ಮನೆ ರಾಜ್ಯ ರಾಜ್ಯದಲ್ಲಿ 60 ಮಂದಿಗೆ ಕೊರೊನಾ ಪಾಸಿಟಿವ್

ರಾಜ್ಯದಲ್ಲಿ 60 ಮಂದಿಗೆ ಕೊರೊನಾ ಪಾಸಿಟಿವ್

0

ಬೆಂಗಳೂರು (Bengaluru)-ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 60  ಹೊಸ ಕೊರೊನಾ (Corona) ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,46,934ಕ್ಕೆ ಏರಿಕೆಯಾಗಿದೆ.

63 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 39,05,159 ಆಗಿದೆ. ರಾಜ್ಯದಲ್ಲಿ ಸದ್ಯ 1,676 ಸಕ್ರಿಯ ಪ್ರಕರಣಗಳಿದೆ. ಸೋಂಕಿನ ಪ್ರಕರಣ ಶೇ. 0.72 ರಷ್ಟಿದ್ದು, ಮರಣ ಪ್ರಮಾಣ ಶೂನ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ 57 ಹೊಸ ಪ್ರಕರಣ ಪತ್ತೆಯಾಗಿದ್ದು, 52 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 1,606 ಸಕ್ರಿಯ ಪ್ರಕರಣಗಳಿದ್ದು, ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. ಚಿತ್ರದುರ್ಗ , ಧಾರವಾಡ, ವಿಜಯಪುರದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದ್ದು, ಉಳಿದ ಎಲ್ಲಾ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

ಹಿಂದಿನ ಲೇಖನಪ್ರಧಾನಿ ಮೋದಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ
ಮುಂದಿನ ಲೇಖನಉಗ್ರನನ್ನು ಬಂಧಿಸಿದ ಪಂಜಾಬ್‌ ಪೊಲೀಸರು