ಮನೆ ರಾಜ್ಯ ವಸತಿ ಶಾಲೆಯ 3ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ..!

ವಸತಿ ಶಾಲೆಯ 3ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ..!

0

ಚಿತ್ರದುರ್ಗ : 3ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಭರಮಸಾಗರದ ಡಿವಿಎಸ್ ಖಾಸಗಿ ವಸತಿ ಶಾಲೆಯಲ್ಲಿ ನಡೆದಿದೆ. ಚಿತ್ರದುರ್ಗದ ಕರಿಯಣ್ಣನಹಳ್ಳಿ ಮೂಲದ ಎಸ್‌ಎಲ್‌ಎಲ್‌ಸಿ ವಿದ್ಯಾರ್ಥಿ 16 ವರ್ಷದ ಕೊಟ್ರೇಶ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಹಣ್ಣು ಹಂಚುವ ವಿಚಾರದಲ್ಲಿ ಸಹಪಾಠಿ ಜತೆ ಗಲಾಟೆಯಾಗಿದ್ದು, ಇದರಿಂದ ಮನನೊಂದು ಕೊಟ್ರೇಶ್ 3ನೇ ಶಾಲೆಯ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ನಿನ್ನೆ(ಫೆಬ್ರವರಿ 16) ಶಿವರಾತ್ರಿ ಹಿನ್ನೆಲೆಯಲ್ಲಿ ಪೋಷಕರು, ಕೊಟ್ರೇಶ್​​ಗೆ ಬಟ್ಟೆ, ಹಣ್ಣು ಕೊಡಿಸಿದ್ದು, ಆದರೆ, ಹಣ್ಣು ಹಂಚುವ ವಿಚಾರದಲ್ಲಿ ಕೊಟ್ರೇಶ್ ಹಾಗೂ ಸಹಪಾಠಿ ಜತೆ ಗಲಾಟೆಯಾಗಿದೆ.

ಈ ಗಲಾಟೆಯಲ್ಲಿ ಸಹಪಾಠಿ, ಕೊಟ್ರೇಶ್​​ಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಗಲಾಟೆ ಬಗ್ಗೆ ಮಾಹಿತಿ ನೀಡಿಲ್ಲ. ಶಾಲಾ ಸಿಬ್ಬಂದಿ, ಆಡಳಿತ ಮಂಡಳಿ ನಿರ್ಲಕ್ಷ್ಯ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಬಗ್ಗೆ ಡಿವಿಎಸ್ ವಸತಿ ಶಾಲೆ ಮುಖ್ಯಸ್ಥ ಪ್ರದೀಪ್ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿಗಳು ಸಣ್ಣಪುಟ್ಟ ಜಗಳ ಮಾಡಿಕೊಂಡಿದ್ದಾರೆ. ವಾರ್ಡನ್ ಸರಿಪಡಿಸಿ ಶಿವರಾತ್ರಿ ಪ್ರಯುಕ್ತ ಸಿನೆಮಾ ತೋರಿಸಿದ್ದಾರೆ. ಬೆಳಗ್ಗೆ ಎದ್ದು ಕೊಟ್ರೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯಾವ ರೀತಿ ಮಾನಸಿಕವಾಗಿ ತೆಗದುಕೊಂಡಿದ್ದನೋ ಗೊತ್ತಿಲ್ಲ. ಪೋಷಕರು ಭರಮಸಾಗರ ಠಾಣೆಗೆ ದೂರು ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿಯಿಂದ ತನಿಖೆಗೆ ಸಹಕಾರ ನೀಡಲಾಗುತ್ತೆ. ಕೊಟ್ರೇಶ್ ಪೋಷಕರ ದೂರಿನಂತೆ ಹಲ್ಲೆ ಏನು ನಡೆದಿಲ್ಲ ಎಂದಿದ್ದಾರೆ.