ಮನೆ ಉದ್ಯೋಗ ಯಾದಗಿರಿ ಜಿಲ್ಲೆ ಕೋರ್ಟ್ ಗಳಲ್ಲಿ ಶೀಘ್ರಲಿಪಿಗಾರರ ನೇಮಕ: ಇಂದೇ ಅರ್ಜಿ ಸಲ್ಲಿಸಿ

ಯಾದಗಿರಿ ಜಿಲ್ಲೆ ಕೋರ್ಟ್ ಗಳಲ್ಲಿ ಶೀಘ್ರಲಿಪಿಗಾರರ ನೇಮಕ: ಇಂದೇ ಅರ್ಜಿ ಸಲ್ಲಿಸಿ

0

ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ : ಉಚ್ಛ ನ್ಯಾಯಾಲಯ

ಹುದ್ದೆಯ ಸ್ಥಳ : ಯಾದಗಿರಿ ನ್ಯಾಯಾಲಯಗಳು

ಹುದ್ದೆಯ ಹೆಸರು : ಶೀಘ್ರಲಿಪಿಗಾರರು ಗ್ರೇಡ್ -3 (ಸ್ಟೆನೋಗ್ರಾಫರ್)

ಹುದ್ದೆಗಳ ಸಂಖ್ಯೆ : 06

ವೇತನ ಶ್ರೇಣಿ : ರೂ.27,650-52,650. ಮತ್ತು ಇತರೆ ಭತ್ಯೆಗಳು

ವಿದ್ಯಾರ್ಹತೆ

1. ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು ಅಥವಾ ಡಿಪ್ಲೊಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

2. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿಯಲ್ಲಿ ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಮತ್ತು ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆ ಪಾಸ್ ಮಾಡಿರಬೇಕು. ಅಥವಾ ಡಿಪ್ಲೊಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪದವಿಯೊಂದಿಗೆ ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ

ಅಭ್ಯರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರತಿ ನಿಮಿಷಕ್ಕೆ 120 ಪದಗಳ ವೇಗದಂತೆ 5 ನಿಮಿಷಗಳ ಉಕ್ತಲೇಖನ ನೀಡಿ ನಂತರ 45 ನಿಮಿಷಗಳ ಅವಧಿಯಲ್ಲಿ ಬೆರಳಚ್ಚು ಯಂತ್ರ / ಗಣಕಯಂತ್ರದ ಮೇಳೆ ಲಿಪ್ಯಂತರ ಮಾಡಲು ಹೇಳಲಾಗುವುದು. ಸಾಮರ್ಥ್ಯ ಪರೀಕ್ಷೆ 100 ಅಂಕಗಳಿಗೆ ಇದ್ದು, ಪಾಸ್ ಆಗಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಸಂದರ್ಶನವು 10 ಅಂಕಗಳಿಗೆ ಇರುತ್ತದೆ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ, ಎಸ್ ಸಿ / ಎಸ್ ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷದವರೆಗೆ ಅರ್ಜಿ ಹಾಕಲು ಅವಕಾಶ ಇರುತ್ತದೆ.

ಅರ್ಜಿ ಶುಲ್ಕ ರೂ.200.

ಎಸ್ ಸಿ / ಎಸ್ ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100.

ಪ್ರಮುಖ ದಿನಾಂಕಗಳು

ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 31-03-2023

ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 29-04-2023 ರ ರಾತ್ರಿ 11-59 ಗಂಟೆವರೆಗೆ.

ಭಾರತೀಯ ಸ್ಟೇಟ್ ಬ್ಯಾಂಕ್ ಚಲನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ : 03-05-2023

ಅರ್ಜಿ ಸಲ್ಲಿಸುವ ವಿಧಾನ

– ವೆಬ್ ಸೈಟ್ ‘https://districts.ecourts.gov.in/yadgir-onlinerecruitment’ಗೆ ಭೇಟಿ ನೀಡಿ.

– ನಂತರ ಓಪನ್ ಆಗುವ ವೆಬ್ ಪೇಜ್ ನಲ್ಲಿ ‘Click Here To Apply For The Post’ ಎಂಬಲ್ಲಿ ಕ್ಲಿಕ್ ಮಾಡಿ.

– ನಂತರ ಮತ್ತೊಂದು ವೆಬ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಹಾಕಿರಿ.

ಹಿಂದಿನ ಲೇಖನಈ ರಾಶಿಯವರು ತಮ್ಮದು ತಪ್ಪಿದ್ದರೂ ಎಂದಿಗೂ ಕ್ಷಮೆ ಕೇಳುವುದಕ್ಕೆ ಹೋಗರು..!
ಮುಂದಿನ ಲೇಖನನನ್ನ ವಿರುದ್ಧ ಎಫ್ ಐಆರ್ ದಾಖಲಾಗಿದ್ದರೆ ವಿಚಾರಣೆ ಎದುರಿಸುವೆ: ಪುನೀತ್ ಕೆರೆಹಳ್ಳಿ