ಮನೆ ರಾಜ್ಯ ವಿದ್ಯಾರ್ಥಿಗಳು ಹೊಸ ಆಲೋಚನೆಗಳನ್ನು ವಿವಿಯ ಕೆರಿಯರ್ ಹಬ್ ಜೊತೆ ಹಂಚಿಕೊಳ್ಳಿ: ಪ್ರೊ. ಜಿ.ಹೇಮಂತ್ ಕುಮಾರ್

ವಿದ್ಯಾರ್ಥಿಗಳು ಹೊಸ ಆಲೋಚನೆಗಳನ್ನು ವಿವಿಯ ಕೆರಿಯರ್ ಹಬ್ ಜೊತೆ ಹಂಚಿಕೊಳ್ಳಿ: ಪ್ರೊ. ಜಿ.ಹೇಮಂತ್ ಕುಮಾರ್

0

ಮೈಸೂರು(Mysuru):  ವಿದ್ಯಾರ್ಥಿಗಳು ಅಂಕದ ಜೊತೆ ವಿದ್ಯಾರ್ಥಿಗಳು ಹೊಸ ಹೊಸ ಆಲೋಚನೆ ಮಾಡಬೇಕು. ತಮ್ಮ ಹೊಸ ಆಲೋಚನೆ, ಐಡಿಯಾಗಳನ್ನು ವಿವಿಯ ಕೆರಿಯರ್ ಹಬ್‌ ನೊಂದಿಗೆ ಹಂಚಿಕೊಳ್ಳಿ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ವಿಜ್ಞಾನ ಹಬ್ಬ ಯುರೇಕಾ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ವಿವಿಯ ಕೆರಿಯರ್ ಹಬ್ ಇದೆ. ನಿಮ್ಮ ಆಲೋಚನೆ ಏನೇ ಇದ್ದರೂ ಅಲ್ಲಿ ಹಂಚಿಕೊಳ್ಳಬಹುದು. ಪ್ರಕೃತಿಯಲ್ಲಿ ಇರುವುದನ್ನು ವಿಭಿನ್ನ ಆಲೋಚನೆ ಸಂಶೋಧನೆ ಮಾಡಿ. ನಿಮ್ಮ ಆಲೋಚನೆಯನ್ನು ಹೇಗೆ ಸಂಶೋಧನೆ ಮಾಡಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಪ್ರತಿ ವರ್ಷ ಯುವರಾಜ ಕಾಲೇಜಿನಿಂದ ಸಾವಿರ ಜನ ಹೊರಗೆ ಹೋಗುತ್ತಾರೆ. ಅವರೆಲ್ಲ ಉತ್ತಮ ಸಂಶೋಧಕರು ಹಾಗೂ ವಿಜ್ಞಾನಿಗಳು ಆಗಬೇಕು. ಸದ್ಯ ಎನ್‌ ಇಪಿ ಶುರುವಾಗಿದೆ. ಅಂತರ ಶಿಸ್ತೀಯ ಕೋರ್ಸ್ ಗಳು ಇರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಾರ್ಯಕ್ರಮ ಸಂಯೋಜಕರಾದ ಡಾ.ರೂಬಿ ಸೆಲೆಸ್ಟಿನಾ ಮಾತನಾಡಿ, 2013ರಲ್ಲಿ ಮೊದಲ ಬಾರಿಗೆ ವಿಜ್ಞಾನ ಹಬ್ಬವಾದ ಯುರೇಕಾ ಶುರುವಾಯಿತು. ವಿದ್ಯಾರ್ಥಿಗಳೇ ಕಾರ್ಯಕ್ರಮ ಹುಟ್ಟಲು ಕಾರಣ. ಇದು ಅವರದೇ ಆಲೋಚನೆ. ಸಣ್ಣ ಮಟ್ಟದಲ್ಲಿ ಶುರುವಾದ ಈ ಅಂತರ್ ಕಾಲೇಜು ಕಾರ್ಯಕ್ರಮ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ವಿಜ್ಞಾನದ ನಾನಾ ಒಳಹುಗಳನ್ನು ಅರ್ಥ ಮಾಡಿಕೊಳ್ಳಲು ಯುರೇಕಾ ಸಹಕಾರಿಯಾಗಿದೆ. ವಿಜ್ಞಾನ-ಕಲೆ-ಸಾಂಸ್ಕೃತಿಕತೆಯ ಹೂರಣವೇ ಯುರೇಕಾ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಎನ್.ಯಶೋಧ,  ಸೇರಿದಂತೆ ಇತರರು ಇದ್ದರು.

ಹಿಂದಿನ ಲೇಖನಶಿವಸೇನೆ ಸಂಸದ ಸಂಜಯ್ ರಾವತ್ ಗೆ ಇಡಿ ಸಮನ್ಸ್
ಮುಂದಿನ ಲೇಖನನಾಲೆಗೆ ಮಗುಚಿದ ಎತ್ತಿನಗಾಡಿ: ರೈತ ಸಾವು