ರಕ್ತದಲ್ಲಿ ಯೂರಿಕ್ ಆಮ್ಲ ಸಂಗ್ರಹವಾಗದಂತೆ ತಡೆಯುವ ಗುಣ :
ರಕ್ತದಲ್ಲಿ ಅಧಿಕ ಪ್ರಮಾಣದ ಯುರಿಕ್ ಆಮ್ಲ ಸಂಗ್ರಹವಾದ ಸ್ಥಿತಿಯನ್ನು ಹೈಪರ್ ಯುರಿಸೆಮಿಯ ಎಂದು ಕರೆಯುತ್ತಾರೆ. ಈ ಸ್ಥಿತಿಗೆ ಮೂತ್ರಪಿಂಡದಲಾಗುವ ಕಾರ್ಯ ನ್ಯೂನತೆಯೂ ಒಂದು ಕಾರಣ. ಈ ರೀತಿ ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗುವುದರಿಂದ ಹೃದಯ ಸಂಬಂಧ ಕಾಯಿಲೆ, ಗೌಟ್ ಕಾಯಿಲೆ, ಮಧುಮೇಹ, ಮೂತ್ರಪಿಂದ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ರಕ್ತದಲ್ಲಿ ಯೂರಿಕ್ ಆಮ್ಲ ಮತ್ತು ಕ್ರಿಯಾಟಿನಿನ್ ಅಂಶ ಹೆಚ್ಚಾಗಿದ್ದ 55 ಮಂದಿ ರೋಗಿಗಳನ್ನು ಆಯ್ಕೆ ಮಾಡಿ,24 ವಾರ 1000 ಮಿ. ಗ್ರಾಂ ಪ್ರಮಾಣದ ತಾರೆಕಾಯಿ ಸತ್ವವನ್ನು ಸೇವಿಸಲು ಕೊಡಲಾಯಿತು.ಅವಧಿಯ ನಂತರ ಪರೀಕ್ಷೆಗೆ ಒಳಪಡಿಸಿದಾಗ ತಾರೆಕಾಯಿಯ ಸತ್ವ ಸೇವಿಸುವುದರಿಂದ ಪರಿಣಾಮವಾಗಿ ರಕ್ತದಲ್ಲಿನ ಯೂರಿಕ್ ಆಮ್ಲ ಮತ್ತು ಕ್ರಿಯಾಟಿನಿನ್ ಅಂಶ ಕಡಿಮೆಯಾದ ಬಗ್ಗೆ ವರದಿಯಾಗಿದೆ ಹೈಪರ್ ಯುರೇಸಿಮಿಯ ಕಾಯಿಲೆಯ ಚಿಕಿತ್ಸೆಯ ತಾರೆಕಾಯಿ ಉತ್ತಮ ಔಷಧಿ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಹಲ್ಲಿನ ಮೇಲೆ ಕರೆ ಕಟ್ಟಲು ಕಾರಣವಾದ ಬ್ಯಾಕ್ಟೀರಿಯವನ್ನು ನಾಶಪಡಿಸುವ ಗುಣ :
15ರಿಂದ 40 ವಯೋಮಾನದ ದಂತ ಚಿಕಿತ್ಸೆಗೆ ಬರುತ್ತಿದ್ದ ರೋಗಿಗಳನ್ನು ಆಯ್ಕೆ ಮಾಡಿ ತಾರೆಕಾಯಿ ಚೂರ್ಣವನ್ನು ಮಿಶ್ರಣ ಮಾಡಿದ ನೀರನ್ನು ಬಾಯಿ ಮುಕ್ಕಳಿಸಲು ಕೊಟ್ಟು ವಿವಿಧ ಕಾಲಾವಧಿಯಲ್ಲಿ ಜೊಲ್ಲು ರಸವನ್ನು ಪರೀಕ್ಷಿಸಿದಾಗ, ತಾರೆಕಾಯಿ ಚೂರ್ಣಕ್ಕೆ ಹಲ್ಲಿನ ಮೇಲೆ ಕರೆಕಟ್ಟಲು ಕಾರಣವಾದ ಬ್ಯಾಕ್ಟೀರಿಯವನ್ನು ನಾಶಪಡಿಸುವ ಗುಣವಿದೆಯೆಂದು ಕಂಡುಬಂದಿದೆ,ಆದರೆ ಈ ಗುಣ ತ್ರಿಪದ ಚೂರ್ಣ ಉಂಟುಮಾಡುವ ಪರಿಣಾಮಕ್ಕಿಂತ ಕಡಿಮೆಯೆಂದುದು ಕಂಡುಬಂದಿದೆ.
ಆೄಂಟಿ ಆಕ್ಸಿಡೆಂಟ್ ಗುಣ :
ವಿವಿಧ ರಾಸಾಯನಿಕ ದ್ರಾವಣ ಉಪಯೋಗಿಸಿ ತಾರೆಕಾಯಿ ಮರದ ಎಲೆ, ಕಾಂಡ ಮತ್ತು ಕಾಯಿಯಿಂದ ತಯಾರಿಸಿದ ಸತ್ವಕ್ಕೆ ಆೄಂಟಿಆಕ್ಸಿಡೆಂಟ್ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ.ಪಾಲಿಫಿನಾಲ್ ಯುಕ್ತ ಸತ್ವ ಹೆಚ್ಚಿನ ಪ್ರಮಾಣದ ಆೄಂಟಿಆಕ್ಸಿಡೆಂಟ್ ಗುಣ ಹೊಂದಿದೆ ಎಂದು ಕಂಡುಬಂದಿದೆ.
ಉರಿಯೂತವನ್ನು ಕಡಿಮೆ ಮಾಡುವ ಗುಣ :
ನೀರು ಮತ್ತು ಅಸಿಟೋನ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವ ಮತ್ತು ತಾರೆಕಾಯಿಯಿಂದ ಬೇರ್ಪಡಿಸಿದ್ದ ಗ್ಯಾಲಿಕ್ ಆಮ್ಲ ಎಂಬ ರಾಸಾಯನಿಕ ಘಟಕಕ್ಕೆ ಉರಿಯೂತವನ್ನು ಕಡಿಮೆ ಮಾಡುವ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಾಣಿಯೇತರ ಪ್ರಯೋಗದಿಂದ ತಿಳಿದು ಬಂದಿದೆ.
ಕರುಳಿನ ಹುಣ್ಣನ್ನು ವಾಸಿ ಮಾಡುವ ಗುಣ :
ಎಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ತತ್ವವನ್ನು ವಿಸ್ಟಾರ್ ಇಲಿಗಳಿಗೆ ಸೇವಿಸಲು ಕೊಟ್ಟು ಸಜ್ಜುಗೊಳಿಸಲಾಗಿತು. ನಂತರ ಈ ಇಲಿಗಳಿಗೆ ಪ್ರಯೋಗ ಶಾಲೆಯಲ್ಲಿ ಹುಣ್ಣಾಗುವಂತೆ ಮಾಡಿ ಪರೀಕ್ಷಿಸಿದಾಗ,ಸತ್ವಕ್ಕೆ ಹುಣ್ಣಾಗದಂತೆ ತಡೆಯುವ ಮತ್ತು ವಾಸಿ ಮಾಡುವ ಗುಣವಿದೆಯೆಂದು ಕಂಡುಬಂದಿದೆ.
ತಾರೆಕಾಯಿ ಮರದ ಎಲೆಯಿಂದ ತಯಾರಿಸಿದ ಸತ್ವಕ್ಕೂ ಕರುಳಿನ ಹುಣ್ಣನ್ನು ವಾಸಿ ಮಾಡುವ ಗುಣವಿದೆಯೆಂದು ವರದಿಯಾಗಿದೆ.
ಕ್ಯಾನ್ಸರ್ ವಾಸಿ ಮಾಡುವ ಗುಣ :
ತಾರೆಕಾಯಿಂದ ಮತ್ತು ಎಲೆಯಿಂದ ತಯಾರಿಸಿದ ತತ್ವಕ್ಕೆ ಬಾಯಿಯ ಪಿತ್ತಜನಾಂಗದ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅನ್ನು ವಾಸಿ ಮಾಡುವ ಸಾಮರ್ಥ್ಯವಿದೆ ಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.
ಖಿನ್ನತೆಯನ್ನು ಕಡಿಮೆ ಮಾಡುವ ಗುಣ :
ನೀರು ಮತ್ತು ಎಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವವನ್ನು 10 ದಿನಗಳವರೆಗೆ ಸ್ವಿಸ್ ಬಿಡಿ ಇಲಿಗಳಿಗೆ ಸೇವಿಸಲು ಕೊಡಲಾಯಿತು.ನಂತರ ಸತ್ವ ಸೇವಿಸಿದೆ ಇಲಿಗಳನ್ನು ಪ್ರಯೋಗ ಶಾಲೆಯಲ್ಲಿ ಖಿನ್ನತೆಯನ್ನು ಅಳೆಯುವಂತಹ ಪರೀಕ್ಷೆಗೆ ಒಳಪಡಿಸಿದಾಗ ಸತ್ವಕ್ಕೆ ಖಿನ್ನತೆಯನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ.
ಗರ್ಭನಿರೋಧಕ ಗುಣ :
ತಾರೆಕಾಯಿ ಮರದ ತೊಗಟೆ ಮತ್ತು ತಾಯಿಯ ಸತ್ವದ 50-60 ದಿನಗಳವರೆಗೆ ಗಂಡು ಇಲಿಗಳಿಗೆ ಸೇವಿಸಲು ಕೊಟ್ಟು, ಅವಧಿಯ ನಂತರ ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದಾಗ ಎರಡೂ ಬಗೆಯ ಸತ್ವಗಳಿವೆ ಗರ್ಭ ನಿರೋಧಕ ಗುಣವಿದೆಯೆಂದು ಕಂಡು ಬಂದಿದೆ.