ಮನೆ ಯೋಗಾಸನ ಸುಪ್ತ ವಜ್ರಾಸನ

ಸುಪ್ತ ವಜ್ರಾಸನ

0
{"uid":"eedd8d23-6309-429c-9f24-f63b762c15ff","fte_image_ids":[],"remix_data":["add_photo_directory"],"remix_entry_point":"add_photo_directory","origin":"unknown","total_effects_time":0,"total_effects_actions":0,"total_draw_time":0,"total_draw_actions":0,"layers_used":0,"brushes_used":0,"total_editor_time":18,"total_editor_actions":{"image":1},"photos_added":1,"effects_applied":0,"effects_tried":0,"longitude":-1,"latitude":-1,"is_sticker":false,"edited_since_last_sticker_save":true,"containsFTESticker":false,"tools_used":{"crop":1}}

 ’ಸುಪ್ತ’ವೆಂದರೆ ನೆಲದ ಮೇಲೊರಗುವುದು. ‘ವಜ್ರ’ವೆಂದರೆ ದೇವೇಂದ್ರನ ವಜ್ರಾಯುಧ.ಈ ಆಸನವು ಕಷ್ಟ ಸಾಧ್ಯವಾದುದರಿಂದ ಇದನ್ನು ಸಾಧಿಸಲು ಹೆಚ್ಚಿನ ಅಭ್ಯಾಸ ಬೇಕು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ‘ಪದ್ಮಾಸನ’ದ ಭಂಗಿಯಲ್ಲಿ ನೆಲದಮೇಲೆ ಕುತ್ತಿಕೊಳ್ಳಬೇಕು. ಬಳಿಕ ‘ಬದ್ಧಪದ್ಮಾಸನ’ಕ್ಕೆ ಹತ್ತಬೇಕು.

2. ಉಸಿರನ್ನು ಹೊರಕ್ಕೆ ಬಿಟ್ಟು ಮಂಡಿಗಳನ್ನು ತೊಡೆಗಳನ್ನೂ ನೆಲದಿಂದ ಮೇಲತ್ತಿ ನೆದವಮೇಲೆ ಬಗ್ಗಿ ಒರಗಬೇಕು ಬಳಿಕ ಎರಡು ಸಲ ಉಸಿರಾಟ ನಡೆಸಬೇಕು.

3. ಆಮೇಲೆ ಕತ್ತನ್ನು ಹಿಂದಕ್ಕೆ ಹಿಗ್ಗಿಸಿ,ನಡುನೆತ್ತಿಯನ್ನು ನೆಲದ ಮೇಲೂರಿ,ಎದೆಯನ್ನೂ ಮುಂಡವನ್ನೂ ಬಿಲ್ಲಿನಂತೆ ಬಗ್ಗಿಸಿಡಬೇಕು.

  1. ಅನಂತರ ಕಾಲ್ಬೆರಳುಗಳ ಮೇಲೆ ಕೈ ಬಿಗಿತವನ್ನು ಸಡಿಲಿ ಸದೆಯೇ ಉಸಿರನ್ನು ಹೊರದೂಡುತ್ತ.ತೊಡೆ ಮಂಡಿಗಳನ್ನು ಮತ್ತೆ ನೆಲದ ಮೇಲೊರಗಿಸಿರಬೇಕು. ಆಗ ನಡುತಲೆ, ಮೊಣಕೈಗಳು, ಬೆನ್ನು ಹಿಂಗಡೆ ಅಡ್ಡವಾಗಿ ತೊಡರಿಸಿದ ಕೈಗಳು ಮತ್ತು ಪೃಷ್ಠಗಳು ಮಾತ್ರ ನೆಲವನ್ನಂ ಟಿರಬೇಕು.ಈ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನೆಲೆಸಿದ್ದು. ಉಸಿರನ್ನು ಹೊರಕ್ಕೆ ಬಿಟ್ಟು,ಕಾಲ್ವೆರಳುಗಳ ಮೇಲಿನ ಬಿಗಿತವನ್ನು ಸಡಲಿಸಿ, ಬೆನ್ನ ಹಿಂದೆ ತೊಡರಿಸಿದ್ದ ಕೈಗಳ ಬಂಧವನ್ನು ಬಿಡಿಸಿ, ಮತ್ತೆ ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು .
  2. ಇದಾದಮೇಲೆ ಕಾಲುಗಳನ್ನು ನೀಳವಾಗಿ ಚಾಚಿ ವಿಶ್ರಾಂತಿ ಪಡೆಯಬೇಕು.
  3. ಈಗ ಕಾಲುಗಳ ಸ್ಥಾನಗಳನ್ನು ಬದಲಿಸಿ, ಇದೇ ಆಸನದ ಭಂಗಿಯನ್ನು ಮರಳಿ ಕೈಗೊಳ್ಳಬೇಕು.

ಪರಿಣಾಮಗಳು
ಈ ಆಸನದ ಭಂಗಿಯಿಂದ ಕಟಿಭಾಗವು ಪೂರ ಹಿಗ್ಗುವುದರಿಂದ,ಎದೆಯ ಭಾಗವೂ ಹಿಗ್ಗಿವುದು. ಕತ್ತುನ್ನು ಇದರಲ್ಲಿ ಎಳೆಯಬೇಕಾಗಿರುವುದರಿಂದ ಗೋಮಾಳದ ಭಾಗಗಳಿಗೆ ಉತ್ತಮ ವ್ಯಾಯಾಮವು ಲಭಿಸುತ್ತದೆ. ಅಲ್ಲದೆ ‘ವಸ್ತಿಕುಹರ’ಕ್ಕೆ ಸಂಬಂಧಿಸಿದ ಕೀಲುಗಳು ಇದರಿಂದ ಹೆಚ್ಚು.ಸ್ಥಿತಿ ಸ್ಥಾಪಕತ್ವವನ್ನು ಗಳಿಸುತ್ತದೆ. ಈ ಆಸನದಲ್ಲಿ ಪರಿಣತಿ ದೊರಕಿತೆಂದರೆ ‘ವಾತ್ಸ್ಯಾಸನ’ ವೆಂಬುದು ಮಕ್ಕಳಾಟದಂತೆ ಸರಾಗವಾಗಿ ವಶವಾಗುತ್ತದೆ.

ಹಿಂದಿನ ಲೇಖನಕೆಮ್ಮು
ಮುಂದಿನ ಲೇಖನಹಾಸ್ಯ