ಮನೆ ರಾಜ್ಯ ಬೂತ್ ವಿಜಯ ಅಭಿಯಾನಕ್ಕೆ ಸಚಿವ ಕೆ.ಗೋಪಾಲಯ್ಯ ಚಾಲನೆ

ಬೂತ್ ವಿಜಯ ಅಭಿಯಾನಕ್ಕೆ ಸಚಿವ ಕೆ.ಗೋಪಾಲಯ್ಯ ಚಾಲನೆ

0

ಹಾಸನ(Hassan): ಹೊಸ ವರ್ಷದಲ್ಲಿ ಬೂತ್ ವಿಜಯ ಅಭಿಯಾನವನ್ನು ಇಂದಿನಿಂದ ಪ್ರಾರಂಭಿಸಬೇಕು ಎಂಬುದು ಪಕ್ಷದ ವರಿಷ್ಠರ ಒಂದು ಸೂಚನೆಯಂತೆ ಹಾಸನ ಜಿಲ್ಲೆಯಲ್ಲಿ ಇಂದು ಬೂತ್ ವಿಜಯ ಅಭಿಯಾನವನ್ನು ಆರಂಭಿಸಿದ್ದೇವೆ ಎಂದು ಅಬಕಾರಿ ಸಚಿವರು ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ  ಹಿರಿಸಾವೆಯಲ್ಲಿ ನಡೆದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ಮೇಲೆ ಗ್ರಾಮೀಣ ಪ್ರದೇಶದಲ್ಲಿ ಹೊಸ ಮಾಡುತ್ತಿರುವಂತಹ ಲಕ್ಷಾಂತರ ಕುಟುಂಬಗಳಿಗೆ ರಾಜ್ಯದ 52 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ  ಪ್ರತಿವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರ 10 ಸಾವಿರ ರೂಗಳನ್ನು ನೀಡುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರ ಯಾವ ರೈತರಿಗೂ ಸಹ ಯಾವುದೇ ಹಣವನ್ನು ನೀಡುತ್ತಿರಲಿಲ್ಲ. 13 ಯೋಚನೆಗಳು ಪ್ರತಿ ಮನೆಗಳಿಗೂ ಸಹ ತಲುಪಿದೆ ಎಂದರು.

ಕೊರೋನಾ ಸಂದರ್ಭದಲ್ಲಿ ದೇಶದ ಜನರಿಗೆ ಐದಕ್ಕಿಂತ ಹೆಚ್ಚಿನ ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ ಗೆ ನೀಡಲಾಯಿತು, 32 ಲಕ್ಷ ಕುಟುಂಬಕ್ಕೆ ಗ್ಯಾಸ್ ಸೌಲ್ಯಭ ವನ್ನು ನೀಡಿದ್ದೇವೆ ಎಂದರು.

ಆಯುಷ್ಮನ್ ಆರೋಗ್ಯ ಕಾರ್ಡ್

ನೀಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಆಯುಷ್ಮಾನ್ ಕಾರ್ಡನ್ನು ಮಾಡಿಸದೆ ಇರುವವರು ಮೊದಲು ಆಯುಷ್ಮಾನ್ ಕಾರ್ಡನ್ನು ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಲ ಜೀವನ್ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, 2024ರ ಒಳಗೆ ಪ್ರತಿ ಮನೆಗೆ ಒಂದೊಂದು ನಲ್ಲಿಯನ್ನು ಹಾಕುವಂತಹ ಕಾರ್ಯವಾಗಿದೆ. ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಘೋಷಣೆ ಯಾಗಿದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್, ಶ್ರವಣಬೆಳಗೊಳ ಮಂಡಲ ಅಧ್ಯಕ್ಷರಾದ ರವಿ, ಜಿಲ್ಲಾ ಉಪಾಧ್ಯಕ್ಷರಾದ ಹೇಮಂತ್ ಕುಮಾರ್ , ಚಂದ್ರಕಲಾ, ಬೂತ್ ಅಧ್ಯಕ್ಷರಾದ ಉಮೇಶ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಮಂಡಲ ಪದಾಧಿಕಾರಿಗಳು, ಬೂತ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಮಾಲೆಗಾಂವ್ ಸ್ಫೋಟ: ಪ್ರಕರಣದಿಂದ ಮುಕ್ತಗೊಳಿಸಲು ಸೇನಾಧಿಕಾರಿ ಪುರೋಹಿತ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ಮುಂದಿನ ಲೇಖನಸಿಹಿ ಗೆಣಸು ಆರೋಗ್ಯಕ್ಕೆ ತುಂಬಾ ಲಾಭಕಾರಿ