ಮುಧೋಳ: ಗುರುವಾರ ಪ್ರಕಟಗೊಂಡಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಗಲಕೋಟೆ ಜಿಲ್ಲೆ ಮೆಳ್ಳಿಗೇರಿಯ ಅಂಕಿತಾ ಕೊಣ್ಣೂರ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಕೊಣ್ಣೂರ ಅವರು 625ಕ್ಕೆ 625 ಅಂಕ ಪಡೆದಿದ್ದಾರೆ.
ರೈತ ಕುಟುಂಬದಲ್ಲಿ ಜನಿಸಿರುವ ಅಂಕಿತಾ ಸಾಧನೆಗೆ ಮುಧೋಳ ತಾಲೂಕು ಆಡಳಿತ ಹರ್ಷ ವ್ಯಕ್ತಪಡಿಸಿದೆ.
Saval TV on YouTube