ಮನೆ ದೇಶ ಸದನದಲ್ಲಿ ಗದ್ದಲ, ಕೋಲಾಹಲ: ವಿಪಕ್ಷಗಳ 19 ಸದಸ್ಯರ ಅಮಾನತು

ಸದನದಲ್ಲಿ ಗದ್ದಲ, ಕೋಲಾಹಲ: ವಿಪಕ್ಷಗಳ 19 ಸದಸ್ಯರ ಅಮಾನತು

0

ನವದೆಹಲಿ (New Delhi): ಪದೇ ಪದೇ ಸದನದಲ್ಲಿ ಗದ್ದಲ, ಕೋಲಾಹಲ ವೆಬ್ಬಿಸಿದ್ದರಿಂದ ರಾಜ್ಯಸಭೆ ಸದನವನ್ನು ನಾಳೆಗೆ ಮುಂದೂಡಲಾಗಿದೆ. ಅಲ್ಲದೆ ಸದನದಲ್ಲಿನ ದುರ್ನಡತೆಗಾಗಿ ವಿಪಕ್ಷಗಳ 19 ಸದಸ್ಯರನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ವಿಪಕ್ಷ ಸಂಸದರು ಸದನವನ್ನು ನಡೆಯಲು ಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಸದನವನ್ನು ಒಂದು ಗಂಟೆ ಮುಂದೂಡಲಾಯಿತು. ಆದರೆ ಪದೇ ಪದೇ ಸದನದಲ್ಲಿ ಗದ್ದಲ, ಕೋಲಾಹಲ ವೆಬ್ಬಿಸಿದ್ದರಿಂದ ರಾಜ್ಯಸಭೆ ಸದನವನ್ನು ನಾಳೆಗೆ ಮುಂದೂಡಲಾಗಿದೆ.

ಸ್ಪೀಕರ್ ಓಂ ಬಿರ್ಲಾ ಅವರ ಎಚ್ಚರಿಕೆ ಬಳಿಕವೂ ಸದನದೊಳಗೆ ಭಿತ್ತಿಪತ್ರಗಳನ್ನು ಹಿಡಿದಿದ್ದಕ್ಕಾಗಿ ಲೋಕಸಭೆಯಲ್ಲಿ ನಾಲ್ವರು ಕಾಂಗ್ರೆಸ್ ಸಂಸದರು ಸಂಪೂರ್ಣ ಅಧಿವೇಶನದವರೆಗೆ ಅಮಾನತ್ತಾದ ಮರುದಿನವೇ ಇಂದಿನ ಬೆಳವಣಿಗೆಯಾಗಿದೆ.

19 ರಾಜ್ಯಸಭಾ ಸಂಸದರ ವಿರುದ್ಧದ ಕ್ರಮವು ಆಡಳಿತ ಸರ್ಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ಪ್ರಶ್ನಿಸುವ ದನಿಗಳನ್ನು ಮುಚ್ಚುವ ಪ್ರಯತ್ನ ಎಂದು ವಿಪಕ್ಷಗಳು ಹೇಳುತ್ತಿದ್ದು, ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕೋಪ ಇದರಿಂದ ಹೆಚ್ಚಾಗಿದೆ. ಈ ಸರ್ಕಾರವು ಪ್ರಜಾಪ್ರಭುತ್ವವನ್ನು ಅಮಾನತುಗೊಳಿಸಿದೆ ಎಂದು ತೃಣಮೂಲ ನಾಯಕ ಡೆರೆಕ್ ಒಬ್ರಿಯಾನ್ ತಿಳಿಸಿದರು.

ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯರು: ಸುಶ್ಮಿತಾ ದೇವ್, ತೃಣಮೂಲ ಕಾಂಗ್ರೆಸ್, ಮೌಸಮ್ ನೂರ್, ತೃಣಮೂಲ ಕಾಂಗ್ರೆಸ್, ಶಾಂತಾ ಛೆಟ್ರಿ, ತೃಣಮೂಲ ಕಾಂಗ್ರೆಸ್, ಡೋಲಾ ಸೇನ್, ತೃಣಮೂಲ ಕಾಂಗ್ರೆಸ್, ಸಂತಾನು ಸೇನ್, ತೃಣಮೂಲ ಕಾಂಗ್ರೆಸ್, ಅಭಿ ರಂಜನ್ ಬಿಸ್ವರ್, ತೃಣಮೂಲ ಕಾಂಗ್ರೆಸ್, ಎಂಡಿ ನಾದಿಮುಲ್ ಹಕ್, ತೃಣಮೂಲ ಕಾಂಗ್ರೆಸ್, ಎಂ.ಹಮಮದ್ ಅಬ್ದುಲ್ಲಾ, ಡಿಎಂಕೆ, ಬಿ.ಲಿಂಗಯ್ಯ ಯಾದವ್, ತೆಲಂಗಾಣ ರಾಷ್ಟ್ರ ಸಮಿತಿ (TRS), ಎ.ಎ.ರಹೀಮ್, ಸಿಪಿಐ(ಎಂ), ರವಿಹಂದರ ವಡ್ಡಿರಾಜು, ಟಿ.ಆರ್.ಎಸ್, ಎಸ್.ಕಲ್ಯಾಣಸುಂದರಂ, ಡಿಎಂಕೆ, ಆರ್.ಗಿರಂಜನ್, ಡಿಎಂಕೆ, ಎನ್ಆರ್ ಎಲಾಂಗೋ, ಡಿಎಂಕೆ, ವಿ.ಶಿವದಾಸನ್, ಸಿಪಿಐ(ಎಂ), ಎಂ.ಷಣ್ಮುಗಂ, ಡಿಎಂಕೆ, ದಾಮೋದರ ರಾವ್ ದಿವಕೊಂಡ, ಟಿಆರ್ಎಸ್, ಸಂತೋಷ್ ಕುಮಾರ್ ಪಿ, ಸಿಪಿಐ, ಕನಿಮೊಳಿ ಎನ್ವಿಎನ್ ಸೋಮು, ಡಿಎಂಕೆ.