ಮನೆ ಆರೋಗ್ಯ ಸಿಹಿ ಗೆಣಸು ಆರೋಗ್ಯಕ್ಕೆ ತುಂಬಾ ಲಾಭಕಾರಿ

ಸಿಹಿ ಗೆಣಸು ಆರೋಗ್ಯಕ್ಕೆ ತುಂಬಾ ಲಾಭಕಾರಿ

0

ಹೊಸ ವರ್ಷದ ಸಂದರ್ಭದಲ್ಲಿ ಬರುವ ಮೊಟ್ಟ ಮೊದಲನೆಯ ಹಬ್ಬವಾದ ಸಂಕ್ರಾಂತಿ ಸಮಯದಲ್ಲಿ ತಿನ್ನುವ ಸಿಹಿ ಗೆಣಸು ಆರೋಗ್ಯಕ್ಕೆ ತುಂಬಾ ಲಾಭಕಾರಿ. ವರ್ಷದ ಎಲ್ಲಾ ಸಮಯದಲ್ಲೂ ಮಾರು ಕಟ್ಟೆಯಲ್ಲಿ ಇದು ಸಿಗುತ್ತದೆ. ಆದರೆ ಈಗ ಸೀಸನ್.

ಜೀರ್ಣ ಶಕ್ತಿ ಹೆಚ್ಚಿಸುತ್ತದೆ

ಇದಕ್ಕೆ ಕಾರಣ ಸಿಹಿ ಗೆಣಸು ತನ್ನಲ್ಲಿ ನಾರಿನ ಅಂಶವನ್ನು ಅಪಾರವಾಗಿ ಹೊಂದಿರುವುದು. ಮಲಬದ್ಧತೆ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ ಮತ್ತು ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆ, ನಿಮ್ಮದಾಗುವ ಹಾಗೆ ಮಾಡುತ್ತದೆ. ಯಾವುದೇ ಸಂದರ್ಭದಲ್ಲಿ ಬೇಕಾದರೂ ನೀವು ಇದನ್ನು ತಿನ್ನಬಹುದು.

ಕ್ಯಾನ್ಸರ್ ತೊಂದರೆಯನ್ನು ಕಡಿಮೆ ಮಾಡುತ್ತದೆ

ಸಿಹಿ ಗೆಣಸು ತನ್ನಲ್ಲಿ ಕ್ಯಾರೋಟಿನಾಯ್ಡ್ ಪ್ರಮಾಣವನ್ನು ಅಧಿಕವಾಗಿ ಹೊಂದಿರುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಇದು ಕಡಿಮೆ ಮಾಡುತ್ತದೆ. ಇದರ ಜೊತೆಗೆ anthocyanin ಎಂಬ ಅಂಶ ಇದರಲ್ಲಿ ಹೆಚ್ಚಾಗಿರುವುದರಿಂದ ಮುಂಬರುವ ದಿನಗಳಲ್ಲಿ ಕ್ಯಾನ್ಸರ್ ಸಾಧ್ಯತೆಯನ್ನು ಇದು ತಡೆಗಟ್ಟುತ್ತದೆ.

ಮಾನಸಿಕ ಒತ್ತಡ ನಿರ್ವಹಣೆ ಮಾಡುತ್ತದೆ

ಸಿಹಿ ಆಲೂಗಡ್ಡೆ ತನ್ನಲ್ಲಿ ಮೆಗ್ನೀಷಿಯಂ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದೆ. ಇದು ದಿನದ ಸಾಧಾರಣ ಕಾರ್ಯ ಚಟುವಟಿಕೆಗೆ ದೇಹಕ್ಕೆ ಸಾಕಷ್ಟು ಅನುಕೂಲವಾಗುತ್ತದೆ. ಪ್ರಮುಖವಾಗಿ ಮೆಗ್ನೀಷಿ ಯಮ್ ಮಾನಸಿಕ ಒತ್ತಡ ಮತ್ತು ಆತಂಕವನ್ನು ಸಾಕಷ್ಟು ಕಡಿಮೆ ಮಾಡುತ್ತದೆ.

ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಸಿಗುತ್ತದೆ

• ಈಗ ಚಳಿಗಾಲ ಆಗಿರುವುದರಿಂದ ನಮ್ಮ ಚರ್ಮ ಶೀತದ ಗಾಳಿಯ ಪ್ರಭಾವದಿಂದ ಒಣಗುತ್ತದೆ. ಆದರೆ ಸಿಹಿ ಆಲೂಗಡ್ಡೆ ಸೇವನೆ ಮಾಡುವುದರಿಂದ ಒಣ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ.

• ಏಕೆಂದರೆ ಇದು ಸಂಪೂರ್ಣ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ಚರ್ಮದ ಅನೇಕ ಸಮಸ್ಯೆಗಳನ್ನು ಇದು ತೊಡೆದು ಹಾಕುತ್ತದೆ.