ಚಾಮರಾಜನಗರ (Chamrajnagar)-ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ತಾಲೂಕಿನ ಹರವೆ ಗ್ರಾಮದ ಶ್ರೀ ವಿರಕ್ತ ಮಠದ ಶ್ರೀ ಚನ್ನಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿದೆ.
19 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಮತ್ತು ಇನ್ನುಳಿದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಅದರಲ್ಲಿ ಮಾನ್ಯ(588 ಅಂಕ), ಮಾದೇಶ .ಸಿ (574 ಅಂಕ), ಸೃಜನ್ ಟಿ.ಎಸ್ (570 ಅಂಕ) ಪಡೆದುಕೊಂಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯು ಅಭಿನಂದನೆ ಸಲ್ಲಿಸಿದ್ದಾರೆ.