ಮನೆ ಅಪರಾಧ ಲಾಡ್ಜ್‌ನಲ್ಲಿ ಯುವಕ ಅನುಮಾನಾಸ್ಪದ ಸಾವು ಪ್ರಕರಣ – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಿಡ್ನಿ ಫೇಲ್ಯೂರ್ ಪತ್ತೆ..!

ಲಾಡ್ಜ್‌ನಲ್ಲಿ ಯುವಕ ಅನುಮಾನಾಸ್ಪದ ಸಾವು ಪ್ರಕರಣ – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಿಡ್ನಿ ಫೇಲ್ಯೂರ್ ಪತ್ತೆ..!

0

ಬೆಂಗಳೂರು : ಮಡಿವಾಳ ಲಾಡ್ಜ್‌ನಲ್ಲಿ ಪುತ್ತೂರು ಯುವಕ ತಕ್ಷಿತ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದೆ. ವರದಿಯಲ್ಲಿ ತಕ್ಷಿತ್‌ಗೆ ಕಿಡ್ನಿ ಫೇಲ್ಯೂರ್ ಆಗಿರೋದು ಪತ್ತೆಯಾಗಿರುವುದು ವರದಿಯಾಗಿದೆ.

ಕಿಡ್ನಿ ವೈಫಲ್ಯ ಮಾತ್ರವಲ್ಲದೇ ಯುವಕ ತಕ್ಷಿತ್‌ಗೆ ಲಿವರ್ ಸಮಸ್ಯೆ ಹಾಗೂ ಅಸ್ತಮಾ ಖಾಯಿಲೆ ಇರೋದು ಕೂಡ ಪತ್ತೆಯಾಗಿದೆ. ಹೀಗಾಗಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತಕ್ಷಿತ್ ಹಾಗೂ ಯುವತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಬೇಕು ಎಂದು ಮಾತನಾಡಿಕೊಂಡಿದ್ದರು. 20 ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದು ಬೇರೆ ಬೇರೆ ಲಾಡ್ಜ್‌ನಲ್ಲಿ ವಾಸವಿದ್ದರು. 8 ದಿನ ಮಡಿವಾಳದ ಲಾಡ್ಜ್‌ಗೆ ಶಿಫ್ಟ್ ಆಗಿದ್ದರು.

ಪೊಲೀಸರು ಯುವಕನ ಜೊತೆಯಲ್ಲಿದ್ದ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮೃತ ತಕ್ಷಿತ್ ಡ್ರಿಂಕ್ಸ್ ಹಾಗೂ ಚೈನ್ ಸ್ಮೋಕರ್ ಆಗಿದ್ದ. ತಕ್ಷಿತ್ ತಂದೆ-ತಾಯಿಗೂ ಅಸ್ತಮಾ ಇರೋದು ಪತ್ತೆಯಾಗಿದೆ.

ಪೊಲೀಸರು ಕೆಲ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಘಟನೆ ಸಂಬಂಧ ಮಡಿವಾಳ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು.