ಮನೆ ಕಾನೂನು 1 ರೂ ಚಿಲ್ಲರೆ ನೀಡಲು ನಿರಾಕರಿಸಿದ ಕಂಡಕ್ಟರ್’ಗೆ 3 ಸಾವಿರ ದಂಡ

1 ರೂ ಚಿಲ್ಲರೆ ನೀಡಲು ನಿರಾಕರಿಸಿದ ಕಂಡಕ್ಟರ್’ಗೆ 3 ಸಾವಿರ ದಂಡ

0

ಬೆಂಗಳೂರು: ಪ್ರಯಾಣಿಕರೊಬ್ಬರಿಗೆ ಒಂದು ರೂಪಾಯಿ ಚಿಲ್ಲರೆ ಪಾವತಿಸಲು ನಿರ್ವಾಹಕ ನಿರಾಕರಿಸಿದ್ದ ಕಾರಣಕ್ಕೆ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಮೂರು ಸಾವಿರ ರೂ. ದಂಡ ವಿಧಿಸಿದೆ.

ರಮೇಶ್‌ ನಾಯಕ್‌ ಎಂಬವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಇಲ್ಲಿನ ನಾಲ್ಕನೇ ಹೆಚ್ಚುವರಿ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ಈ ಆದೇಶ ನೀಡಿದ್ದು, ಅರ್ಜಿದಾರರಿಗೆ ಪರಿಹಾರವಾಗಿ ಈ ಮೊತ್ತ ಪಾವತಿಸುವಂತೆ ಸೂಚಿಸಿದೆ.

ಅಲ್ಲದೇ, ಕಾನೂನು ಹೋರಾಟಕ್ಕಾಗಿ ಒಂದು ಸಾವಿರ ರೂಪಾಯಿ ನ್ಯಾಯಾಲಯದ ವೆಚ್ಚ ಪಾವತಿಸುವಂತೆ ಬಿಎಂಟಿಸಿಗೆ ನಿರ್ದೇಶಿಸಲಾಗಿದೆ. ಜೊತೆಗೆ 45 ದಿನಗಳೊಳಗೆ ಹಣ ಪಾವತಿಸಬೇಕು. ಇಲ್ಲವಾದಲ್ಲಿ ವಾರ್ಷಿಕ ಶೇ.6ರ ಬಡ್ಡಿ ಅನ್ವಯವಾಗಲಿದೆ ಎಂದು ಎಚ್ಚರಿಸಿದೆ.

ಪ್ರಕರಣದ ವಿವರ: 2019ರ ಸೆಪ್ಟೆಂಬರ್’​ನಲ್ಲಿ​ ಅರ್ಜಿದಾರ ನಾಯಕ್‌ ಬಿಎಂಟಿಸಿ ವೋಲ್ವೊ ಬಸ್’​ನಲ್ಲಿ ಶಾಂತಿನಗರದಿಂದ ಮೆಜೆಸ್ಟಿಕ್’​ಗೆ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ 29 ಟಿಕೆಟ್‌ ದರಕ್ಕೆ 30 ರೂಪಾಯಿ ಪಾವತಿಸಿದ್ದರು. ಆದರೆ, ನಿರ್ವಾಹಕರು ಒಂದು ರೂಪಾಯಿ ಚಿಲ್ಲರೆ ಹಿಂದಿರುಗಿಸಿರಲಿಲ್ಲ. ಆದ್ದರಿಂದ 15 ಸಾವಿರ ರೂ. ಪರಿಹಾರ ಕೋರಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಬಿಎಂಟಿಸಿ, ಇದೊಂದು ಕ್ಷುಲ್ಲಕ ಪ್ರಕರಣ ಎಂದು ಹೇಳಿತ್ತು. ಜೊತೆಗೆ ಸೇವಾ ನ್ಯೂನತೆಯಾಗಿಲ್ಲ. ಹೀಗಾಗಿ ಈ ದೂರನ್ನು ವಜಾ ಮಾಡಬೇಕೆಂದು ಮನವಿ ಮಾಡಿತ್ತು. ಆದರೆ, ವ್ಯಾಜ್ಯವು ಕ್ಷುಲ್ಲಕ ಎಂದೆನಿಸಿದರೂ ದೂರುದಾರರು ವಿಚಾರವನ್ನು ಹಕ್ಕು ಎಂದು ಪರಿಗಣಿಸಿ, ಅದನ್ನು ಆಯೋಗದ ಮುಂದೆ ಇಟ್ಟಿದ್ದಾರೆ ಎಂದು ಆಯೋಗ ತಿಳಿಸಿದೆ.

ಇಷ್ಟೇ ಅಲ್ಲ, ಇದು ಗ್ರಾಹಕರ ಹಕ್ಕಿನ ವಿಚಾರವಾಗಿದ್ದು, ಅದನ್ನು ಗುರುತಿಸಬೇಕಿದೆ. ಅರ್ಜಿದಾರರ ಪ್ರಯತ್ನವನ್ನೂ ಮೆಚ್ಚಬೇಕಿದೆ. ದೂರುದಾರರು ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ಆಯೋಗವು ತನ್ನ ಆದೇಶದಲ್ಲಿ ಹೇಳಿದೆ.

ಹಿಂದಿನ ಲೇಖನಸಿಎಂ ಮಗನ ಮೇಲೆ ಜೀವ ಬೆದರಿಕೆ ಆರೋಪ: ಸಂಜಯ್ ರಾವುತ್ ಮೇಲೆ ಎಫ್ಐಆರ್
ಮುಂದಿನ ಲೇಖನಹಾವೇರಿ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ