ಮನೆ ರಾಜಕೀಯ ಸ್ವಾಮೀಜಿಗಳು ಧರ್ಮ ಪ್ರಚಾರ ಮಾಡಲಿ:  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಸ್ವಾಮೀಜಿಗಳು ಧರ್ಮ ಪ್ರಚಾರ ಮಾಡಲಿ:  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

0

ಬೆಂಗಳೂರು:  ಹಲಾಲ್ ಮಾಂಸ ಖರೀದಿಗೆ ನಿರ್ಬಂಧ ವಿಚಾರ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ  ಕುರಿತು  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸ್ವಾಮೀಜಿಗಳಾದವರು ಧರ್ಮ ಪ್ರಚಾರ ಮಾಡಬೇಕು, ಮುಸ್ಲೀಂ ಅಂಗಡಿಗೆ ಹೋಗಬೇಡಿ, ಹಲಾಲ್ ಮಾಂಸ ಖರೀದಿಸಬೇಡಿ ಎಂದು ಹೇಳಬೇಡಿ ಎಂದು ಸಲಹೆ ನೀಡಿದ್ದಾರೆ.

ರಾಮನಗರದಲ್ಲಿ ಇಂದು ಮಾತನಾಡಿದ ಅವರು, ನನ್ನ ಮನೆಗೂ ಅರ್ಚಕರು ಭೇಟಿ ನೀಡಿದ್ದರು. ಧರ್ಮದ ಪ್ರಚಾರ ನೀವು ಮಾಡಿ ಎಂದು ಹೇಳಿದ್ದೇನೆ  ಹಿಂದೂ ಧರ್ಮ ಸರ್ವೇ ಜನೋ ಸುಖಿನೋ ಭವಂತು ಅನ್ನುತ್ತೆ.  ಸ್ವಾಮೀಜಿಗಳು ಧರ್ಮ ಪ್ರಚಾರ ಮಾಡಬೇಕು ಅದನ್ನ ಮಾಡಲಿ. ಮುಸ್ಲೀಂ ಅಂಗಡಿಗೆ ಹೋಗಬೇಡಿ ಹಲಾಲ್ ಮಟಾನ್ ಖರೀದಿಸಬೇಡಿ ಎಂಧು ಹೇಳಬಾರದು ಎಂದರು.

ಹಲಾಲ್ ವಿಚಾರ ಸದನದಲ್ಲಿ ಚರ್ಚೆಗೆ ಬಂದಿಲ್ಲ.  ಬಂದರೇ ಚರ್ಚೆ ಮಾಡಬಹುದು. ಸಮಾಜದಲ್ಲಿ ಅಶಾಂತಿಗೆ ಎಡೆ ಮಾಡಿಕೊಟ್ಟ ವಿಚಾರಕ್ಕೆ ಸಲಹೆ ನೀಡುತ್ತೇನೆ. ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಸಲಹೆ ನೀಡುತ್ತೇನೆ ಎಂದು ಹೆಚ್.ಡಿಕೆ ಹೇಳಿದರು.

ಹಿಂದಿನ ಲೇಖನಮೋದಿ ಫೋಟೋ ಇಟ್ಟುಕೊಂಡ ಮುಸ್ಲಿಂ ವ್ಯಕ್ತಿಗೆ ಮನೆ ಖಾಲಿ ಮಾಡುವಂತೆ ಮಾಲೀಕನಿಂದ ಬೆದರಿಕೆ
ಮುಂದಿನ ಲೇಖನಮುತ್ತಪ್ಪ ರೈ ಬಯೋಪಿಕ್ ನಲ್ಲಿ ರಿಯಲ್ ಸ್ಟಾರ್ ಉಪ್ಪಿ