ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸುವ ಎಲ್ ಪಿಜಿ ಸಿಲಿಂಡರ್ ಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ.
ಪ್ರಸ್ತುತ 200 ರೂಪಾಯಿ ಇದ್ದ ಸಬ್ಸಿಡಿಯನ್ನು 300 ರೂ.ಗಳಿಗೆ ಹೆಚ್ಚಿಸಲಾಗಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಸಚಿವ ಅನುರಾಗ್ ಠಾಕೂರ್ ಈ ಮಾಹಿತಿ ನೀಡಿದರು.
14.2 ಕೆಜಿಯ ಸಿಲಿಂಡರ್ ಬೆಲೆ ಮಾರುಕಟ್ಟೆಯಲ್ಲಿ 903 ರೂ. ಇದೆ. ಸದ್ಯ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿಯೊಂದಿಗೆ 703 ರೂಪಾಯಿಗೆ ಲಭ್ಯವಾಗುತ್ತಿದೆ. ಈಗ 100 ರೂಪಾಯಿಗಳ ಸಬ್ಸಿಡಿ ಹೆಚ್ಚಿರುವುದರಿಂದ ಒಟ್ಟು 300 ರೂ. ಸಬ್ಸಿಡಿ ಸಿಗಲಿದ್ದು, ಗ್ಯಾಸ್ ಸಿಲಿಂಡರ್ 603 ರೂ.ಗೆ ಲಭ್ಯವಾಗಲಿದೆ.