್ ಸಲ್ಲಿಕೆ ಆರಂಭ ದಿನಾಂಕ : 09-05-2023

ಆನ್’ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಕೊನೆ ದಿನಾಂಕ : 08-06-2023

ಆನ್’ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 10-06-2023 ರ ರಾತ್ರಿ 11-00 ಗಂಟೆವರೆಗೆ.

ಆಫ್’ಲೈನ್ ಚಲನ್ ಪಡೆಯಲು ಕೊನೆ ದಿನಾಂಕ : 11-06-2023 ರ ರಾತ್ರಿ 11-00 ಗಂಟೆವರೆಗೆ.

ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 12-06-2023

ಅಪ್ಲಿಕೇಶನ್ ಮತ್ತು ಆನ್’ಲೈನ್ ಪೇಮೆಂಟ್ ತಿದ್ದುಪಡಿಗೆ ಅವಕಾಶ : 14-06-2023 ರಿಂದ 15-06-2023 ರ ರಾತ್ರಿ 23-00 ರವರೆಗೆ.

SSC CHSL ಟೈಯರ್-1 ಸಿಬಿಟಿ ಪರೀಕ್ಷೆ ದಿನಾಂಕ : ಆಗಸ್ಟ್ 2023

ಟೈಯರ್-2 ವಿವರಣಾತ್ಮಕ ಪತ್ರಿಕೆ ಪರೀಕ್ಷೆ ದಿನಾಂಕ : ಮುಂದಿನ ದಿನಗಳಲ್ಲಿ ವೇಳಾಪಟ್ಟಿ ಪ್ರಕಟಿಸಲಾಗುವುದು.

ನೇಮಕ ಮಾಡುವ ಹುದ್ದೆಗಳು

ಲೋವರ್ ಡಿವಿಷನ್ ಕ್ಲರ್ಕ್(LDC)

ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (JSA)

ವಿಂಗಡಣೆ ಸಹಾಯಕ (SA)

ಪೋಸ್ಟಲ್ ಅಸಿಸ್ಟಂಟ್ (PA)

ಡಾಟಾ ಎಂಟ್ರಿ ಆಪರೇಟರ್ (DEO)

ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ

ವಯೋಮಿತಿ ಅರ್ಹತೆ

ಸಿಹೆಚ್’ಎಸ್’ಎಲ್ ಪರೀಕ್ಷೆಗೆ ರಿಜಿಸ್ಟ್ರೇಷನ್ ಪಡೆಯಲು ದಿನಾಂಕ 01-01-2022 ಕ್ಕೆ ಸರಿಯಾಗಿ ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಜಾತಿವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಶೈಕ್ಷಣಿಕ ಅರ್ಹತೆಗಳು

– ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (JSA), ಲೋವರ್ ಡಿವಿಷನ್ ಕ್ಲರ್ಕ್(LDC), ಪೋಸ್ಟಲ್ ಅಸಿಸ್ಟಂಟ್ (PA), ಡಾಟಾ ಎಂಟ್ರಿ ಆಪರೇಟರ್ (DEO), ವಿಂಗಡಣೆ ಸಹಾಯಕ (SA) ಹುದ್ದೆಗಳಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಮಾಡಿರಬೇಕು.

– ಡಾಟಾ ಎಂಟ್ರಿ ಆಪರೇಟರ್ ಗ್ರೇಡ್-1 ಹುದ್ದೆಗೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಪಾಸ್ ಮಾಡಿರಬೇಕು. ಗಣಿತ ವಿಷಯ ಕಡ್ಡಾಯವಾಗಿ ಓದಿರಬೇಕು.

ರಿಜಿಸ್ಟ್ರೇಷನ್ ಶುಲ್ಕ ರೂ.100.

ಎಸ್’ಸಿ / ಎಸ್’ಟಿ / ಮಹಿಳಾ ಅಭ್ಯರ್ಥಿಗಳು/ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಆನ್ಲೈನ್ ಮೂಲಕ (ನೆಟ್’ಬ್ಯಾಂಕಿಂಗ್, ರುಪೇ ಕಾರ್ಡ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಭೀಮ್ ಯುಪಿಐ) ಬಳಸಿ ಅಥವಾ ಎಸ್’ಬಿಐ ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.

ಅರ್ಜಿ ಹಾಕುವುದು ಹೇಗೆ?

– ಎಸ್’ಎಸ್’ಸಿ ವೆಬ್’ಸೈಟ್ https://ssc.nic.in/ ಗೆ ಭೇಟಿ ನೀಡಿ.

– ಓಪನ್ ಆದ ಪೇಜ್’ನ ಬಲಭಾಗದಲ್ಲಿ ‘New User’ ಎಂದು ಕ್ಲಿಕ್ ಮಾಡಿ.

– ನಂತರ ತೆರೆಯುವ ವೆಬ್ ಪುಟದಲ್ಲಿ ರಿಜಿಸ್ಟ್ರೇಷನ್ ಪಡೆದು, ಅರ್ಜಿ ಪೂರ್ಣಗೊಳಿಸಿ.

– ಈಗಾಗಲೇ ರಿಜಿಸ್ಟ್ರೇಷನ್ ಪಡೆದವರು ಹಳೆಯ ಯೂಸರ್ ನೇಮ್, ಪಾಸ್’ವರ್ಡ್ ಮೂಲಕವೇ ಲಾಗಿನ್ ಆಗಿ ಅರ್ಜಿ ಹಾಕಿ.

ಪರೀಕ್ಷಾ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಅವುಗಳೆಂದರೆ

ಟೈಯರ್-1 ಪರೀಕ್ಷೆ ಕಂಪ್ಯೂಟರ್ ಆಧಾರಿತವಾಗಿರುತ್ತದೆ.

ಟೈಯರ್-2 ಪರೀಕ್ಷೆ ವಿವರಣಾತ್ಮಕ ಪರೀಕ್ಷೆ ಆಗಿರುತ್ತದೆ.

ಟೈಯರ್-3 ಪರೀಕ್ಷೆ ಸ್ಕಿಲ್ ಟೆಸ್ಟ್ ಮತ್ತು ಟೈಪಿಂಗ್ ಟೆಸ್ಟ್ ನಡೆಸಲಾಗುತ್ತದೆ.