ಮನೆ ಅಪರಾಧ ಅಕ್ರಮ ಸಂಬಂಧದ ಶಂಕೆ : ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

ಅಕ್ರಮ ಸಂಬಂಧದ ಶಂಕೆ : ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

0

ಕೋಲಾರ: ಅಕ್ರಮ ಸಂಬಂಧದ ಶಂಕೆಯಿಂದ ಪತಿಯೊಬ್ಬನು ತನ್ನ ಸಹಚರರೊಂದಿಗೆ ಸೇರಿ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಪ್ರಶಾಂತನಗರದಲ್ಲಿ ನಡೆದಿದೆ.

ಹತ್ಯೆಗೀಡಾದ ವ್ಯಕ್ತಿ ಅಮೀನ್ (30), ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದವನು ಎನ್ನಲಾಗಿದೆ. ಅಮೀನ್, ಆರೋಪಿ ಇರ್ಫಾನ್ ಎಂಬಾತನ ಪತ್ನಿ ಹುಸ್ನಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಶಂಕೆಯ ಮೇರೆಗೆ ಈ ಕ್ರೂರ ಕೃತ್ಯ ನಡೆದಿದೆ. ಪತ್ನಿಯ ನಡೆಗೆ ಶಂಕೆ ಹೊಂದಿದ ಇರ್ಫಾನ್, ಈ ಸಂಬಂಧವನ್ನು ರಾಜಿ ಮೂಲಕ ಬಗೆಹರಿಸಲು ಹುಸ್ನಾಳ ಅಕ್ಕ ಸಹಕರಿಸಿದ್ದಳು. ಆದರೆ, ಈ ರಾಜಿ ಪ್ರಕ್ರಿಯೆ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಗೆ ತಿರುಗಿತ್ತು.

ಈ ವೇಳೆ, ಇರ್ಫಾನ್ ತನ್ನ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಬಂದು ಅಮೀನನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ. ಘಟನೆಯ ಮಾಹಿತಿ ಪಡೆದ ಗಲ್ ಪೇಟೆ ಪೊಲೀಸ್ ಠಾಣಾ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಪ್ರಮುಖ ಆರೋಪಿ ಇರ್ಫಾನ್ ಮತ್ತು ಅವನ ಇಬ್ಬರು ಸಹಚರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.