ಬೆಳಗಾವಿ: ಬೆಳಗಾವಿಯ ಕಂಗ್ರಾಳಿ ಕೆ.ಎಚ್ ಗ್ರಾಮದಲ್ಲಿ ಮೂರು ವರ್ಷದ ಕಂದಮ್ಮನ ಅನುಮಾನಾಸ್ಪದ ಸಾವು ಆಗಿದ್ದಕ್ಕೆ ಮಲತಾಯಿ ಕೊಲೆ ಮಾಡಿರುವ ಎಂಬ ಆರೋಪ ಕೇಳಿ ಬಂದರೆ, ಇತ್ತ ಮಗು ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಮೃತಪಟ್ಟಿದೆ ಎಂಬುದಾಗಿ ಮಲತಾಯಿ ವಾದಿಸಿದ್ದಾರೆ.
ಮೂರು ವರ್ಷದ ಸಮೃದ್ಧಿ (3) ಎಂಬ ಬಾಲಕಿ ಸೋಮವಾರ ಮೃತಪಟ್ಟಿದ್ದು, ಸಾವಿನ ಸುತ್ತ ಅನುಮಾನ ಮೂಡಿಬಂದಿದೆ. ಬಾಲಕಿ ಸಮೃದ್ದಿ ಅಜ್ಜಿ ಹಾಗೂ ಚಿಕ್ಕಪ್ಪ ಅವರು ಸಪ್ನಾ ಮೇಲೆ ಕೊಲೆ ಆರೋಪ ಮಾಡಿದ್ದಾರೆ.
ಮಗು 2-3 ದಿನಗಳಿಂದ ವಾಂತಿ-ಭೇದಿ ಮಾಡುತ್ತಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮಗು ಸಾವನ್ನಪ್ಪಿರುವ ಬಗ್ಗೆ ಮಲತಾಯಿ ಸ್ವಪ್ನಾ ಹೇಳಿದ್ದಾರೆ.
ರಾಯಣ್ಣ ನಾವಿ ಅವರು ಜಾರ್ಖಂಡ್ ನಲ್ಲಿ ಸಿಆರ್ ಪಿಎಫ್ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳಗಾವಿಗೆ ಸೋಮವಾರ ಬಂದ ಬಳಿಕ ಅವರು ನೀಡುವ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.