ಎರಡೂ ಕೈಗಳನ್ನು ಒಂದರಲ್ಲೊಂದು ಹುದುಗಿಸಿ ಹೆಬ್ಬೆಟ್ಟುಗಳನ್ನು ಒಂದಕ್ಕೊಂದು ಸಮಾನಾಂತರವಾಗಿ ಜೋಡಿಸಿ ಬೆಟ್ಟುಗಳ ಮೇಲಿಡ ಬೇಕು.
ಪರಿಣಾಮ – ಯೋಗಶಾಸ್ತ್ರದಂತೆ ಶರೀರದಲ್ಲಿರುವ ಹತ್ತು ನಾಡಿಗಳು – ಇಡಾ, ಪಿಂಗಳ, ಸುಷಮ್ಯಾ, ಗಂಧಾರಿ, ಹಸ್ತಿಜಿಹ್ವಾ, ಪೂಷಾ, ಯಶಸ್ವಿನಿ, ಅಲಂಭೂಷಾ, ಕುಹೂ, ಶಂಖನಿ ಇವುಗಳು ಪ್ರಭಾವಿತಗೊಂಡು ಶರೀರದ ಬಲ ಸಂವರ್ಧನೆಯಾಗುತ್ತದೆ.
ಉಪಯೋಗ –
★ ವ್ಯಕ್ತಿ ಸೂಕ್ಷ್ಮಗ್ರಾಹಿಯಾಗುತ್ತಾನೆ.
★ ಶಂಖನಿನಾಡಿ ಕಾರ್ಯಪ್ರವೃತ್ತವಾಗಿ ಮೂಲಾಧಾರದ ಕುಂಡಲಿನೀ ಶಕ್ತಿ ಊರ್ಧ್ವಗಾಮಿನಿ ಆಗುತ್ತದೆ.
★ ಸ್ಥಂಭನಶಕ್ತಿ ಬೆಳೆದು ಸಂತಾನ ಪ್ರಾಪ್ತಿಯಾಗಲು ಸುಲಭವಾಗುತ್ತದೆ. ಲೈಂಗಿಕ ತೊಂದರೆಗಳು ನಿವಾರಣೆಯಾಗುತ್ತದೆ.
★ ಕೈಗಳ ಹಿಂಬದಿಯಲ್ಲಿ ಬೆನ್ನು ಹುರಿಯು ಒತ್ತ ಬಂಧುಗಳು ಈ ಮುದ್ರೆಯಿಂದ ಒತ್ತಲ್ಪಡುತ್ತದೆ. ಇದರಿಂದ ಬೆನ್ನು ಹುರಿ ಸದಾ ನೇರವಾಗಿರುತ್ತದೆ.
★ ಸ್ಲಿಪ್ ಡಿಸ್ಕ್ನಂತಹ ಬೆನ್ನುಹುರಿಯ ನೋವುಗಳು ಸರಿ ಹೋಗುತ್ತದೆ.
★ಮಾತು, ಮಧುರಸ್ಪರ, ಪಚನಶಕ್ತಿ, ಜತರ, ಕರುಳಿನ ಕಾರ್ಯಗಳಿಗೆ ಈ ಮುದ್ರೆ ಪರಿಣಾಮಕಾರಿ
8. ಸೂರ್ಯ ಮುದ್ರೆ
ಉಂಗುರ ಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ ಹೆಬ್ಬೆಟ್ಟನ್ನು ಉಂಗುರ ಬೆರಳಿನ ಬೆನ್ನಿನ ಮೇಲೆ ಇಡಬೇಕು. ಆಗ ಸೂರ್ಯಮುದ್ರೆ ಆಗುತ್ತದೆ.”
ಪರಿಣಾಮ – ಪೃಥ್ವಿತತ್ವವು ಕಡಿಮೆಯಾಗಿ ಅಗ್ನಿತತ್ವವು ಬೆಳೆಯುತ್ತದೆ. ಅಗ್ನಿತತ್ವವು ಶರೀರದ ಉಷ್ಣತೆಯನ್ನು ಹೆಚ್ಚಿಸುತ್ತದೆ.
ಆಗ್ನಿತತ್ವದ ವೃದ್ಧಿಯಿಂದ ಪಚನಕ್ರಿಯೆ ಸರಿಹೊಂದುತ್ತದೆ. ಉಷ್ಣತೆಯ ಬೆಳವಣಿಗೆಯಿಂದ ಬೊಬ್ಬು ಕರಗಿ ಶರೀರ ತೆಳ್ಳಗಾಗುತ್ತದೆ.
★ ಕಫ, ಶೀತ, ನೆಗಡಿ, ಗಂಟಲು ನೋವಿದ್ದಾಗ ಈ ಮುದ್ರೆ ಉಪಯೋಗವಾಗುತ್ತದೆ ದೃಷ್ಟಿ ದೋಷ ಸರಿಯಾಗುತ್ತದೆ.
★ ಚಳಿ, ನಡುಕ ಶಮನಗೊಳಿಸುತ್ತದೆ. ಕೈಕಾಲುಗಳು ತಣ್ಣಗಾದಾಗ ಈ ಮುದ್ರೆಯಿಂದ ಉಷ್ಣಾಂಶ ವೃದ್ಧಿ ಮಾಡಬಹುದು.
★ ಬೊಜ್ಜು ಕರಗಿಸಿಕೊಳ್ಳಬಹುದು ಒಂದು ತಿಂಗಳು ನಿಯಮಿತವಾಗಿ ಮಾಡಿದರೆ 2 ಕಿಲೋ ತೂಕ ಕಡಿಮೆಯಾಗುತ್ತದೆ.
★ ರಕ್ತದಲ್ಲಿ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಹಸಿವು ಉಂಟು ಮಾಡುತ್ತದೆ.
★ ಕಣ್ಣಿನ ಬೇನೆ ಕ್ಯಾಟರಾಕ್ಟ್ ಅನ್ನೂ ಗುಣಪಡಿಸುತ್ತದೆ. ಥೈರಾಯ್ಡ್ ಗ್ರಂಥಿಯ ಕಾರ್ಯ ಚುರುಕು ಗೊಳಿಸುತ್ತದೆ.
9. ವಾಯು ಮುದ್ರೆ
ತೋರುಬೆರಳು ವಾಯುತತ್ವವನ್ನು ನಿರ್ದೇಶಿಸುತ್ತದೆ. ಈ ತೋರು ಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ ಹೆಬ್ಬೆಟ್ಟನ್ನು ತೋರು ಬೆರಳಿನ ಬೆನ್ನಿನ ಮೇಲಿಡಬೇಕು.
ಪರಿಣಾಮ – ತೋರುಬೆರಳು ಬಗ್ಗಿಸಿ ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿದಾಗ ವಾಯುತತ್ವವನ್ನು ಕಡಿಮೆ ಮಾಡಿದಂತಾಯಿತು. ಅಗ್ನಿಯು ವಾಯುತತ್ವ ವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಆಕಳಿಕೆ, ತೇಗು, ಮಲವಿಸರ್ಜನ ಭಾಗದಿಂದ ವಾಯು ವಿಸರ್ಜನೆ ಶಮನಗೊಳ್ಳುತ್ತದೆ.
ಉಪಯೋಗ – ಪಂಚತತ್ವದಲ್ಲಿ ವಾಯುತತ್ವವು ಹೆಚ್ಚಾದಾಗ ವಿವಿಧ ರೀತಿಯ ವ್ಯಾಧಿಗಳು ತಲೆದೋರುತ್ತದೆ ಹೊಟ್ಟೆ ಉಬ್ಬರಿಸುವುದು, ಶರೀರದ
ಎಲ್ಲಾ ಭಾಗಗಳಲ್ಲಿ ನೋವು, ಸಿಡಿತ, ಸೊಂಟನೋವು, ಬೆನ್ನುನೋವು, ವಾತ, ಸಂಧಿವಾತ, ಕಫವಾತ, ಆರ್ಧಾಂಗವಾತ, ಸ್ಟಾಂಡಿಲ್ಯಾಟಿಸ್, ಸಾಯಟಿಕಾ ಇವುಗಳು ವಾಯು ಪ್ರಕೋಪ ವ್ಯಾಧಿಗಳು. ಈ ಮುದ್ರೆಯಿಂದ ಶಮನವಾಗುತ್ತದೆ. ವಾಯುಮುದ್ರೆ 50 ನಿಮಿಷ. ಆದರೆ ಜೊತೆ ಪ್ರಾಣಮುದ್ರೆ 15 ನಿಮಿಷ ಮಾಡಬೇಕು. ಪ್ರತಿದಿನ 2-3 ಭಾರಿ ಮಾಡಿದರೆ 15 ದಿನದಲ್ಲಿ ಪೂರ್ಣವಾಗಿ ಶಮನವಾಗುತ್ತವೆ. ಅನಂತರ ಇದನ್ನು ನಿಲ್ಲಿಸಿ, ಜ್ಞಾನ ಮುದ್ರೆ ಮತ್ತು ಪ್ರಾಣಯಾಮ ಮಾಡಬೇಕು.
★ ಕತ್ತಿನ ನೋವು ಭುಜಗಳ ಬಿಗಿತ ಶಮನಗೊಳ್ಳುತ್ತದೆ. ಕಣ್ಣು ರೆಪೆ ಸತತವಾಗಿ ಬಡಿಯುತ್ತಿದ್ದರೆ ಈ ಮುದ್ರೆ ಮಾಡಿ.
★ ಧ್ಯಾನದ ಮೊದಲು ಈ ಮುದ್ರೆ ಮಾಡಿದರೆ ಮನಸ್ಸಿನ ಚಂಚಲತೆ ಕಡಿಮೆಯಾಗಿ ಏಕಾಗ್ರತೆ ಬರುತ್ತದೆ. ಇದನ್ನು ಚಿನ್ಮುದ್ರೆ’ ಎನ್ನುತ್ತಾರೆ.
★ ಪೋಲಿಯೋ ವ್ಯಾಧಿ ಶಮನವಾಗುತ್ತದೆ. ಪ್ರತಿದಿನ 50 ನಿಮಿಷದಂತೆ 6 ತಿಂಗಳು ಮಾಡಿ, ಜೊತೆಯಲ್ಲಿ ಪೃಥ್ವಿ ಮತ್ತು ಪ್ರಾಣಮುದ್ರೆ 15 ನಿಮಿಷಗಳು ಮಾಡಬೇಕು.
★ ಬಲಭಾಗದಲ್ಲಿ ನೋವಿದ್ದಾಗ ಎಡಗೈಯಿಂದ, ಎಡಭಾಗದಲ್ಲಿದ್ದಾಗ ಬಲಗೈಯಿಂದ ಈ ಮುದ್ರೆ ಮಾಡಬೇಕು. ಇಡೀ ದೇಹವೇ ನೋವಿದ್ದಾಗ ಎರಡು ಕೈಯಿಂದಲೂ ಮಾಡಬೇಕು.
10. ಕುಬೇರ ಮುದ್ರೆ
ಇದು ಸಂಪತ್ತಿನ ದೇವತೆಯ ಮುದ್ರೆಯಾಗಿದೆ. ಕುಬೇರ ಅಷ್ಟದಿಕ್ ಪಾಲಕರಲ್ಲಿ ಒಬ್ಬ ಉತ್ತರದಿಕ್ಕಿನ ಪಾಲಕ ಶಿವನ ಧನ ಕೋಶದ ಪಾಲಕ. ಈ ಮುದ್ರೆಯಿಂದ ಕುಬೇರನ ಕೃಪೆ ಉಂಟಾಗಿದೆ ಧನಕನಕವಸ್ತುಗಳು ಸಂಪತ್ತೂ ಸಹ ವೃದ್ಧಿಯಾಗುತ್ತದೆ. ಮಾನಸಿಕ ಧೈರ್ಯ ಮತ್ತು ಧೈರ್ಯ ಹೆಚ್ಚಾಗುತ್ತದೆ.
ಮಾಡುವ ವಿಧಾನ – ಹೆಬ್ಬೆರಳಿನ ತುದಿಯೊಂದಿಗೆ ತೋರು ಬೆರಳಿನ ತುದಿ ಮತ್ತು ಮಧ್ಯದ ಬೆರಳಿನ ತುದಿಯನ್ನು ಸೇರಿಸಿ ಹಿಡಿಯಿರಿ. ಉಂಗುರ ಮತ್ತು ಕಿರುಬೆರಳುಗಳನ್ನು ಮಡಚಿ ಹಸ್ತದ ಮಧ್ಯಭಾಗದಲ್ಲಿಡಬೇಕು.
ಪರಿಣಾಮ – ಉಂಗುರಬೆರಳು ಮತ್ತು ಕಿರಿಬೆರಳು ಹಸ್ತದ ಮಧ್ಯಭಾಗದಲ್ಲಿರುವ ಮಣಿಪುರ ಚಕ್ರ, ಎಡ್ರಿನಲ್ ಗ್ರಂಥಿ, ಮೂತ್ರಾಶಯ ಮತ್ತು ಸಣ್ಣ ಕರುಳಿನ ಒತ್ತಡ ಬಂಧುಗಳನ್ನು ಒತ್ತುವುದರಿಂದ ಪಚನಕ್ರಿಯೆ ಸರಿಹೊಂದುತ್ತದೆ. ಹೆಬ್ಬೆರಳಿನೊಂದಿಗೆ ವಾಯು ಮತ್ತು ಆಕಾಶದ ತತ್ವದ ತೋರು ಬೆರಳು ಮತ್ತು ಮಧ್ಯದ ಬೆರಳು ಸ್ಪರ್ಶಿಸುವುದರಿಂದ ರಕ್ತದೊತ್ತಡ ನಿಯಮಿತವಾಗಿರುತ್ತದೆ.
ಉಪಯೋಗ –
★ ಸಣ್ಣ ಅಥವಾ ದೊಡ್ಡ ಯೋಜನೆಗಳು ಫಲಿಸಿ, ಧನ ಸಂಪಾದನೆ ಹೆಚ್ಚುತ್ತದೆ. ವಿಚಾರಗಳು ಸ್ವ ಇಚ್ಚೆಯಾದರೂ ಸಮಾಜದ ಒಳ್ಳೆಯದನ್ನು ಗಮನಿಸಿ ಈ ಮುದ್ರೆ ಫಲ ನೀಡುತ್ತದೆ.
★ ಸಣ್ಣ ವಿಷಯಗಳಾದ ಕಾರು ಪಾರ್ಕಿಂಗ್‌ಗೆ ಸ್ಥಳ ಹುಡುಕುವಾಗ ಬಟ್ಟೆ ಖರೀದಿಸುವಾಗ ಮಾಹಿತಿ ಸಂಗ್ರಹಿಸುವಾಗ ಈ ಮುದ್ದೆ ಯೋಗ್ಯವಾಗಿ ಸಹಾಯ ಮಾಡುತ್ತದೆ.
★ ದೊಡ್ಡ ವಿಷಯಗಳಾದ ನಿವೇಶನ ಅಥವಾ ಮನೆ ಖರೀದಿಸುವಾಗ, ಬಾಳಸಂಗಾತಿಯನ್ನು ಆಯ್ಕೆ ಮಾಡುವಾಗ ಮುದ್ರೆಯಿಂದ ನೀವು ಸಹಾಯ ಪಡೆಯಬಹುದು.
★ ಯಾವುದೇ ವಿಷಯ ಅಥವಾ ಧೈಯ ಅಥವಾ ಯೋಚನೆ – ಯೋಜನೆಗಳನ್ನು ಮೂರು ” ಹೇಳಬೇಕು. ಹೇಳುವಾಗ ಬೆರಳುಗಳನ್ನು ಒತ್ತಬೇಕು. ಸಾಧ್ಯವಾದಷ್ಟು ಸಮಯ ಈ ಮುದ್ರೆಯನ್ನು ಮಾಡಿ ಒಂದು ಸಲವಾಗದಿದ್ದಾಗ ಕೆಲವು ದಿನಗಳ ಕಾಲ ಮಡಿ
★ ಕಥದೋಷ ನಿವಾರಣೆ, ರಕ್ತ ಒತ್ತಡ ಸರಿಯಾಗುತ್ತದೆ.
ಈ ಮುದ್ರೆಯನ್ನು 15 ನಿಮಿಷ ಪ್ರತಿದಿನವೂ ಮಾಡಿದಾಗ ರಕ್ತದೊತ್ತಡ ಅಂಕಿತದಲ್ಲಿ ಬರುವ ಕಾರಣ ಹೆಚ್ಚಳವಾಗುವ ಜೊಲ್ಲು, ನಿದ್ರೆ, ಮೂತ್ರ, ಬೆವರುಗಳು ಶಮನ ಗೊಳ್ಳುತ್ತದೆ.
11. ಹೃದಯ ಮುದ್ರೆ
ಇದನ್ನು ಅಪಾನ ವಾಯು ಮುದ್ರೆಯೆಂದೂ ಸಹ ಕರೆಯುತ್ತಾರೆ. ಆಪಾನ ಮತ್ತು ವಾಯು ಮುದ್ರೆಗಳನ್ನು ಏಕಕಾಲಕ್ಕೆ ಮಾಡಬೇಕು. ಇದು ಬಹಳ ಪ್ರಮುಖ ಮುದ್ರೆ, ಹೃದಯಾಘಾತ ಸಮಯದಲ್ಲಿ ಸಂಜೀವಿನಿಯಂತೆ ನೋವು ಶಮನಗೊಳಿಸಿ ಪ್ರಾಣಾಪಾಯ ಪೀಡೆಯನ್ನು ತೊಲಗಿಸುತ್ತದೆ. ತಕ್ಷಣ ಪರಿಣಾಮ ಬೀರುವ ಮುದ್ರೆಗಳಲ್ಲಿ ಒಂದಾಗಿದೆ.
ಮಾಡುವ ವಿಧಾನ – ತೋರುಬೆರಳನ್ನು ಹೆಬ್ಬೆಟ್ಟಿನ ಮೂಲದಲ್ಲಿ ತಾಗಿಸಿ ಹೆಬ್ಬೆಟ್ಟಿನಿಂದ ಅವರ ಮೇಲೆ ಒತ್ತಡ ಕೊಡಬೇಕು. ಮತ್ತೆ ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ತುದಿಗೆ ಹೆಬ್ಬೆರಳಿನ ತುದಿಯನ್ನು ಮುಟ್ಟಿಸಬೇಕು.
ಪರಿಣಾಮ – ವಾಯು ಮುದ್ರೆ ಮತ್ತು ಅಪಾನ ಮುದ್ರೆಯ ಲಾಭ ಏಕಕಾಲಕ್ಕೆ ಉಂಟಾಗುತ್ತದೆ. ವಾಯು ಪ್ರಕೋಪದ ಮೇಲೆ ಹಿಡಿತ ಮತ್ತು ರಕ್ತ ಸಂಚಾರ, ಪಚನಗಳ ಮೇಲೆ ಪ್ರಭಾವ ಈ ಮುದ್ರೆಯಿಂದ ಸಾಧ್ಯವಾಗುತ್ತದೆ.
ಉಪಯೋಗ
★ ಹೃದಯಾಘಾತದ ಸಮಯದಲ್ಲಿ ಈ ಮುದ್ರೆ ಮಾಡಿದ ಕ್ಷಣದಲ್ಲೇ ಪರಿಣಾಮ ಬೀರುತ್ತದೆ. ಹೃದಯಾಘಾತದ ವೇಧನೆ ಕಡಿಮೆಮಾಡುತ್ತದೆ.
★ ಹೃದಯದ ಬಡಿತದಲ್ಲಿರುವ ನಿಯಮವನ್ನು ಸರಿಪಡಿಸುತ್ತದೆ.
★ ವಾಯುಪ್ರಕೋಪದಿಂದ ಹೃದಯದಲ್ಲಿ ಸಣ್ಣ ನೋವು ಬರುವಾಗಲೂ ಈ ಮುದ್ರೆಯಿಂದ ಆಕಳಿಗೆ ಪ್ರಾರಂಭವಾಗಿ ನೊವು ಶಮನಗೊಳ್ಳುತ್ತದೆ.
★ ಮೈಗೈನ್ ತಲೆನೋವು ಈ ಮುದ್ರೆಯಿಂದ ಶಮನಗೊಳ್ಳುತ್ತದೆ.
★ ಹೊಟ್ಟೆಯಲ್ಲಿ ವಾತಪ್ರಕೋಪ ತಲೆದೋರಿದಾಗ ಈ ಮುದ್ರೆಯನ್ನು ಬೆಳಿಗ್ಗೆ ಮತ್ತು ಸಂಜೆ ಕಾಲದಲ್ಲಿ 15 ನಿಮಿಷ ಮಾಡಿದಾಗ ಹೃದಯಾಘಾತ ಉಂಟಾಗುವುದಿಲ್ಲ
★ ಕೈಕಾಲುಗಳಲ್ಲಿ ಬೆವರು ಬರುತ್ತಿದ್ದರೆ, ಮೂತ್ರ ವಿಸರ್ಜನೆ ಕಷ್ಟವಾದಾಗ – ಈ ಮುದ್ದೆ ಉಪಯೋಗಕ್ಕೆ ಬರುತ್ತದೆ. ಹಲ್ಲಿನ ನೋವು ಶಮನಗೊಳ್ಳುತ್ತದೆ. ಹೊಟ್ಟೆಯ ಸ್ನಾಯುಗಳು ಸಮರ್ಥ ವಾಗಿ ಕೆಲಸ ಮಾಡುತ್ತದೆ. ಮೂಲವ್ಯಾಧಿ ಗುಣವಾಗುತ್ತದೆ.
★ ಶ್ವಾಸನಾಳದ ಹತ್ತಿರದ ಸ್ನಾಯುಗಳನ್ನು ಸಡಿಲಗೊಳಿಸಿ, ಶ್ವಾಸೋಚ್ಛಾಸ ಸುಲಭಗೊಳಿಸುತ್ತದೆ. ಉಬ್ಬಿಸಿದ ಉಸಿರಾಟ ಸರಿ ಮಾಡುತ್ತದೆ.
★ ವೆರುಕೋಸ್ ನರದ ಸಮಸ್ಯೆಯನ್ನು ಸರಿಪಡಿಸುತ್ತದೆ. ಅಪಾನ ವಾಯುಮುದ್ರೆ ಮತ್ತು ಹೃದಯಮುದ್ರೆ ಎರಡನ್ನೂ 30 ನಿಮಿಷದಂತೆ ದಿನದಲ್ಲಿ ಮೂರು ಬಾರಿ ಮಾಡಬೇಕು.
★ ಜಾಗರಣೆ (ನಿದ್ದೆ ಕೆಟ್ಟಾಗ) ತುಂಬಾ ಚಿಂತೆ ಆದಾಗ, ಅತಿಶ್ರಮದ ಕೆಲಸ ಮಾಡಿದಾಗ, ಅಗತ್ಯವಾಗಿ ಈ ಮುದ್ರೆ ಮಾಡಬೇಕು. ಇದರಿಂದ ಆಯಾಸದಿಂದ ನಿವೃತ್ತಿ ಹೊಂದುತ್ತೀರಿ.
★ ಬಹು ಮಹಡಿ ಹತ್ತುವಾಗ, ಗುಡ್ಡ ಅಥವಾ ಬೆಟ್ಟ ಹತ್ತುವಾಗ ಈ ಮುದ್ರೆ ಎರಡು ನಿಮಿಷ ಮಾಡಿ ಮತ್ತೆ ಏರಿದರೆ ಎದೆ ಉಸಿರು ಬಾರದು.
★ ಜಗಳ, ಮಾನಸಿಕ ಒತ್ತಡ ಉಂಟಾದಾಗ ಈ ಮುದ್ರೆ ಮಾಡಿದರೆ ಹೃದಯಾಘಾತವಾಗದು. ವಾತರೋಗ ವಾಯು ಮುದ್ರೆಯಿಂದ ಗುಣವಾಗದಿದ್ದರೆ ಈ ಮುದ್ರೆ ಮಾಡಬಹುದು.