ಮನೆ ಮನೆ ಮದ್ದು ಸ್ಟೀವಿಯ (ಮಧುವಂತ )

ಸ್ಟೀವಿಯ (ಮಧುವಂತ )

0

      ಸ್ಟೀವಿಯದ ಮೂಲಸ್ಥಾನ ಪೆರುಗೈ. ಇದು ಬಹುವಾರ್ಷಿಕ ಸಸ್ಯವಾಗಿದ್ದು ಸಿಹಿ ಸಸ್ಯ ಎಂಬ ಹೆಸರು ಪಡೆದಿದೆ. ಇದರಿಂದ ದೊರೆಯುವ ಸಕ್ಕರೆಯು ಮಧುಮೇಹ ರೋಗಿಗಳಿಗೆ ಉತ್ತಮ ವರದಾನವಾಗಿದೆ.

Join Our Whatsapp Group

 ಸಸ್ಯವರ್ಣನೆ

       ಸ್ಟೀವಿಯ (ಸ್ಟೀವಿಯ ರೆಬುಡಿಯಾನ ಸಹನಾಮ ಯುಪಟೊರಿಯಂ ರೆಬುಡಿಯಾನ) ಆಸ್ಟರೇಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಸಸ್ಯಮೂಲಿಕೆ.

 ಮಣ್ಣು

      ಈ ಬೆಳೆಗೆ ನೀರಾವರಿ ಸೌಲಭ್ಯವುಳ್ಳ ಗೋಡು ಮಣ್ಣುಗಳು ಉತ್ತಮ, ಲವಣಯುಕ್ತ ಹಾಗೂ ನೀರು ನಿಲ್ಲುವ ಮಣ್ಣುಗಳು ಇದರ ಬೇಸಾಯಕ್ಕೆ ಸೂಕ್ತವಿಲ್ಲ.

 ಹವಾಗುಣ

        ಸ್ಟೀವಿಯ ಬೇಸಾಯಕ್ಕೆ ಕಡಿಮೆ ತೇವವುಳ್ಳ ಸಮಶೀತೋಷ್ಣವಲಯ ಪ್ರದೇಶವು ಉತ್ತಮ. ಸ್ವಲ್ಪ ಮಂಜುಗಡ್ಡೆ, ಹೆಚ್ಚಿನ ಸೂರ್ಯನ ಶಾಖ ಮತ್ತು ತೇವಭರಿತ ಹೆಚ್ಚು ಉಷ್ಣಾಂಶಗಳಿದ್ದರೆ ಹೆಚ್ಚು ಎಲೆಗಳ ಉತ್ಪಾದನೆಯಾಗುತ್ತದೆ.

 ಬೇಸಾಯ ಕ್ರಮಗಳು

       ಸಾಮಾನ್ಯವಾಗಿ ಕಾಂಡದ ತುಂಡುಗಳಿಂದ ವೃದ್ಧಿ ಮಾಡಿ ಬೆಳೆಸಲಾಗುವುದು. ಪ್ರಸಕ್ತ ವರ್ಷದಲ್ಲಿ ಬೆಳೆದ ಕೊಂಬೆಯಿಂದ 15 ಸೆಂ.ಮೀ. ಉದ್ದದ ಕಾಂಡದ ತುಂಡುಗಳು ಉತ್ತಮ. 1 x 1 ಮೀ. ಭೂಮಿಯನ್ನು ಸಿದ್ಧಪಡಿಸಿ 45 X 20 ಸೆಂ.ಮೀ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಬೇಕು. ಫೆಬ್ರವರಿ – ಮಾರ್ಚ್ ನಾಟಿ ಮಾಡಲು ಸೂಕ್ತವಾದ ಕಾಲ.

 ನೀರಾವರಿ

ಸ್ಟೀವಿಯವು ಹೆಚ್ಚು ತೇವಾಂಶದಲ್ಲಿ ಚೆನ್ನಾಗಿ ಬೆಳೆಯುವ ಸಸ್ಯವಾದ್ದರಿಂದ ಬೇಸಿಗೆಯಲ್ಲಿ ಮಣ್ಣಿನ ತೇವಾಂಶಕ್ಕನುಗುಣವಾಗಿ ನೀರು ಕೊಡುವುದು ಅವಶ್ಯಕ. ಬೇಸಿಗೆಯಲ್ಲಿ ಪ್ರತಿ 3 ದಿನಕ್ಕೊಮ್ಮೆ ನೀರು ಕೊಡುವುದು ಒಳ್ಳೆಯದು.

       ನಾಟಿ ಮಾಡಲು ಜೂನ್ ತಿಂಗಳು ಸೂಕ್ತವಾದ ಕಾಲ. ಆಗ 2 X 2 ಮೀ. ಭೂಮಿಯನ್ನು ಸಿದ್ಧಗೊಳಿಸಿ 10 ಕೆ.ಜಿ. ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಹರಡಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು. ನಂತರ ಸಸಿಗಳನ್ನು 30 X 15 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು.

     ಸ್ಟೀವಿಯವನ್ನು ಸಾಮಾನ್ಯವಾಗಿ ಮಳೆಯಾಶ್ರಿತ ಬೆಳೆಯಾಗಿ ಬೆಳೆಯಲಾಗುತ್ತದೆ. ಪ್ರಾರಂಭದಲ್ಲಿ 3-4 ದಿನಗಳಿಗೊಮ್ಮೆ ನೀರು ಕೊಟ್ಟರೆ ಸಾಕಾಗುತ್ತದೆ.

 ಕಳೆ ಹತೋಟಿ

        ಪ್ರಾರಂಭದ ಹಂತದಲ್ಲಿ ಕಳೆಗಳ ಪೈಪೋಟಿ ಇರುತ್ತದೆ. ಆದ್ದರಿಂದ ನಾಟಿ ಮಾಡಿದ 20-30 ದಿನಗಳಲ್ಲಿ ಮೊದಲ ಬಾರಿ ಕಳೆ ತೆಗೆಯಬೇಕು. ಆನಂತರ ಪ್ರತಿ ಕೊಯ್ದಾದ ಮೇಲೆ ಕಳೆ ತೆಗೆಯಬೇಕಾಗುತ್ತದೆ.

 ಕೀಟ ಮತ್ತು ರೋಗಗಳು

      ಇದು ಗಡುತರವಾದ ಸಸ್ಯವಾಗಿರುವುದರಿಂದ ಕೀಟ ಮತ್ತು ರೋಗಗಳ ಬಾಧೆ ಹೆಚ್ಚಿರುವುದಿಲ್ಲ.

 ಕೊಯ್ದು ಮತ್ತು ಇಳುವರಿ :

        ಈ ಬೆಳೆಯು ಬಿತ್ತನೆ ಮತ್ತು ನಾಟಿ ಮಾಡಿದ 90ರಿಂದ 120 ದಿನಗಳಲ್ಲಿ ಹೂ ಬಿಡುತ್ತದೆ. ಈ ಹಂತದಲ್ಲಿ ಬೆಳೆ ಮೊದಲ ಕೊಯ್ಲಿಗೆ ಸಿದ್ದವಿರುತ್ತದೆ. ಕೊಯ್ದು ಮಾಡುವಾಗ ಗಿಡಗಳನ್ನು ಭೂಮಿ ಮಟ್ಟದಿಂದ 10-15 ಸೆಂ.ಮೀ. ಎತ್ತರದ ಬುಡಭಾಗದಲ್ಲಿ ಬಿಟ್ಟು ಕತ್ತರಿಸಬೇಕು. ಕಟಾವು ಮಾಡಿದ ಮುಂದಿನ 60 ದಿನಗಳ ನಂತರ ಬೆಳೆ ಮತ್ತು ಕೊಯ್ಲಿಗೆ ಬರುತ್ತದೆ. ಒಂದು ವರ್ಷದಲ್ಲಿ ಒಟ್ಟು 2-3 ಕೊಯ್ದುಗಳನ್ನು ಮಾಡಬಹುದು ಕೊಯ್ದಾದ ಮೇಲೆ ಗಿಡಗಳನ್ನು ನೆರಳಿನಲ್ಲಿ 3-4 ದಿನಗಳ ಕಾಲ ಒಣಗಿಸಿ ನಂತರ ಶೇಖರಿಸಿಡಬೇಕು. 4 ಚ.ಮೀಟರ್ ಪ್ರದೇಶದಿಂದ 1 ಕೆ.ಜಿ.ಯಷ್ಟು ಒಣಗಿದ ಸಸ್ಯದ ಇಳುವರಿ ದೊರೆಯುತ್ತದೆ.

 ಉಪಯುಕ್ತ ಭಾಗ

ಎಲೆ.

 ರಾಸಾಯನಿಕ ಘಟಕಗಳು

     ಸ್ಟೀವಿಯದಲ್ಲಿರುವ ಸ್ಟೀವಿಯೊಸೈಡ್ ಮತ್ತು ರಿಬುಡಿಸೈಡ್-ಎ ಗಳು ರಕ್ತದಲ್ಲಿನ ಇನ್ಸುಲಿನ್ ಸಮತೋಲದಲ್ಲಿರಿಸುವ ಗುಣಹೊಂದಿವೆ. ಇತರ ಸಾಕರಿನ್, ಆಸ್ಟರೇಮ್, ಆಸುಲ್ಬಮ್-ಕೆ ಮುಂತಾದ ಕೃತಕ ಸಿಹಿಗಳಂತೆ ಯಾವುದೇ ಬದಲಾವಣೆ ಹೊಂದದೆ ಸ್ಥಿರವಾಗಿರುತ್ತವೆ ಅತಿ ಹೆಚ್ಚಿನ ಉಷ್ಣಾಂಶ ಅಂದರೆ 100 ಸೆ.ನಲ್ಲಿಯೂ ಯಾವುದೇ ಬದಲಾವಣೆ ಹೊಂದದೇ ಸ್ಥಿರವಾಗಿರುತ್ತವೆ. ಅಲ್ಲದೇ ಇದಕ್ಕೆ ಯಾವುದೇ ಕ್ಯಾಲೊರಿ (ಶಕ್ತಿ ) ಇಲ್ಲ. ಇದನ್ನು ಅಡುಗೆಯಲ್ಲಿ ಬಳಸಿದಾಗ ಹಳಸುವುದಿಲ್ಲ ಮತ್ತು ಹುಳಿ (ಹುದುಗು) ಬರುವುದಿಲ್ಲ. ಸ್ಟೀವಿಯಾದಿಂದ ಪಡೆಯಲಾದ ಸಕ್ಕರೆಯು 250ಪಟ್ಟು ಹೆಚ್ಚು ಸುಕ್ರೋಸ್ ಹೊಂದಿರುತ್ತದೆ.

 ಔಷಧೀಯ ಗುಣಗಳು

★ ಮಧುಮೇಹ ರೋಗಿಗಳು ಸ್ಟೀವಿಯದಿಂದ ತಯಾರಿಸಿದ ಸಕ್ಕರೆಯನ್ನು ಆಹಾರಪದಾರ್ಥಗಳಲ್ಲಿ ಮತ್ತು ಪಾನೀಯಗಳಲ್ಲಿ ಬಳಸಬೇಕು. ಇದರಿಂದ ಅವರಿಗೆ ಸಿಹಿರುಚಿ ದೊರಕುವುದಲ್ಲದೇ ರಕ್ತದಲ್ಲಿನ ಸಕ್ಕರೆ ಅಂಶವೂ ನಿಯಂತ್ರಣಕ್ಕೆ ಬರುತ್ತದೆ.

★ಅಧಿಕ ರಕ್ತದೊತ್ತಡದಿಂದ ಬಳಲುವವರಿಗೂ ಸ್ಟೀವಿಯಾದಿಂದ ಪಡೆದ ಸಕ್ಕರೆಯು ಉತ್ತಮವಾದುದು. ಇದನ್ನು ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.

★ಬೊಜ್ಜುಳ್ಳವರು ಸ್ಪೀವಿಯಾದಿಂದ ಪಡೆಯಲಾದ ಸಕ್ಕರೆಯನ್ನು ಆಹಾರದಲ್ಲಿ ಬಳಸುವುದರಿಂದ ತೂಕ ಹೆಚ್ಚುವುದನ್ನು ತಡೆಗಟ್ಟಬಹುದು.

★ ಚರ್ಮರೋಗಗಳಿಂದ ಬಳಲುವವರು ಮತ್ತು ಹುಳುಕುಹಲ್ಲಿನ ತೊಂದರೆಯಿಂದ ಬಳಲುವವರಿಗೂ ಸ್ಟೀವಿಯಾದಿಂದ ತಯಾರಿಸಿದ ಸಕ್ಕರೆ ಉಪಯುಕ್ತವಾದುದು.

   ★ಸ್ಟೀವಿಯಾದಿಂದ ಮನೆಯಲ್ಲಿಯೇ ಸಕ್ಕರೆ ತಯಾರಿಸುವ ಬಗೆ : ಸ್ಟೀವಿಯಾದ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬಹುದು. ಈ ಸಕ್ಕರೆಯನ್ನು ಸಿಹಿತಿಂಡಿಗಳಿಗೆ, ಪಾಯಸಕ್ಕೆ, ಕಾಫಿ, ಟೀ, ಪಾನೀಯಗಳಿಗೆ ಬಳಸಬಹುದು.

★ ಅಮೆರಿಕಾ, ಬ್ರೆಜಿಲ್, ಜಪಾನ್, ಕೊರಿಯಾ, ತೈವಾನ್, ದಕ್ಷಿಣ ಪೂರ್ವ ಏಷ್ಯಾ ಖಂಡಗಳಲ್ಲಿ ಸ್ಟೀವಿಯಾ ಎಲೆಗಳಿಗೆ ತುಂಬ ಬೇಡಿಕೆಯಿದೆ.

★ ಜಪಾನ್‌ನಲ್ಲಿ ಸ್ಟೀವಿಯಾ ಸಕ್ಕರೆ ಬಳಸಿದ ಐಸ್‌ಕ್ರೀಂ, ಕ್ಯಾಂಡಿ, ಬಿಸ್ಕತ್, ತಂಪುಪಾನೀಯಗಳು ಲಭ್ಯ.

 ಇತರ ಭಾಷೆಗಳಲ್ಲಿ

 ಇಂಗ್ಲೀಷ್   —Stevia

 ವೈಜ್ಞಾನಿಕ ಹೆಸರು  — Stevia rebandiana Bertoni