ಮನೆ ಕಾನೂನು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ತಹಶೀಲ್ದಾರ್ ಜಾಮೀನು ಅರ್ಜಿ  ತಿರಸ್ಕೃತ

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ತಹಶೀಲ್ದಾರ್ ಜಾಮೀನು ಅರ್ಜಿ  ತಿರಸ್ಕೃತ

0

Join Our Whatsapp Group

ಮಂಡ್ಯ: ಕಳೆದ ಜೂನ್ 22ರಂದು ಗ್ರಾಮ ಲೆಕ್ಕಾಧಿಕಾರಿ (ವಿಎ)ಯಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪಾಂಡವಪುರ ತಹಶೀಲ್ದಾರ್ ಕೆ. ಸಿ. ಸೌಮ್ಯ ಹಾಗೂ ಆರ್’ ಐ ಮಾದೇಶ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಶ್ರೀರಂಗಪಟ್ಟಣ 3ನೇ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ

ರಾದ ಗೋಪಾಲಕೃಷ್ಣ ಅವರು ಸೋಮವಾರ ಮಧ್ಯಾಹ್ನ ವಿಚಾರಣೆ ನಡೆಸಿದರು. ತನ್ನ ಅಧೀನ ಸಿಬ್ಬಂದಿಯಿಂದಲೇ 40 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದು ನ್ಯಾಯಾಂಗ ಬಂಧನ ಮುಂದುವರೆದಿದೆ. ಲೋಕಾಯುಕ್ತ ಪರವಾಗಿ ವಕೀಲ ಟಿ. ಎಸ್ .ಸತ್ಯಾನಂದ ವಾದ ಮಂಡಿಸಿದ್ದರು.

ಹಿಂದಿನ ಲೇಖನಜು.9 ಕ್ಕೆ ಚಲುವನಾರಾಯಣ ಸ್ವಾಮಿ ಶ್ರೀಕೃಷ್ಣರಾಜಮುಡಿ ಉತ್ಸವ
ಮುಂದಿನ ಲೇಖನಮಂಗಗಳ ಶವಗಳಿದ್ದ ಟ್ಯಾಂಕ್’ನ ನೀರು ಸೇವಿಸಿದ ಗ್ರಾಮಸ್ಥರು ಅಸ್ವಸ್ಥ