ಮನೆ ರಾಷ್ಟ್ರೀಯ ಹಿಮಾಚಲಪ್ರದೇಶದಲ್ಲಿ ಬಿಜೆಪಿಗೆ 2 ಕ್ಷೇತ್ರಗಳಲ್ಲಿ ಜಯ: ಹಾಲಿ ಸಿಎಂ ಜೈರಾಮ್​ ಠಾಕೂರ್​ ಗೆಲುವು

ಹಿಮಾಚಲಪ್ರದೇಶದಲ್ಲಿ ಬಿಜೆಪಿಗೆ 2 ಕ್ಷೇತ್ರಗಳಲ್ಲಿ ಜಯ: ಹಾಲಿ ಸಿಎಂ ಜೈರಾಮ್​ ಠಾಕೂರ್​ ಗೆಲುವು

0

ಹಿಮಾಚಲಪ್ರದೇಶ: ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ಮಧ್ಯೆಯೂ ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಸೆರಾಜ್​ ಕ್ಷೇತ್ರದಿಂದ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಗೆಲುವು ಸಾಧಿಸಿದರೆ, ಮಂಡಿ ಜಿಲ್ಲೆಯ ಸುಂದರನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಕೇಶ್ ಜಮ್ವಾಲ್ ಗೆಲುವು ಪಡೆದಿದ್ದಾರೆ.

ಸೆರಾಜ್​ ಮತ್ತು ಸುಂದರ ನಗರ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿದೆ. ಸಿಎಂ ಜೈ ರಾಮ್​ ಠಾಕೂರ್​ ಮತ್ತು ರಾಕೇಶ್ ಜಮ್ವಾಲ್ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ್ದರು.ಹಿಂದಿನ 2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಹನ್ ಲಾಲ್ 23282 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ರಾಕೇಶ್ ಜಮ್ವಾಲ್ ಅವರು 32545 ಮತಗಳನ್ನು ಪಡೆದಿದ್ದರು. ರಾಕೇಶ್ ಜಮ್ವಾಲ್ 9263 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಇನ್ನು ಹಿಮಾಚಲ ಪ್ರದೇಶದಲ್ಲಿ ಇತ್ತೀಚಿನ ಟ್ರೆಂಡ್​ ಪ್ರಕಾರ ಕಾಂಗ್ರೆಸ್​ 38 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿ ಕೇವಲ 27 ಸ್ಥಾನಗಳಲ್ಲಷ್ಟೇ ಮುನ್ನಡೆ ಪಡೆದುಕೊಂಡಿದೆ. ಇನ್ನೂ ಹಲವು ಹಂತಗಳ ಮತ ಎಣಿಕೆ ಬಾಕಿ ಇದ್ದು, ಅಂತಿಮವಾಗಿ ಯಾವ ಫಲಿತಾಂಶ ಬರಲಿದೆ ಕಾದು ನೋಡಬೇಕಿದೆ.

ಹಿಂದಿನ ಲೇಖನಆಮ್‌ ಆದ್ಮಿ ಪಕ್ಷ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ: ಮನೀಶ್‌ ಸಿಸೋಡಿಯಾ
ಮುಂದಿನ ಲೇಖನನಿರೀಕ್ಷೆಗೂ ಮೀರಿ ಗುಜರಾತ್ ಜನತೆ ಬಿಜೆಪಿಗೆ ಮತ ನೀಡಿದ್ದಾರೆ: ಸಚಿವ ಕೆ.ಗೋಪಾಲಯ್ಯ