ಮನೆ ಕ್ರೀಡೆ ಗಾಯದ ಸಮಸ್ಯೆಯಿಂದ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದ ಜಾವೆಲಿನ್‌ ತಾರೆ

ಗಾಯದ ಸಮಸ್ಯೆಯಿಂದ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದ ಜಾವೆಲಿನ್‌ ತಾರೆ

0

ನವದೆಹಲಿ (New Delhi): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಉಂಟಾದ ಗಾಯದಿಂದಾಗಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್(ಐಒಎ) ತಿಳಿಸಿದೆ.

ಒರೆಗಾನ್‌ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ ನಲ್ಲಿ 88.13 ಮೀಟರ್‌ ದೂರ ಎಸೆದು ಬೆಳ್ಳಿ ಪದಕ ಗೆದ್ದಿದ್ದ ನೀರಜ್, ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ತಮ್ಮ ಪ್ರದರ್ಶನದ ವೇಳೆ ಗಾಯಗೊಂಡಿದ್ದರಿಂದ ಕಾಮನ್‌ವೆಲ್ತ್ ಗೇಮ್ಸ್ ಗೆ ಅಲಭ್ಯರಾಗಲಿದ್ದಾರೆ.

ಯುಜೀನ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ ನಂತರ ಚೋಪ್ರಾ ಅವರು ಸೋಮವಾರ ಎಂಆರ್ ಐ ಸ್ಕ್ಯಾನ್ ಮಾಡಿಸಿಕೊಂಡಿದ್ದಾರೆ ಮತ್ತು ಅದರ ಆಧಾರದ ಮೇಲೆ ಅವರ ವೈದ್ಯಕೀಯ ತಂಡವು ಅವರಿಗೆ ಒಂದು ತಿಂಗಳ ವಿಶ್ರಾಂತಿಗೆ ಸಲಹೆ ನೀಡಿದೆ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.

ಟೀಂ ಇಂಡಿಯಾ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಫಿಟ್ನೆಸ್ ಕಾಳಜಿಯಿಂದಾಗಿ ಬರ್ಮಿಂಗ್ ಹ್ಯಾಮ್ 2022 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲು ಯುಎಸ್ ನಿಂದ ನನಗೆ ಕರೆ ಬಂದಿತ್ತು ಎಂದಿದ್ದಾರೆ.

ಕಳೆದ ವರ್ಷದ ಟೋಕಿಯೊ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್, ಹಾಲಿ ಒಲಿಂಪಿಕ್ ಚಾಂಪಿಯನ್ ಕೂಡ ಆಗಿದ್ದಾರೆ. ಒರೆಗಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ ನೀರಜ್, ಫೈನಲ್‌ನಲ್ಲಿ ನಾಲ್ಕನೇ ಪ್ರಯತ್ನದ ಬಳಿಕ ತಮ್ಮ ತೊಡೆಯಲ್ಲಿ ಕಂಡು ಬಂದ ಸ್ವಲ್ಪ ಅಸ್ವಸ್ಥತೆ ಬಗ್ಗೆ ಮಾಹಿತಿ ನೀಡಿದ್ದರು.

ಹಿಂದಿನ ಲೇಖನಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆ: ಮಗಳು-ಅಳಿಯನನ್ನು ಕೊಂದ ತಂದೆ
ಮುಂದಿನ ಲೇಖನಸದನದಲ್ಲಿ ಗದ್ದಲ, ಕೋಲಾಹಲ: ವಿಪಕ್ಷಗಳ 19 ಸದಸ್ಯರ ಅಮಾನತು