ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ಟಿಪ್ಪು ನೆನಪಿನ ಸಲಾಂ ಆರತಿಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಲಾಂ ಆರತಿ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಮಂಗಳವಾರ ಉಡುಪಿಯ ಬೈಂದೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ದೇವಸ್ಥಾನಗಳನ್ನು ಕೊಳ್ಳೆ ಹೊಡೆದ, ಹಿಂದೂಗಳ ನರಮೇಧ ನಡೆಸಿದ ವ್ಯಕ್ತಿಯ ಹೆಸರಿನಲ್ಲಿ ಪೂಜೆ ನಡೆಯೋದು ಅಕ್ಷಮ್ಯವಾಗಿದೆ” ಎಂದರು.
“ಆತನ ಹೆಸರಿನಲ್ಲಿ ಪೂಜೆ ನಡೆದರೆ ಕೇವಲ ಭಕ್ತರಿಗೆ ಮಾತ್ರವಲ್ಲ ಸ್ವತಃ ದೇವಿಗೇ ನೋವಾಗಬಹುದು. ಯಾರದ್ದೋ ಕಾಲದಲ್ಲಿ ಆದ ತಪ್ಪನ್ನು ಮುಂದುವರಿಸೋದು ಸರಿಯಲ್ಲ. ಆಗ ಆಗಿ ಹೋಗಿದೆ, ಇನ್ನು ಆಗೋದು ಬೇಡ. ಇನ್ನೂ ಹೀಗೇಯೇ ಆದರೆ ನಾಳೆ ಅಲ್ಲಾನಾ ಹೆಸರಿನಲ್ಲೂ ಪೂಜೆ ಬರಬಹುದು. ಸಲಾಂ ಅಲ್ಲಾ ಎಲ್ಲವೂ ಅವರಲ್ಲೇ ಇರಲಿ. ನಮ್ಮ ಕಡೆಗೆ ಬರೋದೇ ಬೇಡ” ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.
ದೇವಸ್ಥಾನಗಳಲ್ಲಿ ವ್ಯಾಪಾರ ನಿಷೇಧದ ಬಗ್ಗೆ ಮಾತನಾಡಿದ ಭಟ್, “ಈ ಅಭಿಯಾನ ಹಿಂದೆಯೇ ಆಗ ಬೇಕಿತ್ತು. ಹಿಂದೂ ಜಾಗೃತನಾಗಿದ್ದಾನೆ. 2002ರಲ್ಲಿ ಆಗಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರಿಗೆ ಮುಂದಿನ ಅಪಾಯದ ಬಗ್ಗೆ ಮನವರಿಕೆ ಆಗಿ ಧಾರ್ಮಿಕ ದತ್ತಿಯಲ್ಲೇ ಈ ನಿಯಮ ಮಾಡಿದ್ದಾರೆ. ಶುರು ಮಾಡಿದ್ದು ಅವರು ಮುಗಿಸೋದು ನಾವು. ಹಿಂದೂಗಳದ್ದು ಕೇವಲ ಆಕ್ಷನ್‌ಗೆ ರಿಯಾಕ್ಷನ್ ಅಷ್ಟೇ ಇದು. ಇನ್ನೂ ಮುಂದುವರಿಯಬೇಕೆಂದು” ಎಂದರು.
“ಆದರೆ ಕೊಲ್ಲೂರು ದೇವಳದ ಆಡಳಿತ ಮಂಡಳಿ ಮಾತ್ರ ನಮ್ಮಲ್ಲಿ ಸಲಾಂ ಪೂಜೆ ಅನ್ನುವ ಪೂಜೆಯೇ ಇಲ್ಲ ಅಂತಾ ಸ್ಪಷ್ಟಪಡಿಸಿದೆ.