ಮನೆ ಜ್ಯೋತಿಷ್ಯ ನಕ್ಷತ್ರಗಳು ಮತ್ತು ಅವುಗಳ ಪ್ರಭಾವ

ನಕ್ಷತ್ರಗಳು ಮತ್ತು ಅವುಗಳ ಪ್ರಭಾವ

0

ಖಗೋಳ ಶಾಸ್ತ್ರದಂತೆ ಈ ಆಕಾಶ ಗಂಗೆಯಲ್ಲಿರುವ ಹಲವಾರು ಮಹತ್ವದ ನಕ್ಷತ್ರಗಳು ಕೆಲವು ರಾಶಿಗಳಲ್ಲಿವೆ. ಸೌರಮಂಡಲದಲ್ಲಿರುವ ಗ್ರಹಗಳಲ್ಲಿ ಭೂಮಿಯು ಒಂದಾಗಿರುವುದು. ನಕ್ಷತ್ರಗಳು ಭೂಮಿಯಿಂದ ಬಹಳ ದೂರ ಇವೆ. ಇವನು ಅಳೆಯಲು ಪ್ರಕಾಶ ವರ್ಷ ಎಂಬ ಅಳತೆಯನ್ನು ಬಳಸುತ್ತಾರೆ. ಪ್ರಕಾಶ ವರ್ಷ ಎಂದರೆ, ಸೂರ್ಯ ಒಂದು ವರ್ಷದ ಅವಧಿಯಲ್ಲಿ ಹೋಗುವ ದೂರವಾಗಿರುವುದು. ಸೂರ್ಯನ ಪ್ರಕಾಶ ಒಂದು ಸೆಕೆಂಡಿಗೆ 3.ಲಕ್ಷ ಕಿಲೋಮೀಟರ್ ದೂರ ಹೋಗುವುದೆಂದು ನಂಬಲಾಗಿದೆ.

Join Our Whatsapp Group

ಸ್ಕಂದ ಪುರಾಣದಲ್ಲಿ ವಿವರಿಸಿರುವಂತೆ ಈ ವಿಶ್ವದಲ್ಲಿ 80 ಸಮುದ್ರಗಳು ಮತ್ತು ನಕ್ಷತ್ರಗಳ ಸಂಖ್ಯೆ 1620 ಕೋಟಿ ಎಂದು ತಿಳಿಸಲಾಗಿದೆ. ಈ ತಾರಾಮಂಡಲದಲ್ಲಿ ಪ್ರಸಿದ್ಧವಾಗಿರುವ ಸಪ್ತರ್ಷಿಮಂಡಲವು ಸೇರಿದೆ. ಸಪ್ತರ್ಷಿಗಳೆಂದರೆ ಮರಿಚಿ, ವಸಿಷ್ಠ, ಅಂಗಿರಸ, ಆತ್ರಿ, ಪುಲಸ್ತ್ಯಾ, ಫಲಹ ಮತು ಕ್ರತು. ವಶಿಷ್ಠರ ಪತ್ನಿ ಅರುಂಧತಿ ಸಹ ಈ ಮಂಡಲದ ಸಮೀಪದಲ್ಲಿರುವ ಜೊತೆಗೆ ಒಂದು ಧ್ರುವ ನಕ್ಷತ್ರವು ಇದೆ.

ಚಂದ್ರನು ಚಲಿಸುವ ಪತವನ್ನು ಖಗೋಳ ವಿಜ್ಞಾನಿಗಳು 27 ಭಾಗಗಳನ್ನಾಗಿ ಮಾಡಿದ್ದಾರೆ. ಪ್ರತಿಯೊಂದು ಕ್ಷೇತ್ರವನ್ನು ಒಂದೊಂದು ವಿಶೇಷ ಹೆಸರಿನಿಂದ ನಕ್ಷತ್ರವೆಂದು ಕರೆದಿದ್ದಾರೆ. ಚಂದ್ರನನ್ನಾ ನಕ್ಷತ್ರಗಳ ಒಡೆಯಂದಿದ್ದಾರೆ. ಈ ನಕ್ಷತ್ರಗಳು ಪೂರ್ವದಿಂದ ಪಶ್ಚಿಮದ ಕಡೆಗೆ ಕ್ರಮವಾಗಿದೆ. ಪ್ರತಿ ಒಂದು ನಕ್ಷತ್ರದೊಂದಿಗೆ ಪ್ರತ್ಯೇಕ ಕಥೆಯು ಸಹ ಸೇರಿಕೊಂಡಿರುವುದು….

ಬೇರೆ ಬೇರೆ ದೇಶದವರು ಬೇರೆ ಬೇರೆ ರೀತಿಯಲ್ಲಿ ನಕ್ಷತ್ರಗಳ ಅಧ್ಯಯನ ಮಾಡಿದ್ದಾರೆ. ಯುನಾನಿಗಳು ಬೇರೆ ರೀತಿ ತಿಳಿದಿದ್ದಾರೆ. ಅಮೆರಿಕ ಭೂಗೋಳ ಅಧ್ಯಯನ ಸಂಸ್ಥೆ ಸಮಗ್ರ ನಕ್ಷತ್ರಗಳ ಚಿತ್ರಪಟವನ್ನು ತಯಾರಿಸಿದೆ. ಇದರಲ್ಲಿ ಎಲ್ಲಾ ನಕ್ಷತ್ರಗಳ ಆಕೃತಿಗಳನ್ನು ತೋರಿಸಲಾಗಿದೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳ ಗಣ. ಯೋನಿ, ನಾಡಿ, ಗೋತ್ರಗಳನ್ನು ಸಹ ವಿವರಿಸಲಾಗಿದೆ.

ಒಟ್ಟು 27 ನಕ್ಷತ್ರಗಳ ಹೆಸರು ಹೇಳಲಾಗಿದೆ. ಅಭಿಜಿತ್ ಎಂಬ ಒಂದು ನಕ್ಷತ್ರವನ್ನು ಉತ್ತರಷಾಡದ ನಾಲ್ಕನೇ ಪಾದವೆಂದು ತಿಳಿಯಲಾಗಿದೆ. ಭಾರತೀಯ ಖಗೋಳ ತಜ್ಞರು ನಕ್ಷತ್ರಗಳ ಆಕಾರವನ್ನು ನೋಡಿ ಸ್ಥಾನ ನಿರ್ದೇಶನ ಮಾಡಿದ್ದಾರೆ. ರಾಶಿ ಚಕ್ರದ ಇಡಿ ವೃತ್ತವನ್ನು ಸರಿಯಾಗಿ 30 ಅಂಶಗಳಂತೆ 12 ಭಾಗ ಮಾಡಿದ್ದಾರೆ. ಪ್ರತಿ ರಾಶಿಗೆ 30 ಅಂಶ ಬರುತ್ತವೆ. ರಾಶಿ ಚಕ್ರದಲ್ಲಿ ಸೇರುವ ಎಲ್ಲ 27 ನಕ್ಷತ್ರಗಳಿವೆ ನಾಲ್ಕು ಪಾದಗಳಂತೆ ಲೆಕ್ಕ ಮಾಡಿದರೆ, 108 ಪಾದಗಳಾಗುವವು ಪ್ರತಿ ರಾಶಿಗೆ 9 ಪಾದಗಳಂತೆ ವಿಂಗಡಿಸಿದ್ದಾರೆ…..

ಹೀಗೆ ಒಂದು ನಕ್ಷತ್ರಕ್ಕೆ ಸುಮಾರು 13 ಅಂಶ 20 ಕಳೆಗಳಷ್ಟು ಸ್ಥಾನ ದೊರಕುವುದು. ಈ ನಕ್ಷತ್ರ ಪಾದಗಳ ಆಧಾರದಿಂದಲೇ ಹುಟ್ಟಿದ ಮಗುವಿಗೆ ಹೆಸರಿಡುವ ಸಂಪ್ರದಾಯವಿರಬಹುದು.

ಪ್ರತಿಮಾಸದ ಹುಣ್ಣಿಮೆಯ ದಿನ ಚಂದ್ರನೂ ಬೇರೆ ನಕ್ಷತ್ರದಲ್ಲಿರುವದು ಕಂಡುಬರುವುದು. ಈ ಅದರದಿಂದಲೇ ಹಿಂದೂ ತಿಂಗಳುಗಳ ಹೆಸರುಗಳು ಪ್ರಸಿದ್ಧವಾಗಿದೆ. ಚೈತ್ರ ಮಾಸವು ಚಿತ್ತ ನಕ್ಷತ್ರದಲ್ಲಿ, ಚಂದ್ರನು ಇದ್ದಾಗ ಆರಂಭವಾಗುವುದು. ವೈಶಾಖ ವಿಶಾಖ ನಕ್ಷತ್ರದಲ್ಲಿ ಆರಂಭಗೊಳ್ಳುವುದು, ಜೇಷ್ಠ ಮಾಸವು ಜೇಷ್ಠ ನಕ್ಷತ್ರದಲ್ಲಿ, ಆಶಾಡ ಮಾಸವು ಉತ್ತರಾಷಾಡದಲ್ಲಿ, ಶ್ರಾವಣ ಮಾಸವು ಶ್ರಾವಣ ನಕ್ಷತ್ರದಲ್ಲಿ, ಭಾದ್ರಪದ ಮಾಸವು ಉತ್ತರ ಭಾದ್ರಪದ ನಕ್ಷತ್ರದಲ್ಲಿ, ಅಶ್ವಿನಿ ಮಾಸವು ಅಶ್ವಿನಿ ನಕ್ಷತ್ರದಲ್ಲಿ, ಮಾರ್ಗಶಿರವು ಮೃಗಶಿರದಲ್ಲಿ, ಪುಷ್ಯವು ಪುಷ್ಯ ನಕ್ಷತ್ರದಲ್ಲಿ, ಕಾರ್ತಿಕ ಕೃತಿಕ ನಕ್ಷತ್ರದಲ್ಲಿ, ಮಾಘ ನಕ್ಷತ್ರದಲ್ಲಿ ಮಾಘಮಾಸ ಮತ್ತು ಪಾಲ್ಗುಣ ಮಾಸವು ಉತ್ತರ ಪಾಲ್ಗುಣಿ ನಕ್ಷತ್ರದಲ್ಲಿ ಆರಂಭವಾಗುವವು.

ಹೊಸ ವರ್ಷದ ದಿನವು ಸೂರ್ಯನೂ ಮೇಘ ರಾಶಿಯಲ್ಲಿದ್ದಾಗ ಆರಂಭಗೊಳ್ಳುವುದು. ರಾಶಿಗಳಿಗೆ ಸೂರ್ಯನ ಇರುವುವಿಕೆಯು ಆಧಾರವಾಗಿರುವುದು. ಆಷಾಢ ಮಾಸದಲ್ಲಿ ಸೂರ್ಯನು ಮಿಥುನ ರಾಶಿಯಲ್ಲಿರುವನು. ಹೀಗೆ 12 ಮಾಸಗಳಲ್ಲಿ, 12 ರಾಶಿಗಳಲ್ಲಿ ರವಿಯು ಕಂಡುಬರುವನು.

ಆಶ್ಮಿಜಾ – ತುಲಾ, ಚೈತ್ರ – ಮೇಷರಾಶಿ, ವೈಶಾಖ – ವೃಷಭ, ಜೇಷ್ಠ- ಮಿಥುನ, ಕಾರ್ತಿಕ – ವೃಶ್ಚಿಕರಾಶಿ, ಮಾರ್ಗಶಿರ – ಧನು, ಪುಷ್ಯ – ಮಕರ, ಆಷಾಢ – ಕರ್ಕ, ಶ್ರಾವಣ – ಸಿಂಹ, ಭಾದ್ರಪದ – ಕನ್ಯಾ, ಮಘ – ಕುಂಭ, ಪಾಲ್ಗುಣ – ಮೀನ

ಕಲ್ಪವೆಂಬ ಶಾಸ್ತ್ರದಲ್ಲಿ ನಕ್ಷತ್ರಗಳ ಸ್ಥಿತಿಯು ಬಗೆಗೆ ವಿವರವಾಗಿ ತಿಳಿಸಲಾಗಿದೆ. ಆಕಾಶ ಗಂಗೆಯಲ್ಲಿರುವ ನಕ್ಷತ್ರಗಳ ಸಮೂಹವುಗಳ ಲಿಂಗ, ದೇವತೆಗಳು, ಅವುಗಳ ಸಂಖ್ಯೆ, ಆಕಾರ, ಇರುವ ದಿಕ್ಕು, ಮುಂತಾದವನ್ನು ಸ್ಪಷ್ಟವಾಗಿ ವಿವರಿಸಲಾಗಿದೆ.