ಮನೆ ಸಾಹಿತ್ಯ ನಿಮ್ಮ ತತ್ವಗಳಿಗೆ ಬದ್ಧರಾಗಿ

ನಿಮ್ಮ ತತ್ವಗಳಿಗೆ ಬದ್ಧರಾಗಿ

0

     1931 ರಲ್ಲಿ ಬ್ರಿಟೇನಿನಲ್ಲಿ ಜರುಗಿದ ದುಂಡು ಮೇಜಿನ ಸಭೆಯಲ್ಲಿ ಭಾರತದ ಪಿತಾಮಹನಾದ ಮಹಾತ್ಮಾ ಗಾಂಧಿಯವರನ್ನು ಆಹ್ವಾನಿಸಲಾಯಿತು. ಮಹಾತ್ಮರು ತಮ್ಮ ತುಂಡು ಬಟ್ಟೆಯನ್ನು ಧರಿಸಿ ಅಲ್ಲಿಗೆ ಹೋದರು. ಅವರನ್ನು ನೋಡಿ ಆಘಾತರಾದ ಸದಸ್ಯರು ಇದೆಂತಹ ಬಟ್ಟೆ ಎಂದು ಬಹಳ ಗಲಾಟೆ ಮಾಡಿದರು. ಅವರನ್ನು ಟೀಕಿಸಿದರು, ಲೇವಡಿ ಮಾಡಿದರು.ಅಪಮಾನಿಸಿದರು. ಆದರೆ ಇದು ಗಾಂಧೀಜಿಯವರ ಆತ್ಮ ವಿಶ್ವಾಸ ಹಾಗೂ ಶಾಂತ ಚಿತ್ತತೆಯನ್ನು ಎಳ್ಳಷ್ಟೂ ಕಡಿಮೆ ಮಾಡಲಿಲ್ಲ.ಅನಂತರ ನಡೆದ ಪತ್ರಿಕಾ ಸಭೆಯಲ್ಲಿ ಈ ಕುರಿತು ಅವರನ್ನು ಪ್ರಶ್ನೆಗಳ ಸುರಿಮಳೆಯಲ್ಲಿ ಮುಳುಗಿಸಬೇಕೆಂದು ಬ್ರಿಟಿಷ್ ವರದಿಗಾರರು ನಿರ್ಧರಿಸಿದರು.ಆದರೆ ಅವರಿಗೆ ದೊರಕಿದ ಉತ್ತರವು  ಅವರು ಬಹಳ ಕಾಲ ಮೆರೆಯದಂತೆ ಮಾಡಿತು. ಅಷ್ಟೇ ಅಲ್ಲ,ಅದು ಮರುದಿನ ಪತಿಯೊಂದು ಹೆಸರಾದ ದಿನಪತ್ರಿಕೆಯಲ್ಲಿ ಮೊದಲ ಪುಟದ ವಿಷಯವಾಯಿತು.

Join Our Whatsapp Group

 ಪ್ರಶ್ನೆಗಳು

1. ತಮ್ಮ ಬಟ್ಟೆಯ ಬಗ್ಗೆ ಪ್ರಶ್ನಿಸಿದಾಗ ಗಾಂಧೀಜಿಯವರು ಏನೆಂದು ಉತ್ತರಿಸಿದರು?

2. ಈ ಕಥೆಯ ನೀತಿಯೇನು?

 ಉತ್ತರಗಳು

1. ನಿಮ್ಮದು ನಾಲ್ಕು ಹೆಚ್ಚು,ನನ್ನದು ನಾಲ್ಕು ಕಡಿಮೆ.

2. ಕೇವಲ ಸಾಮಾಜಿಕ ಒತ್ತಡದಿಂದಾಗಿ ತಮ್ಮ ತತ್ವಗಳನ್ನು ಬಿಡದ ಗಾಂಧೀಜಿಯವರ ದೃಢತೆ ಬಹಳ ಪ್ರಶಂಸನಾರ್ಹ.ತಾವು ಹೇಗೆ ಬಟ್ಟೆ ಧರಿಸಬೇಕೆ ನ್ನುವುದನ್ನು ಇತರರು ತೀರ್ಮಾನಿಸಬಾರದೆಂಬುದನ್ನು ಅವರ ಮಾತು ಎತ್ತಿ ತೋರಿಸುತ್ತದೆ. ಅವರು ಹೇಳಿದ ಉತ್ತರದ ರೀತಿಯು ಅವರ ಹಾಸ್ಯ ಪ್ರಜ್ಞೆ ಮತ್ತು ವಿವೇಚನೆಯನ್ನು ತೋರಿಸುತ್ತದೆ.