ನವದೆಹಲಿ: ರೈಲು ಸೇವೆಗಳನ್ನು ಮತ್ತಷ್ಟು ಸರಳೀಕರಿಸಲು ಭಾರತೀಯ ರೈಲ್ವೆ ಮುಂದಾಗಿದ್ದು, ಇದಕ್ಕಾಗಿ “ಸೂಪರ್ ಆ್ಯಪ್’ ಹೆಸರಿನ ಆ್ಯಪ್ ನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ.
ರೈಲು ಟಿಕೆಟ್ ಬುಕಿಂಗ್, ಪ್ಲಾಟ್ ಫಾರಂ ಟಿಕೆಟ್, ರೈಲು ಎಲ್ಲಿದೆ ಎಂಬ ಮಾಹಿತಿ, ಊಟದ ಸೇವೆ ಸೇರಿ ಹಲವು ಸೇವೆಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಲಾಗಿದೆ. ಪ್ರಸ್ತುತ ವಿವಿಧ ಸೇವೆಗಳಿಗಾಗಿ ಪ್ರಯಾಣಿಕರು ವಿವಿಧ ಆ್ಯಪ್ಗ್ಳನ್ನು ಬಳಕೆ ಮಾಡುತ್ತಿದ್ದರು. ಈ ಸಮಸ್ಯೆ ಬಗೆಹರಿಸಲು ರೈಲ್ವೆ ಮುಂದಾಗಿದ್ದು, ಐಆರ್ಸಿಟಿಸಿಯೊಂದಿಗೆ ಸೇರಿ ಹೊಸ ವೇದಿಕೆ ಸೃಷ್ಟಿಸಿದೆ.
ಐಆರ್ಸಿಟಿಸಿಯ ರೈಲ್ ಕನೆಕ್ಟ್ ಆ್ಯಪ್ ಪ್ರಸ್ತುತ ಕಾಯ್ದಿರಿಸಿದ ಟಿಕೆಟ್ಗಳನ್ನು ಬುಕ್ ಮಾಡಲು ಬಳಕೆ ಮಾಡಲಾಗುತ್ತಿದೆ. ಇದೀಗ ಸೂಪರ್ ಆ್ಯಪ್ನಲ್ಲೂ ಈ ಸೇವೆ ಲಭ್ಯವಾಗುವುದರಿಂದ ರೈಲ್ವೆಗೆ ಹೆಚ್ಚುವರಿ ಆದಾಯ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.