ಸೂರ್ಯ ನಮಸ್ಕಾರ ತಿಳಿದವರು ಅಥವಾ ಜ್ಞಾನಿಗಳು “ಆರೋಗ್ಯಂ ಭಾಸ್ಕರಾದಿಚ್ಛೇತ್” ಎಂದಿದ್ದು. ಅಂದರೆ ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯಭಾಗ್ಯ ಲಭಿಸುತ್ತದೆ ಎಂದು ಅರ್ಥ.
ಜಗತ್ತಿನ ಮತ್ತು ಮಾನವನ ನಿತ್ಯದ ದೈನಂದಿನ ಬದುಕಿನ ಚಟುವಟಿಕೆ ಪ್ರಾರಂಭವಾಗುವುದೆ ಸೂರ್ಯೋದಯದಿಂದ ಮತ್ತೊಂದು ವೈಜ್ಞಾನಿಕ ಕೂಡ ಸ್ಥಾಪಿತವಾದ ಸತ್ಯವೆಂದರೆ ಈ ಭೂಮಿಯ ಮೇಲೆ ನಮ್ಮ ಅಂದರೆ ಸಮಸ್ತ ಮನುಕುಲದ ಅಷ್ಟೇ ಏಕೆ ಸಮಸ್ತ ಚರಾಚರ ಜೀವ ಸಂಕುಲದ ಅಸ್ತಿತ್ವಕ್ಕೆ ಮೂಲಾಧಾರವೇ ಸೂರ್ಯನಾಗಿದ್ದಾನೆ. ಸೂರ್ಯನಿಲ್ಲದ ನಾವು ಇಲ್ಲವೇ ಇಲ್ಲ, ಆದ್ದರಿಂದ ಈ ಭಾಸ್ಕರನಿಗೆ ನಮಸ್ಕರಿಸುತ್ತ ಸೂರ್ಯದೇವನ ಮಂತ್ರಗಳನ್ನು ಪಠಿಸುತ್ತಾ, ಸೂರ್ಯ ನಮಸ್ಕಾರ ಮಾಡುವುದು ನಮ್ಮ ಕರ್ತವ್ಯವಾಗಿದೆ. ಇದನ್ನು ಗುರು ಮುಖೇನ ಅಥವಾ ಗುರುವಿನ ಮಾರ್ಗದರ್ಶನದಲ್ಲಿ ಮಾಡಿದರೆ ಇನ್ನೂ ಹೆಚ್ಚು ಫಲಪ್ರದ ಎಂದು ಹೇಳುತ್ತಾರೆ.
ಸೂರ್ಯ ನಮಸ್ಕಾರ ತುಂಬಾ ಮಹತ್ವದ ಮತ್ತು 9 ವಿಧದ ಆಸನಗಳನ್ನು ಒಳಗೊಂಡು ಒಂದು ಸಂಯುಕ್ತ ಯೋಗಾಸನವಾಗಿದೆ. ಜೊತೆಗೆ ವ್ಯವಸ್ಥಿತ ಉಸಿರಾಟವು, ಅರ್ಥ ಪ್ರಾಣಾಯಾಮವು ಸೇರಿದಂತೆ ಮತ್ತು ಇದರ ಹೆಸರೇ ಸೂಚಿಸುವಂತೆ ಇದರಲ್ಲಿ ಸೂರ್ಯಭಾಗವನನ್ನು ಭಕ್ತಿ ಮತ್ತು ಕೃತಜ್ಞ ಪೂರ್ವಕವಾಗಿ ಸೂರ್ಯೋಪಾಸನೆ ಮಾಡುವ (ಪೂಜಿಸುವ ಅಥವಾ ಆರಾಧಿಸುವ) ಕಾರ್ಯವು ಸೇರಿದೆ. ಇನ್ನೊಂದನ್ನೇ “ಸಂಕ್ಷಿಪ್ತ ಯೋಗಭ್ಯಾಸ” ಎಂತಲೂ ಪರಿಗಣಿಸಬಹುದಾಗಿದೆ.
ಒಟ್ಟು 12 ಹಂತಗಳ (ಸ್ಟೆಪ್ಸ್) ಪರಿಪೂರ್ಣವಾದ ವ್ಯಾಯಾಮವೇದಾಗಿದೆ. ಇದಲ್ಲದೆ ಒಂದೇ ರೀತಿಯಲ್ಲಿ ಹೇಳಬೇಕೆಂದರೆ ಸೂರ್ಯನಮಸ್ಕಾರವು ಒಂದು ವ್ರತವಾಗಿದೆ.
ಮಾಡುವ ವಿಧಾನ :
1. ಪಾದಗಳನ್ನು ಪರಸ್ಪರ ಜೋಡಿಸಿ ಸಮತಲ ಸ್ಥಿತಿಯಲ್ಲಿ ತಡಾಸನದಲ್ಲಿ ಪೂರ್ವಭಿಮುಖವಾಗಿ ಸೂರ್ಯ ದೇವರಿಗೆ ವಂದಿಸುತ್ತಾ ಕೈಜೋಡಿಸುವ ಎದೆಗೆ ಅನಿಸಿಕೊಂಡು ನೇರವಾಗಿ ನಿಲ್ಲುವುದು
2. ಉಸಿರನ್ನು ಎಳೆದುಕೊಳ್ಳುತ್ತಾ (ಪೂರಕ ಮಾಡುತ್ತ) ಸಾಧ್ಯವಾದಷ್ಟು ಹಿಂದಕ್ಕೆ ಬಾಗುವುದು
3.ಉಸಿರು ಬಿಡುತ್ತಾ (ರೇಚಕ ಮಾಡುತ್ತಾ) ಮುಂದಕ್ಕೆ ಬಾಗುತ್ತ ಕೈಗಳಿಂದ ಪಾದವನ್ನು ಸ್ಪರ್ಶಿಸುತ್ತಾ ಮುಖದ ಮಂಡಿಗಳಿಗೆ ತಾಕಿಸುವುದು
4. ಉಸಿರೆಳೆದ್ದು ಕೊಳ್ಳುತ್ತಾ (ಪೂರಕ ಮಾಡುತ್ತಾ) ಎರಡು ಕೈಗಳನ್ನು ನೆಲಕ್ಕೆ ಉರುತ್ತಾ ಬಲಗಾಲನ್ನು ಸ್ಥಿರವಾಗಿಡಿಸಿ ಎಡಗಾಲನ್ನು ನೇರವಾಗಿ ಹಿಂದಕ್ಕೆ ಚಾಚುತ್ತ ಗೋಣಿ ಮತ್ತು ಎದೆ ಮೇಲೆತ್ತಿ ನೋಡುವುದು.
5. ರೇಚಕ ಮತ್ತು ಕೆಳಗೆ ಬಾಗುತ್ತ ಬಲಭಾಗವನ್ನು ಕೂಡ ಹಿಂದಕ್ಕೆ ನೇರವಾಗಿ ಚಾಚಿ ಸೊಂಟವನ್ನು ಎತ್ತರಿಸಿ ನೇರ ಮಾಡುವುದು
6. ಪೂರಕ ಮಾಡುತ್ತಾ ಮಂಡಿ ಮಡಿಸಿ ಹಿಮ್ಮಡಿ ಮೇಲೆ ಕುಳಿತು ಮುಂದಕ್ಕೆ ಬಾಗಿ ರೇಚಕ ಮಾಡುತ್ತಾ ಮುಖ ಮತ್ತು ಕೈಗಳನ್ನು ನೆಲಕ್ಕೆ ತಾಕಿಸುವುದು
7. ಪೂರಕ ಮಾಡುತ್ತಾ ಮೇಲೆದ್ದು ಕಾಲುಗಳನ್ನು ನೇರವಾಗಿ ಹಿಂದಕ್ಕೆ ಚಾಚಿ ನಂತರ ಮಂಡಿಗಳನ್ನು ಹಾಗೆ ಕೈಗಳನ್ನು ನೆಲಕ್ಕೆ ಉರುತ್ತಾ ಹೊಟ್ಟೆ ಎದೆ ಮತ್ತು ಮುಖಗಳನ್ನು ನೆಲಕ್ಕೆ ತಾಗಿಸುತ್ತಾ, ರೇಚಕ ಮಾಡುವುದು
8. ಪೂರಕ ಮತ್ತು ಕೈಕಾಲುಗಳನ್ನು ನೇರಗೊಳಿಸುತ್ತ ಎದೆ ಕುತ್ತಿಗೆ ಮತ್ತು ತಲೆಗಳನ್ನು ಮೇಲಕ್ಕೆ ಎತ್ತುವುದು
9. ರೇಚಕ ಮಾಡುತ್ತಾ ತಲೆಕೆಳಗೆ ಮಾಡಿ ಬಾಗುತ್ತ ಕಾಲುಗಳನ್ನು ನೇರವಾಗಿರುವಂತೆಯೇ ಸೊಂಟವನ್ನು ಮೇಲೆತ್ತುವುದು
10. ಪೂರಕ ಮಾಡುತ್ತಾ ಮಂಡಿ ಉರಿ ಹಿಮ್ಮಡಿ ಮೇಲೆ ಕುಳಿತು ಮುಂದೆ ಬಾಗಿರೇಚಕ ಮಾಡುತ್ತಾ ಮುಖ ಕೈಗಳನ್ನು ನೆಲಕ್ಕೆ ತಾಕಿಸುವುದು
11. ಕೈಗಳನ್ನು ನೆಲಕ್ಕೆ ಉರಿ ಎಡಗಾಲಿ ಸ್ಥಿರವಾಗಿರಿಸಿ ಬಲಗಾಲು ನೇರ ಹಿಂದಕ್ಕೆ ಚಾಚಿ, ಪೂರಕಮಾಡಿ ಘೋನು ಮತ್ತು ಎದೆಯನ್ನು ಮೇಲೆತ್ತುವುದು
12.ಎದೆ ಎದ್ದುನಿಂತು ರೇಚಕ ಮಾಡುತ್ತಾ ಮುಂದಕ್ಕೆ ಬಾಗಿ ಕಾಲುಗಳನ್ನು ಹಿಡಿದುಕೊಂಡು ಮುಖವನ್ನು ಮಂಡಿಗಳಿಗೆ ತಾಕಿಸುವುದು.
ಇದನ್ನು ವಿವರಿಸಿದಂತೆ ಜೊತೆಗೆ ಉಸಿರಾಟ ವಿಧಾನದೊಂದಿಗೆ ಸರಿಯಾದ ಕ್ರಮದಲ್ಲಿ ಮಾಡಬೇಕು. ನೆನಪಿರಲಿ ಅದು ಅತ್ಯಂತ ಮಹತ್ವದ್ದು ಈ 12 ಹಂತಗಳು ಮುಗಿಯುತ್ತಿದ್ದಂತೆ ಉಸಿರು ಒಳಗೆ ತೆಗೆದುಕೊಳ್ಳುತ್ತಾ (ಪೂರಕ ಮಾಡುತ್ತ) ಎದ್ದು ನಿಲ್ಲಬೇಕು.
ಈ ಮೇಲಿನ 12 ಹಂತಗಳು ಸೇರಿ ಒಂದು ಸುತ್ತು. ಅಂದರೆ ಒಂದು ಸಲ “ಸೂರ್ಯನಮಸ್ಕಾರ” ಮುಕ್ತವಾಯಿತು ಎಂದರ್ಥ. ಪ್ರಾರಂಭದಲ್ಲಿ ಇಂತಹ ಐದು ಸುತ್ತುಗಳಿಂದ ಮೊದಲು ಮಾಡಿ ನಂತರ ಶಕ್ತ್ಯಾನುಸಾರ ಹೆಚ್ಚಿಸುತ್ತ ದಿನಾಲು ಕನಿಷ್ಠ 12 ಸುತ್ತುಗಳನ್ನು ಆದರೂ ಮಾಡಬೇಕು ಮತ್ತು ನಿಮ್ಮ ಶಕ್ತ್ಯಾನುಸಾರ ಹೆಚ್ಚಿಸುತ್ತಾ ಹೋಗಬಹುದು. ಹಾಗೂ ಅದನ್ನು ನಿಧಾನವಾಗಿ ಹೆಚ್ಚಿಸುತ್ತ 15 ,20, 25, 50 ಮತ್ತು ಇನ್ನು ಹೆಚ್ಚು ಸುತ್ತುಗಳವರೆಗೆ ಸಾಧಿಸುತ್ತಾ ಹೋಗಬಹುದು. ಆದರೆ ಅವಸರ ಅಥವಾ ಗಡಿಬಿಡಿ ಬೇಡ ನಿಧಾನವಾಗಿರಲಿ.
ಮಹತ್ವದ ವಿಶೇಷ ಸೂಚನೆ: ಇದು ಅತ್ಯಂತ ಮುಖ್ಯವಾದದ್ದು ಈ ಆಸನ ಮಾಡಿದ ತಕ್ಷಣ ಅಷ್ಟೇ ಸಮಯದ ಶವಾಸನ ಕಡ್ಡಾಯವಾಗಿದೆ. ಶಾಸನ ಶವಾಸನವನ್ನು ಕುರಿತು ಬೇರೆ ಅಧ್ಯಯನದಲ್ಲಿ ವಿವರವಾಗಿ ತಿಳಿಸಲಾಗಿದೆ.
ಸೂರ್ಯ ನಮಸ್ಕಾರ ನ ಪ್ರಯೋಜನಗಳು :
ದೈಹಿಕ ನಿಲುವು (ಒಟ್ಟು ವ್ಯಕ್ತಿತ್ತ- total personality) ಮತ್ತು ಚಲನ ವ್ಯವಸ್ಥೆ ಸುಗಮವಾಗುವುದು
ಹೃದಯ ಕ್ರಿಯೆ ಮತ್ತು ರಕ್ತ ಪರಿಚಲನೆ ಸುಸೂತ್ರ ವಾಗುವುದು
ಜೀರ್ಣಕ್ರಿಯೆ ಆರೋಗ್ಯಕರವಾಗುವುದು
ಶ್ವಾಸಕೋಶಗಳು ಬಲಿಷ್ಠ ವಾಗುವುವು
ವಿಸರ್ಜನಾ ವ್ಯವಸ್ಥೆ ಕ್ರಮಬದ್ಧವಾಗುವುದು
ನರವ್ಯೂಹ ಮತ್ತು ಮೆದುಳು ಚಿರಕ ಆಗುವುದು
ನಿರ್ನಾಳ ಗ್ರಂಥಿಗಳು ಚೋಧಕಗಳನ್ನು ಸರಿಯಾಗಿ ಸ್ರವಿಸುವವು
ಜನನಾಂಗಗಳ ಆರೋಗ್ಯಕರ ಬೆಳವಣಿಗೆಯನ್ನು ವೀರ್ಯ ಮತ್ತು ಅಂಡಾಣುಗಳು ಸಕ್ರಮವಾಗಿ ಉತ್ಪತ್ತಿಯಾಗುವುದು
ಜ್ಞಾನೇಂದ್ರಿಯ ಚುರುಕುಗೊಳ್ಳುವುದು ಮತ್ತು ಕ್ರಿಯಾಶೀಲವಾಗುವುದು
ಶರೀರಕ್ಕೆ ಲಘುತ್ವ ಮತ್ತು ಮೃದುತ್ವ ಉಂಟಾಗುತ್ತದೆ
ಮೇರುದಂಡದ ಬೆನ್ನುಹುರಿಯ ಸಮಸ್ತ ವಿಕಾರಗಳು ದೂರವಾಗುವುದು
ಚರ್ಮರೋಗ ವಾಸಿಯಾಗುತ್ತದೆ
ಹಂತ ಹಂತವಾಗಿ ಮಧುಮೇಹ ನಿವಾರಣೆ ಯಾಗುತ್ತಾ ಬರುತ್ತದೆ
ಥೈರಾಯಿಡ್ ಸಮಸ್ಯೆಗೆ ಪರಿಹಾರ
ಮಾನಸಿಕ ಜಡತ್ವ ದೂರವಾಗಿ ನೆಮ್ಮದಿ ಶಾಂತಿ ದೊರೆಯುತ್ತದೆ
ದೈಹಿಕ ಹಾಗೂ ಮಾನಸಿಕ ಬಲ ಓಜಿಸು ತೇಜಸ್ಸು ವೃದ್ಧಿಯಾಗುತ್ತದೆ