ಮನೆ ಯೋಗಾಸನ ಪಾದಾಂಗುಷ್ಠ ಧನುರಾಸನ

ಪಾದಾಂಗುಷ್ಠ ಧನುರಾಸನ

0

      ‘ ಪಾದ’ವೆಂದರೆ ಹೆಜ್ಜೆ ಇಲ್ಲವೇ ಅಡಿ. ‘ಅಂಗುಷ್ಠ’ವೆಂದರೆ ಕೈಹೆಬ್ಬೆರಳು. ‘ಧನು’ವೆಂದರೆ  ಬಿಲ್ಲು ಈ ಆಸನವು ‘ಧನುರಾಸನ’ಕ್ಕಿಂತ ಹೆಚ್ಚಿನ ಮಟ್ಟದ್ದು.ಇದರಲ್ಲಿ ದೇಹವು ಹೆಗಲುಗಳಿಂದ ಮಂಡಿಗಳವರೆಗೆ ಚೆನ್ನಾಗಿ ಬಗ್ಗಿಸಿ ಬಿಲ್ಲಿನಂತಿರುತ್ತದೆ. ಮತ್ತು ಮಂಡಿಗಳಿಂದ ಕಾಲ್ಬೆರಗಳುಗಳವರೆಗಿನ ಕಾಲುಗಳೂ ಮತ್ತು ನೀಳಮಾಡಿ ಹಿಗ್ಗಿಸಿ ತಲೆಯ ಮೇಲ್ಭಾಗಕ್ಕೆ ತಂದ ತೋಳುಗಳು, ಬಿಲ್ಲಿಗೆ  ಬಿಗಿಗಟ್ಟಿದ ಹಗ್ಗವನ್ನು ಜಗ್ಗಿ ತಿಳಿದಂತೆ ಕಾಣುತ್ತವೆ.

Join Our Whatsapp Group

    ಈ ಬಂಗಿಯನ್ನು ಮೂರು ವಿಧವಾದ ಚಲನಗೊಳಪಡಿಸುವುದರ ವಿವರಣೆ ಕೆಳಗಿನಂತಿದೆ :

 ಅಭ್ಯಾಸಕ್ರಮ :

1. ಮೊದಲು, ಮುಖವನ್ನು ಕೆಳಗಿ ಮಾಡಿ ಹೊಟ್ಟೆಯಮೇಲೆ ಉದ್ದಕ್ಕೂ ನೆಲದ ಮೇಲೆ ಮಲಗಬೇಕು.

2. ಬಳಿಕ, ಎದೆಭಾಗದ ಇಬ್ಬದಿಗಳಲ್ಲಿಯೂ ಅಂಗೈಗಳನ್ನು ನೆಲದ ಮೇಲೆ ಒತ್ತಿಟ್ಟು ನೇರ ಮಾಡಿ ‘ಭುಜಂಗಾಸನ’ಒಂದರಲ್ಲಿರುವಂತೆ ತಲೆಯ ಮುಂದಗಳನ್ನು ಮೇಲೆತ್ತಬೇಕು.ಆಮೇಲೆ ಮಂಡಿಗಳನ್ನು ಬಾಗಿಸಿ ಪಾದಗಳನ್ನು ಮೇಲೆತ್ತಬೇಕು.ಬಳಿಕ ಉಸಿರನ್ನು ಹೊರಬಿಟ್ಟು ಪಾದಗಳು ಮತ್ತು ತಲೆ ಒಂದರ ಬಳಿಯಲ್ಲೊಂದುಬರುವಂತೆ ಸರಿಸಿ, ಪಾದಗಳಿಂದ ತಲೆಯನ್ನು ಮುಟ್ಟಿಸಲು ಯತ್ನಿಸಬೇಕು.3.  ಆಮೇಲೆ,ಒಂದು ಪಾದವನ್ನು ಇನ್ನೊಂದರ ಮೇಲಿಟ್ಟು ಬಳಿಕ  ಇಡೀ ದೇಹದ ಬಾರವನ್ನು ಒಂದು ಪಕ್ಕದಲ್ಲಿಯ ಒಂದು ಕೈಯಮೇಲಿಟ್ಟು ಇನ್ನೊಂದು ಕೈಯನ್ನು ನೆಲದಿಂದ ಮೇಲೆತ್ತಬೇಕು.ಆ ಬಳಿಕ ಉಸಿರನ್ನು ವೇಗವಾಗಿಯೂ ಆಳವಾಗಿಯೂ ಹೊರಬಿಡುತ್ತ, ಎತ್ತಿದ ಕೈಯನ್ನು ಭುಜದಿಂದ ತಲೆಯಮೇಲೆ ಹಾಯಿಸಿ, ಹಿಗ್ಗಿಸಿ ಕಾಲ್ಬೆರಳುಗಳನ್ನು ಅದರಿಂದ ಬಿಗಿಯಾಗಿ  ಹಿಡಿದುಕೊಳ್ಳಬೇಕು. ಈಗ ಉಸಿರನ್ನು ಹೊರಬಿಡುತ್ತ ಇನ್ನೊಂದು ಕೈಯನ್ನೂ ನೆಲದಿಂದ ಮೇಲೆತ್ತಿ ಆದ್ದರಿಂದಲೂ  ಇನ್ನೊಂದು ಪಾದದ ಬೆರಳುಗಳನ್ನು ಹಿಡಿದುಕೊಳ್ಳಬೇಕು. ಹೀಗೆ ಬಲಗೈಯ ಬಿಗಿತವನ್ನು ಬಲದುಂಗಟದ ಮೇಲೆಯೂ,ಎಡಗೈಯ ಬಿಗಿತವನ್ನು ಎಡದುಂಗುಟದ ಮೇಲೆಯೂ ನೆಲೆಗೊಳಿಸಬೇಕು. ಆ ಬಳಿಕ ಕೆಲವು ಸಲ ಉಸಿರಾಟ  ನಡೆಸಬೇಕು.

4. ಮೇಲಿನ ಭಂಗಿಯಲ್ಲಿ ಪಾದಗಳನ್ನು ಬಿಗಿಯಾಗಿ ಹಿಡಿಯದಿದ್ದರೆ ಅವು ಹಿಡಿತದಿಂದ ಜಾರಿ ಬೀಳಬಹುದು.ಆ ಬಳಿಕ ಉಸಿರನ್ನು ಹೊರಕ್ಕೆಬಿಡುತ್ತ. ತೋಳುಗಳನ್ನು ಮತ್ತು ಕಾಲುಗಳನ್ನು ಆದಷ್ಟು ಎತ್ತರಕ್ಕೆ ತಲೆಯಮೇಲೆ, ಚಾಚಿ, ತೋಳುಗಳನ್ನು ಮೊಣಕೈಗಳ ಬಳಿ ನೇರ ಮಾಡಲು ಯತ್ನಿಸಬೇಕು. ಇದೇ ಈ ಭಂಗಿಯ ಮೊದಲನೆಯ ಚಲನೆ ಈ ಭಂಗಿಯಲ್ಲಿ ಸುಮಾರು 15 ಸೆಕೆಂಡುಗಳಕಾಲ ನೆಲೆಸಬೇಕು.

5. ಅನಂತರ, ಕಾಲ್ಬೆರಳುಗಳ ಮೇಲೆ ಬಿಗಿತವನ್ನು ಅಳವಡಿಸಿ, ಮೊಣಕೈಗಳನ್ನು ಬಾಗಿಸಿ, ಪಾದಗಳನ್ನು ಕೆಳಕ್ಕೆಳೆದು ಹಿಮ್ಮಡಿಗಳನ್ನು ಮೊದಲು ಹಣೆಯಮೇಲೆ, ಬಳಿಕ ಕಣ್ಣುಗಳ ಮೇಲೆ, ಕಡೆಗೆ ತುಟಿಗಳ ಮೇಲೆ ಒರಗಿಸಬೇಕು,ಇದೇ ಈ ಆಸನಭಂಗಿಯ ಎರಡನೆಯ ಚಲನೆ.ಈ ಭಂಗಿಯಲ್ಲಿಯೂ ಕೆಲವು ಸೆಕೆಂಡುಗಳ ಕಾಲ ನಿಲ್ಲಿಸಬೇಕು.

6. ಆ ಬಳಿಕ, ಬಿಗಿತವನ್ನು ಕಾಲ್ಬೆರಳುಗಳ ಮೇಲೆ ನೆಲೆಸಿಟ್ಟು ಕಾಲುಗಳನ್ನು ಕೆಳಗಿಳಿಸಿ ಭುಜದ ಪಕ್ಕಗಳನ್ನು ಮುಟ್ಟುವಂತಿರಬೇಕು.ಇದು ಈ ಭಂಗಿಯ ಮೂರನೆಯ ಚಲನೆ.ಈ ಭಂಗಿಯಲ್ಲಿಯೂ ಕೇವಲ ಸೆಕೆಂಡುಗಳ ಕಾಲ ನೆಲೆಸಬೇಕು.

7. ಇದಾದಮೇಲೆ ಉಸಿರನ್ನು ಹೊರಬಿಟ್ಟು ತೋಳುಗಳನ್ನು ಮತ್ತು ಕಾಲುಗಳನ್ನು ಹಿಗ್ಗಿಸಿ ಮೇಲೆತ್ತಬೇಕು. ಆಮೇಲೆ ಕಾಲುಗಳನ್ನು ಒಂದೊಂದಾಗಿ ಸಡಿಲಿಸಿ, ಕೈಗಳನ್ನು ಒಡನೆಯೇ ಕೆಳಗಿಳಿಸಿ, ನೆಲದ ಮೇಲೆ ಊರಿಡಬೇಕು. ಇಲ್ಲವಾದಲ್ಲಿ ಬೆನ್ನೆಲುಬು ಜೋಲಿಹೊಡೆಯುವುದರಿಂದ ಅಭ್ಯಾಸಿಯ ಮುಖವು  ನೆಲಕ್ಕೆ ಬಡಿಯುವ ಸಂಭವ ವುಂಟು ಆ ಬಳಿಕ ನೆಲದ ಮೇಲೊರಗಿ ವಿಶ್ರಮಿಸಿಕೊಳ್ಳಬೇಕು.

8. ಈ ಭಂಗಿಯಲ್ಲಿ ಕತ್ತು ಹೆಗಲುಗಳು ಎದೆ, ಬೆನ್ನೆಲುಬು ಇವು ಚೆನ್ನಾಗಿ ಹಿಗ್ಗುವುದರಿಂದಲೂ,ಕಿಬ್ಬೊಟ್ಟೆಯು ನೆಲದೊತ್ತಡಕ್ಕೆ ಚೆನ್ನಾಗಿ ಒಳಗಾಗುವುದರಿಂದಲೂ ಉಸಿರಾಟದ ವೇಗವು ಬರಲು ಹೆಚ್ಚಿ ಅದು ಶ್ರಮದಿಂದ ನಡೆಯುತ್ತದೆ.ಇದಕ್ಕೆ ಅವಕಾಶ ಕೊಡದೆ, ಈ ಮೂರು ವಿಧವಾದ ಚಲನೆಗಳ ಭಂಗಿಗಳಲ್ಲಿಯೂ ಉಸಿರಾಟವನ್ನು ಸಾಮಾನ್ಯ ರೀತಿಯಿಂದಿರಿಸಲು ಯತ್ನಿಸಬೇಕು.

 ಪರಿಣಾಮಗಳು  :

         ಈ ಆಸನದಲ್ಲಿ    ಪ್ರತಿಯೊಂದು ಸಂಧ್ಯಸ್ಥಿತಿಯೂ,ಅಂದರೆ ಕಶೇರು ಖಂಡಗವೆಲ್ಲವೂ ಹಿಗ್ಗುವಿಕೆಗೆ ಒಳಗಾಗುತ್ತದೆ. ಇದರಿಂದ ದೇಹದ ಅದ್ಯಂತವೆಲ್ಲವೂ  ಸೆಳೆಕ್ಕೊಳಕಾಗಿ ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಪಡೆಯುತ್ತದೆ. ದೇಹದ ಹೊರೆಯಲ್ಲವನ್ನುಹೊಕ್ಕುಳಿನ ಬಳಿಯ ಕಿಬ್ಬೊಟ್ಟೆಯೇ ವಹಿಸುವುದರಿಂದಲೂ, ಒತ್ತಡವೆಲ್ಲವೂ ಕಿಬ್ಬೊಟ್ಟೆಯಲ್ಲಿನ ಆಯೋರ್ಟಾ ಎಂಬ ಶುದ್ಧರಕ್ತನಾಳದಮೇಲೆಯೇ ಬೀಳುವುದರಿಂದಲೂ, ಕಿಬ್ಬೊಟ್ಟೆಯ ಅಂಗಗಳ ಸುತ್ತಲೂ ರಕ್ತಪರಿಚಲನೆಯು ಸರಿಯಾದ ರೀತಿಯಲ್ಲಿ ನಡೆಯುವುದು. ಈ ಪರಿಸ್ಥಿತಿಯು ಈ ಅಂಗಗಳನ್ನು ಆರೋಗ್ಯಸ್ಥಿತಿಯಲ್ಲಿಟ್ಟು ಜೀರ್ಣ ಶಕ್ತಿಯನ್ನು ಹೆಚ್ಚಿಸುವುದು. ಈ ಭಂಗಿಯಲ್ಲಿ ಹೆಗಲೆಲುಬುಗಳು ಚೆನ್ನಾಗಿ ಹಿಗ್ಗಿ.ಭುಜಗಳಲ್ಲಿಯ ಪೆಡುಸುತನವನ್ನು ನೀಗಿಸುತ್ತವೆ. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದುದೆಂದರೆ, ಅತ್ಯಂತ ಶ್ರಮಕೊಡುವ ಈ ಮೂರು ವಿಧವಾದ ಚಲನೆಗಳ ಅಭ್ಯಾಸದಲ್ಲಿ ಮನಸ್ಸು ಒಂದೇ ಸಮನಾಗಿ ಕಳವಳಕ್ಕೆಡೆಗೊಡದ ಶಾಂತಸ್ಥಿತಿಯಲ್ಲಿರುತ್ತದೆ. ಈ ಕಾರಣದಿಂದ ಈ ಆಸನವು ಅಭ್ಯಾಸಿಯ ದೇಹದಲ್ಲಿ ತಾರುಣ್ಯವನ್ನು ನೆಲೆಗೊಳಿಸಿ, ಮನಸ್ಸಿಗೆ ಲವಲವಿಕೆಯನ್ನುಂಟು ಮಾಡುತ್ತದೆ.